ಭಾನುವಾರ, ಏಪ್ರಿಲ್ 11, 2021
27 °C

ಜಾತ್ರೆ ಅಂಗವಾಗಿ 6ರಿಂದ ವಿಶೇಷ ರೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೊಟ್ಟೂರಿನ ಕೊಟ್ಟೂರೇಶ್ವರ ಸ್ವಾಮಿ ಜಾತ್ರೆಯ ಅಂಗವಾಗಿ ಮಾ. 6ರಿಂದ ಮೂರು ದಿನ ಹೊಸಪೇಟೆ–ದಾವಣಗೆರೆ ಎರಡೂ ಮಾರ್ಗಗಳಿಂದ ವಿಶೇಷ ರೈಲು ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

6ರಂದು ಬೆಳಿಗ್ಗೆ 8.15ಕ್ಕೆ ಹೊಸಪೇಟೆಯಿಂದ ಹೊರಡುವ ರೈಲು 11.55ಕ್ಕೆ ದಾವಣಗೆರೆ ತಲುಪಲಿದೆ. ದಾವಣಗೆರೆಯಿಂದ ಮಧ್ಯಾಹ್ನ 12.15ಕ್ಕೆ ಹೊರಟು ಮ. 3.55ಕ್ಕೆ ಹೊಸಪೇಟೆ ಮುಟ್ಟಲಿದೆ. ಈ ಪ್ರಯಾಣಕ್ಕೆ ಸಾಮಾನ್ಯ ದರ ಇರಲಿದ್ದು, ಮುಂಗಡ ಟಿಕೆಟ್ ಕಾಯ್ದಿರಿಸದೆ ರೈಲು ನಿಲ್ದಾಣದಲ್ಲಿಯೂ ಟಿಕೆಟ್ ಪಡೆದು ಪ್ರಯಾಣಿಸಬಹುದು.

ಈ ರೈಲು ತುಂಗಭದ್ರಾ ಡ್ಯಾಂ, ವ್ಯಾಸನಕೆರಿ, ವ್ಯಾಸ ಕಾಲೊನಿ, ಮರಿಯಮ್ಮನಹಳ್ಳಿ, ಹಂಪಾಪಟ್ಟಣ, ಹಗರಿ ಬೊಮ್ಮನಹಳ್ಳಿ, ಮಳವಿ, ಕೊಟ್ಟೂರು, ಬೆಣ್ಣೆಹಳ್ಳಿ, ಹರಪನಹಳ್ಳಿ, ತೆಲಗಿ ಮತ್ತು ಅಮರಾವತಿ ಕಾಲೊನಿ ಮಾರ್ಗದಲ್ಲಿ ಸಂಚರಿಸಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು