ಹಬೀಬ್‌ಗಂಜ್‌–ಧಾರವಾಡ ಮಧ್ಯೆ ವಿಶೇಷ ರೈಲು

7

ಹಬೀಬ್‌ಗಂಜ್‌–ಧಾರವಾಡ ಮಧ್ಯೆ ವಿಶೇಷ ರೈಲು

Published:
Updated:

ಹುಬ್ಬಳ್ಳಿ: ರಜೆ ಅವಧಿಯಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣಿಯನ್ನು ನಿವಾರಿಸಲು ನೈರುತ್ಯ ರೈಲ್ವೆಯು ಮಧ್ಯಪ್ರದೇಶದ ಹಬೀಬ್‌ ಗಂಜ್‌ನಿಂದ ಧಾರವಾಡ ಮಧ್ಯೆ ಅಕ್ಟೋಬರ್‌ 12ರಿಂದ ಡಿಸೆಂಬರ್‌ 28ರವರೆಗೆ ವಿಶೇಷ ವಾರದ ಎಕ್ಸ್‌ಪ್ರೆಸ್‌ ರೈಲನ್ನು ಓಡಿಸಲಿದೆ.

ಈ ರೈಲಿಗೆ ಮುಂಗಡ ಕಾಯ್ದಿರಿಸುವ ಎಲ್ಲ ಸೀಟುಗಳಿಗೆ ತತ್ಕಾಲ್‌ ದರವನ್ನು ಆಕರಿಸಲಾಗುತ್ತದೆ.

ಪ್ರತಿ ಶುಕ್ರವಾರ ಹಬೀಬ್‌ಗಂಜ್‌ನಿಂದ ಸಂಜೆ 5ಕ್ಕೆ ರೈಲು (01664) ಹೊಸಂಗಾಬಾದ್‌, ಇಟಾರ್ಸಿ, ಖಂಡ್ವಾ, ಭೂಸಾವಳ್‌, ಮನಮಾಡ್‌, ಕೋಪರಗಾಂವ್‌, ಅಹ್ಮದ್‌ನಗರ, ದೌಂಡ್‌, ಪುಣೆ, ಸಾತಾರಾ, ಕರಾಡ್‌, ಸಾಂಗ್ಲಿ, ಮಿರಜ್‌, ಘಟಪ್ರಭಾ, ಬೆಳಗಾವಿ, ಖಾನಾಪುರ, ಲೋಂಡಾ ಮೂಲಕ ಶನಿವಾರ ಸಂಜೆ 6.08ಕ್ಕೆ ಧಾರವಾಡ ತಲುಪಲಿದೆ. 

ಪ್ರತಿ ಶನಿವಾರ ಧಾರವಾಡದಿಂದ (01663) ರಾತ್ರಿ 10.50ಕ್ಕೆ ಹೊರಡುವ ರೈಲು ಸೋಮವಾರ ಬೆಳಗಿನ ಜಾವ 2.52ಕ್ಕೆ ಹಬೀಬ್‌ಗಂಜ್‌ ತಲುಪಲಿದೆ.

ರೈಲಿನಲ್ಲಿ ಎರಡು ಎ.ಸಿ. ತ್ರಿಟಯರ್‌, 10 ದ್ವಿತೀಯ ದರ್ಜೆ ಸ್ಲೀಪರ್ ಬೋಗಿಗಳು, ನಾಲ್ಕು ಜನರಲ್‌ ಬೋಗಿಗಳು ಹಾಗೂ ಎರಡು ಲಗೇಜ್ ಕಂ ಬ್ರೆಕ್ ವ್ಯಾನ್‌ಗಳು ಇರಲಿವೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !