ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರಿಗೆ ಭದ್ರತೆ ಕಲ್ಪಿಸಿ: ಬಹುತ್ವ ಕರ್ನಾಟಕ ಸತ್ಯಶೋಧನಾ ತಂಡದ ಸದಸ್ಯರ ಆಗ್ರಹ

Last Updated 28 ಜನವರಿ 2022, 12:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗದಗ ಜಿಲ್ಲೆ ನರಗುಂದದಲ್ಲಿ ಥಳಿತಕ್ಕೊಳಕ್ಕಾಗಿ ಮೃತಪಟ್ಟ ಸಮೀರ್ ಶಹಾಪುರ ಘಟನೆ ಬಳಿಕ ಅಲ್ಲಿನ ಮುಸ್ಲಿಮರು ಭಯದ ವಾತಾವರಣದಲ್ಲಿ ಬದುಕುವಂತಾಗಿದ್ದು, ಅವರಿಗೆ ಭದ್ರತೆ ಕಲ್ಪಿಸಬೇಕು ಎಂದು ಬಹುತ್ವ ಕರ್ನಾಟಕ ಸತ್ಯಶೋಧನಾ ತಂಡದ ಸದಸ್ಯರು ಆಗ್ರಹಿಸಿದರು.

ತಂಡದ ಸದಸ್ಯರಾದ ಸಿದ್ದಾರ್ಥ ಜೋಶಿ, ಆಕಾಶ ಭಟ್ಟಾಚಾರ್ಯ, ಮೊಹಮ್ಮದ್‌ ಇರ್ಷಾದ್‌ ಮತ್ತು ಶೇಕ್‌ ಜಾಕೀರ್‌ ಹುಸೇನ್‌ ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ನರಗುಂದದ ಘಟನೆಯ ಬಗ್ಗೆ ಪೊಲೀಸ್ ಅಧಿಕಾರಿಗಳು, ಪತ್ರಕರ್ತರು, ಸಾರ್ವಜನಿಕರು ಹೀಗೆ ಎಲ್ಲರಿಂದ ಮಾಹಿತಿ ಸಂಗ್ರಹಿಸಿ ನಾವು ವರದಿ ತಯಾರಿಸಿದ್ದೇವೆ. ಸಮೀರ್ ಹತ್ಯೆ ಮತ್ತು ಅಂದು ನಡೆದ ಶಂಶೀರ್‌ ಮೇಲಿನ ದಾಳಿಯ ಹಿಂದಿನ ಘಟನೆಗಳ ಬಗ್ಗೆ ನ್ಯಾಯಯುತವಾಗಿ ಮುಕ್ತ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

’ಹಿಂಸಾಚಾರಕ್ಕೆ ಪ್ರಚೋದಿಸುವ ದ್ವೇಷ ಭಾಷಣಗಳನ್ನು ಮಾಡುವವರ ಮೇಲೆ ಪೊಲೀಸರು ಕಠಿಣಕ್ರಮ ಜರುಗಿಸಬೇಕು. ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ಸರಣಿ ಸುಗಮಗೊಳಿಸಿದ ಸಂಘಟನೆಗಳ ವಿರುದ್ಧ ತನಿಖೆ ಕೈಗೊಳ್ಳಬೇಕು. ಆಪರಾಧಿಗಳಿಗೆ ರಾಜಕೀಯ ವ್ಯಕ್ತಿಗಳು ರಕ್ಷಣೆ ನೀಡುವುದನ್ನು ನಿಲ್ಲಿಸಬೇಕು. ಸಮೀರ್ ಮತ್ತು ಶಂಶೀರ್ ಕುಟುಂಬಕ್ಕೆ ಪೊಲೀಸ‌ರು ರಕ್ಷಣೆ ಒದಗಿಸಬೇಕು. ನರಗುಂದದಲ್ಲಿ ತನ್ನ ವೃತ್ತಿಯನ್ನು ಪುನರಾರಂಭಿಸಲು ಶಂಶೀರ್‌ಗೆ ಸ್ಥಳೀಯ ಆಡಳಿತ ವ್ಯವಸ್ಥೆ ನೆರವಾಗಬೇಕು’ ಎಂದರು.

’ಕೂಲಿ ದುಡಿಮೆ ಮೇಲೆ ಅವಲಂಬಿತವಾಗಿದ್ದ ಸಮೀರ್ ಮೃತವಾದ ನಂತರ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು, ಅವರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆಗಳು ಮತ್ತು ಮಹಿಳೆಯರಿಗೆ ಭದ್ರತೆ ಕಲ್ಪಿಸಬೇಕು’ ಎಂದರು.

‘ಅಂದಿನ ಘಟನೆಯಲ್ಲಿ ಭಾಗಿಯಾದ ಆರೋಪ ಹೊತ್ತವರ ಜೊತೆ ಆರ್‌ಎಸ್‌ಎಸ್‌ ಮತ್ತು ಬಜರಂಗದಳದ ಮುಖಂಡರು ನಂಟು ಹೊಂದಿರುವ ಆರೋಪವಿದೆ. ಪೊಲೀಸರು ಬಜರಂಗದಳದ ಸದಸ್ಯರನ್ನೂ ಬಂಧಿಸಿದ್ದಾರೆ. ಆದರೆ, ಈಗಲೂ ಮೃತ ವ್ಯಕ್ತಿಯ ಕುಟುಂಬಕ್ಕೆ ನ್ಯಾಯ ಒದಗಿಸಿಲ್ಲ. ಇದೆಲ್ಲವನ್ನೂ ನೋಡಿದರೆ ರಾಜ್ಯದಲ್ಲಿ ಆಡಳಿತ‌ ವ್ಯವಸ್ಥೆ ನಿಷ್ಕ್ರಿಯತೆಗೆ ಜಾರಿದೆ ಎನ್ನುವುದು ಖಾತ್ರಿಯಾಗುತ್ತಿದೆ. ಕಾನೂನು ಮತ್ತು ಸಂವಿಧಾನವನ್ನು ಸಂಪೂರ್ಣವಾಗಿ ಅವಹೇಳನ ಮಾಡುವ ಸಂಘಪರಿವಾರಕ್ಕೆ ಉತ್ತೇಜನ ನೀಡುವಂತಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT