ಧಾರವಾಡ: ‘ರಾಜ್ಯ ಸರ್ಕಾರವು ಕಳೆದ ಎರಡೂವರೆ ವರ್ಷಗಳಲ್ಲಿ 50 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಿದೆ. ಎರಡು ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಆ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ ಪ್ರತಿಕ್ರಿಯಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳಮೀಸಲಾತಿ ವಿಚಾರ, ಸಹಿತ ಕೆಲವು ತಾಂತ್ರಿಕ ಸಮಸ್ಯೆಗಳು ಇವೆ. ತಕರಾರರುಗಳು ಕೋರ್ಟ್ನಲ್ಲಿದೆ. ಸಮಸ್ಯೆ ಇತರ್ಥವಾದ ಬಳಿಕೆ ಹುದ್ದೆಗಳ ನೇಮಕಾತಿಗೆ ಸರ್ಕಾರ ಕ್ರಮ ವಹಿಸಲಿದೆ’ ಎಂದು ಉತ್ತರಿಸಿದರು.

‘ಎಪ್ಸ್ಟೈನ್ ಫೈಲ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಪುರಿ ಅವರಿಗೆ 200 ಮೇಲ್ಗಳು ಸಂಪರ್ಕದಲ್ಲಿದೆ. ಪುರಿ ಅವರು ರಾಜೀನಾಮೆ ನೀಡಬೇಕು. ಪುರಿ ಅವರು ಏನೂ ಆಗಿಲ್ಲ ಎಂದು ಹೇಳಿದ್ದಾರೆ. ತನಗೇನು ಸಂಬಂಧವೇ ಇಲ್ಲ ಎಂದೂ ಹೇಳಿದ್ದಾರೆ’ ಎಂದು ಟೀಕಿಸಿದರು.

‘500 ಬಿಲಿಯನ್ ಡಾಲರ್ ಅಮೆರಿಕ ಒಪ್ಪಂದದಿಂದ ಯಾರಿಗೆ ಅನುಕೂಲವಾಗಲಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಸುಂಕ ಹೆಚ್ಚಿಸಿದ್ದಾರೆ. ಭಾರತದ ಸರಕುಗಳಿಗೆ ಅಮೆರಿಕ ಪ್ರವೇಶಕ್ಕೆ ಶೇ 18 ಸುಂಕ ನಿಗದಿಯಾಗಿದೆ. ಆದರೆ, ಅಮೆರಿಕದ ಸರಕುಗಳಿಗೆ ಭಾರತ ಪ್ರವೇಶಕ್ಕೆ ಸುಂಕವೇ ಇಲ್ಲ’ ಎಂದು ದೂರಿದರು.

‘2014ರಲ್ಲಿ ಭಾರತದಲ್ಲಿ ಬಿಎಸ್ಎನ್ಎಲ್ ಗೋಪುರಗಳು 34 ಸಾವಿರ ಇದ್ದವು. ಆಗ ಬಿಎಸ್ಎನ್ಎಲ್ ಉನ್ನತ ಶ್ರೇಯಾಂಕದಲ್ಲಿತ್ತು. ಈಗ ಬಿಎಸ್ಎನ್ಎಲ್ ಕೊನೆಯ ಶ್ರೇಯಾಂಕದಲ್ಲಿದೆ. ಬಿಎಸ್ಎನ್ಎಲ್ ಈ ಸ್ಥಿತಿಗೆ ತಲುಪಲು ಕಾರಣವೇನು ಎಂದು ಬಿಜೆಪಿಯವರು ಉತ್ತರಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.