ಕಲಘಟಗಿ: ಬಿಜೆಪಿ ಸದಸ್ಯತ್ವ ಅಭಿಯಾನದ ಅಂಗವಾಗಿ ತಾಲ್ಲೂಕಿನ ಉಗ್ಗಿನಕೇರಿ ಗ್ರಾಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ವಿವಿಧೆಡೆ ಸಂಚರಿಸಿ ಹಲವರ ಸದಸತ್ವ ನೋಂದಣಿ ಮಾಡಿಸಿದರು.
ಬಸ್ ನಿಲ್ದಾಣ, ಹರಿಜನ ಕೇರಿ, ಕುರುವಿನಕೊಪ್ಪ ರಸ್ತೆಯಲ್ಲಿ ಸಂಚರಿಸಿ, ಜನರ ಕುಶಲೋಪರಿ ವಿಚಾರಿಸಿದರು. ಸ್ವತಃ ತಾವೇ ಬಿಜೆಪಿ ಧ್ಯೇಯ–ಉದ್ದೇಶಗಳ ಬಗ್ಗೆ ವಿವರಿಸಿ ಸದಸ್ಯತ್ವ ನೋಂದಣಿ ಮಾಡಿಸಿದರು.
‘ಭಾರತೀಯ ಜನತಾ ಪಕ್ಷ ವಿಶ್ವದಲ್ಲೇ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ. ಎಲ್ಲಡೆ ಬಿಜೆಪಿ ಸೇರಲು ಜನರು ಉತ್ಸುಕರಾಗಿದ್ದಾರೆ. ಬಿಜೆಪಿ ಕಾರ್ಯಕರ್ತರು ಜನರ ಬಳಿ ಹೋಗಿ ಹೆಚ್ಚು ನೋಂದಣಿ ಮಾಡಿಸಬೇಕು’ ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮುಖಂಡರಾದ ಶಶಿಧರ ನಿಂಬಣ್ಣವರ, ಐ.ಸಿ. ಗೋಕುಲ, ಅಣ್ಣಪ್ಪ ಓಲೇಕಾರ, ಫಕ್ಕೀರೇಶ ನೇಸರೇಕರ, ಪುಂಡಲೀಕ ಜಾಧವ, ಆನಂದ ಕಡ್ಲಾಸ್ಕರ, ರವಿ ಅಲ್ಲಾಪುರ ಇದ್ದರು.