ಮಂಗಳವಾರ, ಅಕ್ಟೋಬರ್ 20, 2020
21 °C

ಮುನೇನಕೊಪ್ಪ ಚೇತರಿಕೆಗೆ ಪ್ರಾರ್ಥನೆ: ಮಂಡಿಯಲ್ಲಿ ಮೆಟ್ಟಿಲೇರಿದ ಅಭಿಮಾನಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೋವಿಡ್ –19 ದೃಢಪಟ್ಟಿರುವ ನವಲಗುಂದ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ, ಅವರ ಅಭಿಮಾನಿಗಳು ಗುರುವಾರ ನಗರದ ಶಿರಡಿನಗರದಲ್ಲಿರುವ ಸಾಯಿಬಾಬಾ ಮಂದಿರದ ಮೆಟ್ಟಿಲುಗಳನ್ನು ಮಂಡಿಗಾಲಿನಲ್ಲಿ ಏರಿದರು.

ಅಭಿಮಾನಿಗಳಾದ ಮಂಜುನಾಥ ಹೆಬಸೂರ, ವಿಜಯಕಾಂತ ನಿಡವಣಿ, ಶಂಕರಗೌಡ ಪಾಟೀಲ, ಸಂತೋಷ ಹಿರೇಮಠ, ಅಣ್ಣಪ್ಪ, ದ್ಯಾಮಣಗೌಡ, ಕಿರಣ ಮಂಡಿಯಲ್ಲೇ ಮೆಟ್ಟಿಲುಗಳನ್ನು ಏರಿದರು. ಬಳಿಕ ಬಾಬಾಗೆ ವಿಶೇಷ ಪೂಜೆ ಸಲ್ಲಿಸಿ, ತಮ್ಮ ನೆಚ್ಚಿನ ನಾಯಕ ಕೋವಿಡ್‌ನಿಂದ ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದರು.

ಮುನೇನಕೊಪ್ಪ ಅವರಿಗೆ ಸೆ. 30ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಕುರಿತು ಅವರು, ಟ್ವೀಟ್ ಮಾಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.