ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈರುತ್ಯ ರೈಲ್ವೆಗೆ ₹8,071 ಕೋಟಿ ಆದಾಯ

Published 25 ಮೇ 2023, 4:58 IST
Last Updated 25 ಮೇ 2023, 4:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: 2022-23 ಸಾಲಿನಲ್ಲಿ ನೈರುತ್ಯ ರೈಲ್ವೆ ₹8,071 ಕೋಟಿ ಆದಾಯ ಗಳಿಸಿದೆ. ಹುಬ್ಬಳ್ಳಿಯಲ್ಲಿ 2003ರಲ್ಲಿ ರೈಲ್ವೆಯು ಆರಂಭವಾದ ನಂತರ ಮೊದಲ ಬಾರಿಗೆ ಆದಾಯದ ಮೊತ್ತ ₹8 ಸಾವಿರದ ಗಡಿ ದಾಟಿದೆ.

ಆದಾಯದ ಪೈಕಿ ಪ್ರಯಾಣಿಕರಿಂದ ₹2,756 ಕೋಟಿ, ಸರಕು ಸಾಗಣೆಯಿಂದ ₹4,696 ಕೋಟಿ, ವಿವಿಧ ಮೂಲಗಳಿಂದ ₹348 ಕೋಟಿ ಮತ್ತು ಕೋಚ್‌ಗಳ ನಿರ್ಮಾಣ ಸೇರಿದಂತೆ ಇತರ ಮೂಲಗಳಿಂದ ₹271 ಕೋಟಿ ಸಂಗ್ರಹವಾಗಿದೆ. 2021-22ನೇ ಸಾಲಿಗೆ ಹೋಲಿಸಿದರೆ, ಈ ಸಲದ ಆದಾಯ ಶೇ 30ಕ್ಕಿಂತ ಹೆಚ್ಚಾಗಿದೆ ಎಂದು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ಒಂದು ವರ್ಷದಲ್ಲಿ ಒಟ್ಟು ₹15 ಕೋಟಿ ಮಂದಿ ಪ್ರಯಾಣ ಮಾಡಿದ್ದಾರೆ. ಇದು ಸಹ 20 ವರ್ಷಗಳಲ್ಲೇ ಅತ್ಯಧಿಕ. 3,506 ಪಾರ್ಸೆಲ್ ವ್ಯಾನ್‌ಗಳನ್ನು ಗುತ್ತಿಗೆ ನೀಡಲಾಗಿದೆ. ಅದರಲ್ಲಿ 82,200 ಟನ್ ಅಗತ್ಯ ವಸ್ತುಗಳ ಸರಕು ಸಾಗಣೆ ಮಾಡಿ ₹57 ಕೋಟಿ ಆದಾಯ ಗಳಿಸಲಾಗಿದೆ. 170 ಪಾರ್ಸೆಲ್ ಕಾರ್ಗೋ ಎಕ್ಸ್‌ಪ್ರೆಸ್‌ ರೈಲುಗಳನ್ನು ಗುತ್ತಿಗೆ ನೀಡಿದ್ದು, ಅದರಿಂದ ₹28 ಕೋಟಿ ಆದಾಯ ಬಂದಿದೆ' ಎಂದು ಹೇಳಿದ್ದಾರೆ.

'ಈ ಸಾಲಿನಲ್ಲಿ ರೈಲ್ವೆಯು 4.77 ಕೋಟಿ ಟನ್‌ ಸರಕು ಸಾಗಣೆ ಮಾಡಿದೆ. ಆಟೋಮೊಬೈಲ್ ಉದ್ಯಮಿಗಳಿಗೆ ರೈಲ್ವೆಯು ವಿಶ್ವಾಸಾರ್ಹ ಸಾರಿಗೆಯಾಗಿದೆ. ಈ ವರ್ಷ 509 ಬೋಗಿಗಳಲ್ಲಿ ಆಟೋಮೊಬೈಲ್‌ ವಸ್ತುಗಳನ್ನು ಸಾಗಿಸಲಾಗಿದೆ. 2.05 ಮೆಟ್ರಿಕ್‌ ಟನ್‌ ಖನಿಜ ತೈಲ, 1.07 ಮೆಟ್ರಿಕ್‌ ಟನ್‌ ಸಿಮೆಂಟ್ ಹಾಗೂ 1.45 ಮೆಟ್ರಿಕ್‌ ಟನ್‌ ಸಕ್ಕರೆಯನ್ನು ನೈರುತ್ಯ ರೈಲ್ವೆ ಸಾಗಿಸಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT