ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಹಾ ಕೊಲೆ ಪ್ರಕರಣ: ಸಹಿ ಸಂಗ್ರಹ ಅಭಿಯಾನ

Published 24 ಏಪ್ರಿಲ್ 2024, 8:06 IST
Last Updated 24 ಏಪ್ರಿಲ್ 2024, 8:06 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣದ ಪ್ರಾಮಾಣಿಕ ತನಿಖೆಗೆ ಸಿಐಡಿಯಿಂದ ಸಿಬಿಐಗೆ ಹಸ್ತಾಂತರಿಸಬೇಕು ಎಂದು ಆಹ್ರಹಿಸಿ ಶ್ರೀ ಗಜಾನನ ಮಹಾಮಂಡಳದ ಸದಸ್ಯರು ನಗರದ ದುರ್ಗದ ಬೈಲ್‌ನಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಿದರು.

ಮಹಾಮಂಡಳದ ಅಧ್ಯಕ್ಷ ಡಿ. ಗೋವಿದರಾವ್ ನೇತೃತ್ವದಲ್ಲಿ ಹಾಗೂ ಅಕ್ಕಿಹೊಂಡದ ಚಂದ್ರಶೇಖರ ಸ್ವಾಮೀಜಿ ಸಮ್ಮುಖದಲ್ಲಿ ಸಂವಿಧಾನ ಸುರಕ್ಷತಾ ಸಮಿತಿ ಸದಸ್ಯರು ಸಹ ಪಾಲ್ಗೊಂಡು, ಸಿಐಡಿ ತನಿಖೆಯಲ್ಲಿ ನ್ಯಾಯ ಸಿಗುವ ಭರವಸೆಯಿಲ್ಲ. ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದರೆ ಸಿಬಿಐಗೆ ವಹಿಸಲೇಬೇಕು ಎಂದು ಆಗ್ರಹಿಸಿದರು.

ಕೆಲವರು ಪ್ರತಿಭಟನೆ ನಡೆಸಿ ಲವ್ ಜಿಹಾದ್ ಎಂದು ಆರೋಪಿಸಿದ್ದಾರೆ. ನೇಹಾಳನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆ. ತಪ್ಪಿತಸ್ಥ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಬೇಕು. ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು‌.

ಅನ್ವರ್ ಮುಧೋಳ, ಅಶ್ರಫ್ ಅಲಿ, ಬಶೀರ್ ಅಹ್ಮದ್, ಗಜಾನನ ಎರಕಲ್, ಮುತ್ತಣ್ಣ ಶಿವಳ್ಳಿ ಮಜಹರ್ ಖಾನ್, ಹನುಮಂತ ಬಂಕಾಪುರ, ಅಬ್ದುಲ್ ವಹಾಬ್‌ಮುಲ್ಲಾ, ಲಿಂಗಪ್ಪ ಮೊರಬದ, ಬಾಬಾಜಾನ್ ಮುಧೋಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT