ಪ್ರಜಾವಾಣಿ ಮುದ್ರಣಾಲಯಕ್ಕೆ ಉದ್ಯಾನ ಚಾಂಪಿಯನ್

7
ಹುಬ್ಬಳ್ಳಿ ಧಾರವಾಡ ಅವಳಿ ನಗರದ ಫಲಪುಷ್ಪ ಪ್ರದರ್ಶನದ ಫಲಿತಾಂಶ

ಪ್ರಜಾವಾಣಿ ಮುದ್ರಣಾಲಯಕ್ಕೆ ಉದ್ಯಾನ ಚಾಂಪಿಯನ್

Published:
Updated:
Deccan Herald

ಧಾರವಾಡ: ತೋಟಗಾರಿಕೆ ಇಲಾಖೆ ಆಯೋಜಿಸುವ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಫಲಪುಷ್ಪ ಪ್ರದರ್ಶನದಲ್ಲಿ ಕಾರ್ಖಾನೆ ದೊಡ್ಡ ಉದ್ಯಾನದ ವಿಭಾಗದಲ್ಲಿ ಇಲ್ಲಿನ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್ ಪತ್ರಿಕಾ ಬಳಗದ ಮುದ್ರಣಾಲಯಕ್ಕೆ ಚಾಂಪಿಯನ್ ಪಟ್ಟ ಲಭಿಸಿದೆ.

ಹಾಗೆಯೇ ಸಾರ್ವಜನಿಕ ಚಿಕ್ಕ ಉದ್ಯಾನ ವಿಭಾಗದಲ್ಲಿ ಧಾರವಾಡದ ಪಾಲಿಕೆ ಮುಖ್ಯ ಕಚೇರಿ, ಸಾರ್ವಜನಿಕ ಮಧ್ಯಮ ಉದ್ಯಾನ ವಿಭಾಗದಲ್ಲಿ ಹುಬ್ಬಳ್ಳಿಯ ಪಾಲಿಕೆ ವ್ಯಾಪ್ತಿಯ ಲಿಂಗರಾಜನಗರ ಉದ್ಯಾನ, ಸಾರ್ವಜನಿಕ ದೊಡ್ಡ ಉದ್ಯಾನ ವಿಭಾಗದಲ್ಲಿ ಪಾಲಿಕೆ ಒಡೆತನದ ಧಾರವಾಡದ ಆಜಾದ್ ಪಾರ್ಕ್‌ ಚಾಂಪಿಯನ್ ಪಟ್ಟ ಪಡೆದಿವೆ.

ಸರ್ಕಾರಿ ಸಂಸ್ಥೆ ಚಿಕ್ಕ ಉದ್ಯಾನ ವಿಭಾಗದಲ್ಲಿ ಕರ್ನಾಟಕ ವಿಕಾಸ ಬ್ಯಾಂಕ್‌ನ ಪ್ರಧಾನ ಕಚೇರಿ, ಖಾಸಗಿ ಸಂಸ್ಥೆ ಚಿಕ್ಕ ಉದ್ಯಾನದಲ್ಲಿ ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಪಿ.ಸಿ.ಜಬಿನ್‌ ಕಾಲೇಜು, ಸರ್ಕಾರಿ ಸಂಸ್ಥೆ ದೊಡ್ಡ ಉದ್ಯಾನದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಮುಖ್ಯ ಕಚೇರಿ, ಖಾಸಗಿ ಸಂಸ್ಥೆ ಮಧ್ಯಮ ವಿಭಾಗದಲ್ಲಿ ಎಸ್‌ಡಿಎಂ ದಂತವೈದ್ಯಕೀಯ ಕಾಲೇಜು, ಖಾಸಗಿ ಸಂಸ್ಥೆ ದೊಡ್ಡ ಉದ್ಯಾನದಲ್ಲಿ ಸತ್ತೂರಿನ ಎಸ್‌ಡಿಎಂ ವೈದ್ಯಕೀಯ ಕಾಲೇಜು ಚಾಂಪಿಯನ್‌ಗಳಾಗಿವೆ.

ಕಾರ್ಖಾನೆ ಚಿಕ್ಕ ಉದ್ಯಾನದಲ್ಲಿ ಪೆಪ್ಸಿ ಕಂಪೆನಿ, ಇದೇ ವಿಭಾಗದ ಮಧ್ಯಮ ಉದ್ಯಾನ ವಿಭಾಗದಲ್ಲಿ ಸ್ಕೈಟೆಕ್ ಎಂಜಿನಿಯರಿಂಗ್‌, ಸರ್ಕಾರಿ ಬಂಗಲೆ ವಿಭಾಗದಲ್ಲಿ ಕೇಶ್ವಾಪುರದ ರೈಲ್ವೇ ವಿಭಾಗೀಯ ವ್ಯವಸ್ಥಾಪಕರ ಬಂಗ್ಲೆ, ಖಾಸಗಿ ಸಂಸ್ಥೆ ಬೆಂಗ್ಲೆ ವಿಭಾಗದಲ್ಲಿ ಎಸ್‌ಡಿಎಂ ದಂತವೈದ್ಯಕೀಯ ಕಾಲೇಜು, ಖಾಸಗಿ ಮನೆ ಆವರಣದ ಉದ್ಯಾನದಲ್ಲಿ ಸಾರಸ್ವತಪುರದ ಗಿರೀಶ ಬಣವಿ ಅವರ ನಿವಾಸ, ಔಷಧ ವನ ವಿಭಾಗದಲ್ಲಿ ಹುಬ್ಬಳ್ಳಿಯ ಪಿ.ಸಿ.ಜಬಿನ್ ಕಾಲೇಜು, ಕ್ಯಾಕ್ಟಸ್ ವಿಭಾಗದಲ್ಲಿ ಧಾರವಾಡದ ಜಮಖಂಡಿ ಮಠ ಬಡಾವಣೆಯ ಪಂಡಿತ್ ಮುಂಜಿ ನಿವಾಸ ಚಾಂಪಿಯನ್ ಬಹುಮಾನ ಪಡೆದಿವೆ.

ಗುಲಾಬಿ, ಡೇಲಿಯಾ ವನ ವಿಭಾಗದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ, ಹುಲ್ಲು ಹಾಸಿಗೆ ಹುಬ್ಬಳ್ಳಿಯ ಪಾಲಿಕೆ ಕಚೇರಿ, ಖಾಸಗಿ ಮನೆ ತರಕಾರಿ ತೋಟ ವಿಭಾಗದಲ್ಲಿ ಹುಬ್ಬಳ್ಳಿಯ ಶಿರೂರು ಪಾರ್ಕ್‌ನ ಡಾ. ಸುಜಾತಾ ಗಿರಿಯನ್, ಗೋಕುಲ ರಸ್ತೆಯ ಮಹಾಲಕ್ಷ್ಮಿ ಬಡಾವಣೆಯ ಪ್ರೇಮಲತಾ ಎಂ.ಪಾಟೀಲ್, ಖಾಸಗಿ ಮನೆ ಮೇಲ್ಛಾವಣಿ ತೋಟ ವಿಭಾಗದಲ್ಲಿ ಶಾಂತಿನಗರ ಬೆಂಗೇರಿಯ ಎ. ಜಾನಕಿರಾಮ, ಒಳಾಂಗಣ ತೋಟದಲ್ಲಿ ಎಸ್‌ಡಿಎಂ ವೈದ್ಯಕೀಯ ಕಾಲೇಜು ಚಾಂಪಿಯನ್ ಪಟ್ಟ ಪಡೆದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !