ಧಾರವಾಡ: ಕೊಲೆಯಾದ ನೇಹಾ ಮತ್ತು ಫಯಾಜ್ ಫೋಟೊ, ‘ನೇಹಾ–ಫಯಾಜ್ ಟ್ರೂ ಲವ್ ಜಸ್ಟಿಸ್ ಫಾರ್ ತರ್ ಲವ್’ ಸಂದೇಶವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಪ್ರಕರಣದಲ್ಲಿ ನಗರದ ಗೌಳಿಗಲ್ಲಿಯ ಸಾಧಿಕ್ ಇಮಾಮ್‌ಸಾಬ್ ತಡಕೊಡ ಎಂಬಾತನನ್ನು ಪೊಲೀಸರು ಬಂಧಿಸಿದ್ಧಾರೆ.
ನೇಹಾ ಮತ್ತು ಫಯಾಜ್ ಫೋಟೊ, ‘ನೇಹಾ–ಫಯಾಜ್ ಟ್ರೂ ಲವ್ ಜಸ್ಟಿಸ್ ಫಾರ್ ಲವ್’ ಸಂದೇಶವನ್ನು ಸಾಧಿಕ್ ತನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿಕೊಂಡಿರುವುದಾಗಿ ಗುರುಶಾಂತಯ್ಯ ಹಿರೇಮಠ ಅವರು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.