ಅಣೆಕಟ್ಟೆ ಎತ್ತರ: ಸಲಹೆಗಳಿಗೆ ಆಹ್ವಾನ

7
ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆ

ಅಣೆಕಟ್ಟೆ ಎತ್ತರ: ಸಲಹೆಗಳಿಗೆ ಆಹ್ವಾನ

Published:
Updated:
Deccan Herald

ಹುಬ್ಬಳ್ಳಿ: ‘ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ. ರೈತರ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇದೆ. ಹಾಗಾಗಿ, ರೈತರಿಂದ ಸಲಹೆ ಮತ್ತು ಸೂಚನೆಗಳನ್ನು ಆಹ್ವಾನಿಸಲಾಗಿದ್ದು, ಬಳಿಕ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಾಶಯದ ಎತ್ತರವನ್ನು 519.6 ಮೀಟರ್‌ನಿಂದ 524.256 ಮೀಟರ್ ಎತ್ತರಕ್ಕೆ ಏರಿಸಿದರೆ, ಹಲವು ಗ್ರಾಮಗಳು ಮುಳುಗಡೆಯಾಗಲಿವೆ ಎಂದರು.

‘ಮುಳಗಡೆ ಪ್ರದೇಶದ ಜನರಿಗೆ ಬೇರೆ ಕಡೆ ಪುನರ್ವಸತಿ ಸೌಲಭ್ಯ ಒದಗಿಸಬೇಕು. ಅಲ್ಲದೆ, ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿರುವ ಭೂಮಿ ಪೈಕಿ, ಕೆಲ ಸ್ಥಳಗಳಲ್ಲಿ ಮೂರ್ನಾಲ್ಕು ತಿಂಗಳು ಮಾತ್ರ ನೀರು ನಿಲ್ಲಲಿದೆ. ಆ ಭಾಗದ ರೈತರು, ಪಾವಗಡ ಮಾದರಿಯಲ್ಲಿ (ಬಾಡಿಗೆ ಮಾದರಿ ಪರಿಹಾರ) ಪರಿಹಾರ ನೀಡುವಂತೆ ಕೋರುತ್ತಿದ್ದಾರೆ. ಹಾಗಾಗಿ, ಸಲಹೆ– ಸೂಚನೆಗಳನ್ನು ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಬಳ್ಳಾರಿ ಭೇಟಿ 13ರಿಂದ:

‘ಉತ್ತರ ಕರ್ನಾಟಕವನ್ನು ಸರ್ಕಾರ ಕಡೆಗಣಿಸಿಲ್ಲ. ಅಖಂಡ ಕರ್ನಾಟಕದ ಚಿಂತನೆ ನಮ್ಮದು. ಎಲ್ಲಾ ಭಾಗಕ್ಕೂ ಸಮಾನವಾಗಿ ಹಣ ಹಂಚಿಕೆ ಮಾಡಲಾಗಿದ್ದು, ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಇದೇ 13ರಿಂದ ಮೂರು ದಿನ ಬಳ್ಳಾರಿ ಸೇರಿದಂತೆ, ಈ ಭಾಗದ ಪ್ರದೇಶಗಳಿಗೆ ಭೇಟಿ ನೀಡಲಿದ್ದೇನೆ’ ಎಂದು ತಿಳಿಸಿದರು.

ಸ್ಥಳಾಂತರ ಸರಿಯಲ್ಲ:

‘ಬೆಂಗಳೂರಿನಲ್ಲಿ ನಡೆಯುತ್ತಿದ್ದ ಏರ್‌ಷೋ ಅನ್ನು ಈ ಬಾರಿ ಉತ್ತರಪ್ರದೇಶ ರಾಜ್ಯದ ಲಕ್ನೊಗೆ ಸ್ಥಳಾಂತರಿಸಿರುವುದು ಸರಿಯಲ್ಲ. ಈ ಬಗ್ಗೆ ಸರ್ಕಾರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ಬೆಂಗಳೂರಿನಲ್ಲೇ ಏರ್‌ ಷೋ ನಡೆಸುವಂತೆ ಒತ್ತಾಯಿಸಲಿದೆ. ಬಿಜೆಪಿ ಸಂಸದರು ಹಾಗೂ ಸಚಿವರು ಕೂಡ ನಿಯೋಗದೊಂದಿಗೆ ತೆರಳಿ ಒತ್ತಡ ಹೇರಬೇಕು’ ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !