ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣಾ ಕಣ: ಕಾಂಗ್ರೆಸ್‌ ಪಕ್ಷದಲ್ಲಿ ಯುವ ಆಕಾಂಕ್ಷಿಗಳ ಕಸರತ್ತು

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿಕೆಯಿಂದ ಪ್ರೇರಣೆ
Published 28 ನವೆಂಬರ್ 2023, 5:31 IST
Last Updated 28 ನವೆಂಬರ್ 2023, 5:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹೊಸ ಮುಖ, ಯುವಕರು, ವಾಕ್ ಚಾತುರ್ಯ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಈಚೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನೀಡಿದ ಹೇಳಿಕೆಯು ಧಾರವಾಡ ಲೋಕಸಭಾ ಕ್ಷೇತ್ರದ ಯುವ ಆಕಾಂಕ್ಷಿಗಳಲ್ಲಿ ಆಶಾಕಿರಣ ಮೂಡಿಸಿದೆ.

ಧಾರವಾಡ ಕ್ಷೇತ್ರದ ವೀಕ್ಷಕಿ, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಸದ್ಯದಲ್ಲೇ ಸಭೆ ನಡೆಸಿ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಕೆಪಿಸಿಸಿಗೆ ಕಳುಹಿಸಿಕೊಡುವುದಾಗಿ ಹೇಳಿರುವುದು ಆಕಾಂಕ್ಷಿಗಳಲ್ಲಿ ಇನ್ನಷ್ಟು ಬಲತುಂಬಿದೆ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಕಾಂಗ್ರೆಸ್‌ನಲ್ಲಿ, ಹಿಂದಿಗಿಂತಲೂ ಈ ಸಲ ಹೆಚ್ಚಿನ ಸಂಖ್ಯೆಯಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಯುವಕರು ಮುಂದೆ ಬಂದಿದ್ದಾರೆ.

ಧಾರವಾಡ ಜಿಲ್ಲಾ(ಗ್ರಾಮೀಣ) ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಾಕೀರ್‌ ಸನದಿ, ವಿದ್ಯಾನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಜತ್‌ ಉಳ್ಳಾಗಡ್ಡಿಮಠ, ವಿನೋದ ಅಸೂಟಿ, ರಾಜಶೇಖರ ಮೆಣಸಿನಕಾಯಿ, ಮಾಜಿ ಸಂಸದ ಡಿ.ಕೆ. ನಾಯ್ಕರ್‌ ಅವರ ಪುತ್ರ ಲೋಹಿತ ನಾಯ್ಕರ್‌, ಶರಣಪ್ಪ ಎಂ.ಕೊಟಗಿ ಉತ್ಸುಕತೆ ತೋರಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಭ್ಯರ್ಥಿಗಳ ಸಾಮರ್ಥ್ಯ: ಒಬ್ಬೊಬ್ಬ ಅಭ್ಯರ್ಥಿಯ ಸಾಮರ್ಥ್ಯ ಒಂದೊಂದು ರೀತಿ ಇದೆ. ಅನಿಲಕುಮಾರ ಪಾಟೀಲ ಅವರು ಈ ಹಿಂದೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದಲ್ಲದೇ, ಜಿಲ್ಲಾ (ಗ್ರಾಮೀಣ) ಘಟಕದ ಅಧ್ಯಕ್ಷರಾದವರು. ಇದು ಅವರಿಗೆ ಸಂಘಟನಾತ್ಮಕ ವಾಗಿಯೂ ಬಲತುಂಬಿದೆ.

ಮೂರು ಬಾರಿ ಸಂಸದರಾಗಿದ್ದ ಪ್ರೊ.ಐ.ಜಿ. ಸನದಿ ಅವರ ಪುತ್ರ ಶಾಕೀರ್‌ ಸನದಿ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆಗಿ ರುವ ಅವರಿಗೆ ದೆಹಲಿಯ ಹೈಕ ಮಾಂಡ್‌ ಜೊತೆ ನಂಟು ಇದೆ. ರಾಷ್ಟ್ರ ರಾಜಕಾರಣದಲ್ಲಿ ವಿಶೇಷ ಆಸಕ್ತಿಯೂ ಅವರಿಗಿದೆ.

ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಾನೂ ಆಕಾಂಕ್ಷಿ. ಈ ಬಗ್ಗೆ ಪಕ್ಷದ ಹಿರಿಯರಿಗೆ ತಿಳಿಸಿರುವೆ. ನನ್ನಂತೆ ಹಲವು ನಾಯಕರು ಟಿಕೆಟ್‌ ಬಯಸಿದ್ದಾರೆ. ಅಂತಿಮ ತೀರ್ಮಾನ ಹೈಕಮಾಂಡ್‌ನದ್ದು
ಅನಿಲಕುಮಾರ್‌ ಪಾಟೀಲ, ಧಾರವಾಡ ಜಿಲ್ಲಾ (ಗ್ರಾಮೀಣ) ಕಾಂಗ್ರೆಸ್‌ ಅಧ್ಯಕ್ಷ

ವಿದ್ಯಾನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಜತ್‌ ಉಳ್ಳಾಗಡ್ಡಿಮಠ ಅವರು ಆಸಕ್ತಿಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಲವು ವಿಷಯಗಳನ್ನು ಎತ್ತಿಕೊಂಡು ಬಿಜೆಪಿ ವಿರುದ್ಧ ತೀವ್ರ ಹೋರಾಟ ನಡೆಸಿದ್ದರು. ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಅಳಿಯ ಆಗಿರುವುದು ವಿಶೇಷ.

ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷರಾದ ವಿನೋದ ಅಸೂಟಿ ಅವರೂ ರೇಸ್‌ನಲ್ಲಿದ್ದಾರೆ. ಅವರು ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ನವಲಗುಂದ ಕ್ಷೇತ್ರದ ಆಕಾಂಕ್ಷಿ ಯಾಗಿದ್ದರು. ಪಕ್ಷದ ಹಿರಿಯ ನಾಯಕರ ಸೂಚನೆಯ ಮೇರೆಗೆ ಹಿಂದೆ ಸರಿದು, ಪಕ್ಷದ ಅಭ್ಯರ್ಥಿ ಎನ್‌.ಎಚ್‌. ಕೋನರಡ್ಡಿ ಪರ ಕೆಲಸ ಮಾಡಿದ್ದರು. ಅವರ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಇನ್ನುಳಿದಂತೆ ಪಕ್ಷದ ಮುಖಂಡ ರಾದ ರಾಜಶೇಖರ ಮೆಣಸಿನಕಾಯಿ, ಮಾಜಿ ಸಂಸದ ಡಿ.ಕೆ. ನಾಯ್ಕರ್‌ ಅವರ ಪುತ್ರ ಲೋಹಿತ ನಾಯ್ಕರ್‌, ಶರಣಪ್ಪ ಎಂ.ಕೊಟಗಿ ಅವರ ಹೆಸರುಗಳು ಕೂಡ ಕೇಳಿಬಂದಿವೆ.

ಹೊಸಬರ ಪಟ್ಟಿ

l ಅನಿಲಕುಮಾರ ಪಾಟೀಲ

l ಶಾಕಿರ ಸನದಿ

l ರಜತ ಉಳ್ಳಾಗಡ್ಡಿಮಠ

l ವಿನೋದ ಅಸೂಟಿ

lರಾಜಶೇಖರ ಮೆಣಸಿನಕಾಯಿ

l ಲೋಹಿತ ನಾಯ್ಕರ

l ಶರಣಪ್ಪ ಎಂ.ಕೊಟಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT