ಗುರುವಾರ , ನವೆಂಬರ್ 21, 2019
24 °C

ಭಯೋತ್ಪಾದನಾ ನಿಗ್ರಹ ದಳದಲ್ಲಿ ಶಸ್ತ್ರಾಸ್ತ್ರ, ಸಿಬ್ಬಂದಿ ಕೊರತೆ ಇಲ್ಲ: ಬೊಮ್ಮಾಯಿ

Published:
Updated:

ಹುಬ್ಬಳ್ಳಿ: ‘ಭಯೋತ್ಪಾದನಾ ನಿಗ್ರಹ ದಳದಲ್ಲಿ (ಎಟಿಎಸ್‌) ಶಸ್ತ್ರಾಸ್ತ್ರ ಹಾಗೂ ಸಿಬ್ಬಂದಿ ಕೊರತೆ ಇಲ್ಲ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಟಿಎಸ್‌ ಬಲಪಡಿಸಲು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಜತೆಗೆ, ಸಮರ್ಥ ಹಾಗೂ ಅನುಭವಿ ಅಧಿಕಾರಿಗಳ ಪಡೆಯನ್ನು ನಿಯೋಜಿಸಲಾಗುವುದು’ ಎಂದರು.

‘ರಾಜ್ಯದಲ್ಲಿ ಈಗಾಗಲೇ ಎಟಿಎಸ್ ಇದೆ. ಆದರೆ, ಬೃಹತ್ ಆಗಿ ಬೆಳೆದಿರುವ ಬೆಂಗಳೂರು ಉಗ್ರ ಚಟುವಟಿಕೆಯ ತಾಣವಾಗುತ್ತಿರುವುದರಿಂದ ಅಲ್ಲಿಗೆ ಪ್ರತ್ಯೇಕ ಎಟಿಎಸ್ ರಚನೆಗೆ ಚಾಲನೆ ನೀಡಿದ್ದೇವೆ. ಹುಬ್ಬಳ್ಳಿ–ಧಾರವಾಡ, ಬೆಳಗಾವಿ ಸೇರಿದಂತೆ ಇತರೆಡೆ ನಡೆದಿದ್ದ ಉಗ್ರ ಚಟುವಟಿಕೆಗಳ ಬಗ್ಗೆಯೂ ಗಮನವಿಟ್ಟುಕೊಂಡು ಎಟಿಎಸ್‌ ಅನ್ನು ಬಲಪಡಿಸಲಾಗುವುದು’ ಎಂದು ಹೇಳಿದರು.

ಧಾರವಾಡ ಎಸ್ಪಿಯಾಗಿದ್ದ ವರ್ತಿಕಾ ಕಟಿಯಾರ್ ಅವರನ್ನು ಎರಡು ವಾರದಲ್ಲೇ ವರ್ಗಾವಣೆ ಮಾಡಿದ್ದರ ಕುರಿತು ಪ್ರತಿಕ್ರಿಯಿಸಿದ ಅವರು, ‘ಆ ವಿಷಯ ಕೆಎಟಿಯಲ್ಲಿದ್ದು, ಶೀಘ್ರ ಇತ್ಯರ್ಥಗೊಳ್ಳಲಿದೆ’ ಎಂದರು.

ಪ್ರತಿಕ್ರಿಯಿಸಿ (+)