ಹುಬ್ಬಳ್ಳಿ: ಇಲ್ಲಿನ ಕೊಪ್ಪಿಕರ್ ರಸ್ತೆಯ ಪದ್ಮಾ ಮಾಲ್ನಲ್ಲಿ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಮಳಿಗೆಯನ್ನು ನಟಿ ರಚಿತಾ ರಾಮ್ ಭಾನುವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ಹುಬ್ಬಳ್ಳಿಯಲ್ಲಿ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಕಂಪನಿಯು 14ನೇ ಮಳಿಗೆ ಆರಂಭಿಸಿದೆ. ಚಿನ್ನ, ಬೆಳ್ಳಿ, ವಜ್ರದ ವಿವಿಧ ರೀತಿಯ ಆಕರ್ಷಕ ಹಾಗೂ ಗುಣಮಟ್ಟದ ಆಭರಣಗಳು ಇಲ್ಲಿವೆ. ಶುಭ ಸಮಾರಂಭ, ಹಬ್ಬ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೆ ಇಲ್ಲಿ ಆಭರಣ ಖರೀದಿಸಿ’ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ, ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಧರ್ಮಗುರು ತಾಜುದ್ದೀನ್ ಖಾದ್ರಿ, ಉದ್ಯಮಿ ಭವರಲಾಲ್ ಜೈನ್, ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಮಹೇಶ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ ಇದ್ದರು.

ವೈವಿಧ್ಯಮಯ ಆಭರಣಗಳ ಸಂಗ್ರಹ:

‘ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಕಂಪನಿ ಚಿನ್ನಾಭರಣ ತಯಾರಿಕೆಯಲ್ಲಿ ಸಾಕಷ್ಟು ಅನುಭವ ಹೊಂದಿದೆ. ದಶಕಗಳಿಂದ ಗ್ರಾಹಕರಿಗೆ ಉತ್ತಮ, ಪ್ರಾಮಾಣಿಕ ಸೇವೆ ನೀಡುತ್ತಿದೆ. ಫ್ರೆಂಚ್, ಯುಎಸ್, ಟರ್ಕಿಶ್, ಬೆಲ್ಜಿಯಂ ಸೇರಿದಂತೆ ವಿಭಿನ್ನ ವಿನ್ಯಾಸಗಳ ಆಭರಣಗಳ ಸಂಗ್ರಹ ಇಲ್ಲಿದೆ’ ಎಂದು ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ರವೂಫ್ ಹೇಳಿದರು.

‘ವಜ್ರಾಭರಣ ವ್ಯಾಪಾರದಲ್ಲಿ ಸುದೀರ್ಘ ಅನುಭವ ಹೊಂದಿರುವ ಕಂಪನಿಯು, ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಆರಂಭಿಸಿರುವ ಈ ಮಳಿಗೆಯಲ್ಲಿ ಆಧುನಿಕ ಮತ್ತು ಸಾಂಪ್ರದಾಯಿಕ, ಕಲಾತ್ಮಕ ಚಿನ್ನಾಭರಣಗಳು, ವಜ್ರದ ಆಭರಣಗಳು ಹಾಗೂ ಬೆಲೆ ಬಾಳುವ ಹರಳುಗಳ ಸಂಗ್ರಹವಿದೆ. ಉಂಗುರ, ಓಲೆ, ಬಳೆ, ಮೂಗುತಿ, ವಧುವಿಗೆ ಬೇಕಾದ ಆಭರಣಗಳು ಸೇರಿ ಗ್ರಾಹಕರ ಅಭಿರುಚಿಗೆ ಅನುಗುಣವಾದ ಆಭರಣಗಳು ಇಲ್ಲಿ ಲಭ್ಯ ಇವೆ’ ಎಂದು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ರಹಿಮ್ ತಿಳಿಸಿದರು.

ರಿಯಾಯಿತಿ ಸೌಲಭ್ಯ

‘ಮಳಿಗೆಯಲ್ಲಿ ಗ್ರಾಹಕರಿಗೆ ಚಿನ್ನದ ಆಭರಣದ ಮೇಕಿಂಗ್ ಚಾರ್ಜ್ ಮೇಲೆ ಶೇ 50 ರಷ್ಟು ಪ್ರತಿ ಕ್ಯಾರೆಟ್ ವಜ್ರದ ಮೇಲೆ ₹ 8 ಸಾವಿರ ಬೆಳ್ಳಿ ಆಭರಣಗಳ ಖರೀದಿ ಮೇಲೆ ಶೇ 25ರಷ್ಟು ಮೇಕಿಂಗ್ ಚಾರ್ಜ್ ರಿಯಾಯಿತಿ ಹಾಗೂ ಹಳೇ ಚಿನ್ನಾಭರಣಗಳ ಎಕ್ಸ್ಚೇಂಜ್ ಮೇಲೆ ಪ್ರತಿ ಗ್ರಾಂಗೆ ₹50 ಕ್ಯಾಶ್ ಬ್ಯಾಕ್ ನೀಡಲಾಗುತ್ತಿದೆ. ಇದರೊಂದಿಗೆ ಆಭರಣ ಖರೀದಿಸಿದ ಒಬ್ಬ ಗ್ರಾಹಕನಿಗೆ ಲಕ್ಕಿ ಡಿಪ್ ಮೂಲಕ ಪ್ರತಿದಿನ 1 ಗ್ರಾಂ ಚಿನ್ನದ ನಾಣ್ಯ ನೀಡಲಾಗುತ್ತದೆ. ಅಲ್ಲದೆ ವೀಕ್ಷಣೆಗೆ ಬರುವವರಿಗೂ ಆಕರ್ಷಕ ಬಹುಮಾನ ನೀಡಲಾಗುವುದು’ ಎಂದು ಕಂಪನಿಯ ನಿರ್ದೇಶಕ ಅಬ್ದುಲ್ ರಿಯಾಜ್ ತಿಳಿಸಿದರು. ‘ಇದು 14ನೇ ಮಳಿಗೆ ಆಗಿದ್ದು ಮುಂದಿನ ದಿನಗಳಲ್ಲಿ ವಿಜಯಪುರ ಕಲಬುರಗಿಯಲ್ಲಿಯೂ ಮಳಿಗೆ ಆರಂಭಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.