ಗುರುವಾರ , ನವೆಂಬರ್ 21, 2019
21 °C

ವಾಣಿಜ್ಯನಗರಿಗೆ ಮಳೆಯ ಸಿಂಚನ

Published:
Updated:
Prajavani

ಹುಬ್ಬಳ್ಳಿ: ಬೆಳಿಗ್ಗೆಯಿಂದ ಬಿಸಿಲ ಧಗೆಯಿಂದ ಬಸವಳಿದ್ದಿದ ವಾಣಿಜ್ಯನಗರಿ ಹುಬ್ಬಳ್ಳಿಗೆ, ಸೋಮವಾರ ಸಂಜೆ ಮಳೆರಾಯ ತಂಪನ್ನೆರೆದ. ವರುಣನ ದಿಢೀರ್ ಆಗಮನದಿಂದ ಪ್ರಯಾಣಿಕರು ವಿಧಿ ಇಲ್ಲದೆ  ನೆನೆಯಬೇಕಾಯಿತು.

ಸಂಜೆಯ 5.15ರ ಹೊತ್ತಿಗೆ ಆರಂಭವಾದ ಮಳೆ 25 ನಿಮಿಷ ಸುರಿಯಿತು. ಹೊಸೂರು ವೃತ್ತ, ಚನ್ನಮ್ಮನ ವೃತ್ತ, ಕಾಟನ್ ಮಾರ್ಕೆಟ್, ವಿದ್ಯಾನಗರ, ದೇಶಪಾಂಡೆ ನಗರ, ದುರ್ಗದ ಬೈಲ್, ಮೇದಾರ ಓಣಿ ಸೇರಿದಂತೆ ಕೆಲವೆಡೆ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಯಿತು. ಎಂದಿನಂತೆ ಬಿಆರ್‌ಟಿಎಸ್‌ ರಸ್ತೆ ತಗ್ಗು ಪ್ರದೇಶಗಳಲ್ಲಿ ಹಳ್ಳವಾಗಿ ಮಾರ್ಪಟ್ಟಿತು.

ಪ್ರತಿಕ್ರಿಯಿಸಿ (+)