ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲು: ಸುಗಮ ಮತದಾನಕ್ಕೆ ವ್ಯವಸ್ಥೆ

ಪ್ರಥಮ ಚಿಕಿತ್ಸಾ ಕಿಟ್‌, ಒಆರ್‌ಎಸ್‌ ಪೊಟ್ಟಣಗಳ ಪೂರೈಕೆ: ನೆರಳಿನ ಸೌಲಭ್ಯ ಕಲ್ಪಿಸಲು ಆದ್ಯತೆ
ಎಲ್.ಮಂಜುನಾಥ
Published 6 ಮೇ 2024, 5:17 IST
Last Updated 6 ಮೇ 2024, 5:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಿಸಿಲಿನ ಪ್ರಮಾಣ ಏರಿಕೆಯಾಗುತ್ತಿದ್ದು, ಪ್ರಸ್ತುತ ಉಷ್ಣಾಂಶವು 42 ಡಿಗ್ರಿ ಸೆಲ್ಸಿಯಸ್‌ ಇದೆ. ಮುಂದಿನ ಕೆಲ ದಿನಗಳವರೆಗೆ ಇದೇ ಪರಿಸ್ಥಿತಿ ಮುಂದುವರೆಯಲಿದೆ. ಬಿಸಿಗಾಳಿ ಬೀಸುವ ಆತಂಕವೂ ಇದೆ.

ಈ ಎಲ್ಲದರ ಮಧ್ಯೆ ಮೇ 7ರಂದು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ನಡೆಯಲಿದೆ. ಬಿಸಿಲಿನ ಈ ತಾಪಮಾನವು ಮತದಾರರಿಗೆ, ಮತದಾನದ ಪ್ರಮಾಣದ ಮೇಲೆ ಪರಿಣಾಮ ಬೀರಬಾರದು ಎಂದು ಧಾರವಾಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿಯು ಹಲವು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. 

ನೆರಳಿನ ವ್ಯವಸ್ಥೆ: ‘ಬಿಸಿಲಿನ ತಾಪ ಹೆಚ್ಚಿರುವ ಕಾರಣ ಧಾರವಾಡ ಜಿಲ್ಲಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ 1,660 ಮತಗಟ್ಟೆ ಕೇಂದ್ರಗಳಲ್ಲಿ ಅಗತ್ಯ ಇರುವ ಕಡೆ ಶಾಮಿಯಾನ ಹಾಗೂ ಕುರ್ಚಿಗಳನ್ನು ಹಾಕಲಾಗುವುದು. ಮತದಾನ ಮಾಡಲು ಸಾಲಿನಲ್ಲಿ ನಿಲ್ಲುವ ಮತದಾರರಿ ನೆರಳಿನ ವ್ಯವಸ್ಥೆ ಮಾಡಲಾಗುತ್ತದೆ. ಇದರೊಂದಿಗೆ ಪ್ರತಿ ಮತದಾನ ಕೇಂದ್ರದಲ್ಲಿಯೂ ಕುಡಿಯುವ ನೀರಿನ ಸೌಲಭ್ಯ, ಪ್ರತ್ಯೇಕ ಶೌಚಾಲಯ, ಪೀಠೋಪಕರಣ, ಫ್ಯಾನ್‌ ಸೌಲಭ್ಯ, ರ್‍ಯಾಂಪ್‌ ವ್ಯವಸ್ಥೆ ಕಲ್ಪಿಸಲಾಗುತ್ತದೆ’ ಎಂದು ಜಿಲ್ಲಾ ಸ್ವೀಪ್‌ ನೋಡೆಲ್‌ ಅಧಿಕಾರಿಯಾದ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವರೂಪಾ ಟಿ.ಕೆ.

ಮೆಡಿಕಲ್‌ ಕಿಟ್‌, ಒಆರ್‌ಎಸ್‌ ಪೂರೈಕೆ: ‘ಬಿಸಿಲಿನ ತಾಪಮಾನದಿಂದ ಮತದಾರರಿಗೆ ತೊಂದರೆಯಾಗಬಾರದು ಎಂದು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಮತದಾನ ಕೇಂದ್ರಗಳಿಗೆ ಪ್ರಥಮ ಚಿಕಿತ್ಸಾ ಕಿಟ್‌ ಹಾಗೂ ಒಆರ್‌ಎಸ್‌ ಪೊಟ್ಟಣಗಳನ್ನು ಪೂರೈಸಲು ಕ್ರಮಕೈಗೊಳ್ಳಲಾಗಿದೆ. ಪ್ರತಿ ಕಿಟ್‌ನಲ್ಲಿ ಜ್ವರ, ಶೀತ, ನೆಗಡಿ, ಅಲರ್ಜಿ, ಮೈಕೈ ನೋವು, ವಾಂತಿ– ಬೇಧಿ, ಹೊಟ್ಟೆ ನೋವು, ದಮ್ಮು– ಆಸ್ತಮಕ್ಕೆ ಸಂಬಂಧಿಸಿದ ಮಾತ್ರೆಗಳು ಇರುತ್ತವೆ. ಇವುಗಳೊಂದಿಗೆ ಯಾರಾದರೂ ಗಾಯಗೊಂಡಲ್ಲಿ ಬೆಂಡೆಜ್‌ ಬಟ್ಟೆ, ಹತ್ತಿ ಹಾಗೂ ಮುಲಾಮು ಇರುತ್ತದೆ’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ ಹೇಳುತ್ತಾರೆ. 

‘ಪ್ರತಿ ಮೆಡಿಕಲ್‌ ಕಿಟ್‌ ಜೊತೆಗೆ 5 ಒಆರ್‌ಎಸ್‌ ಪೊಟ್ಟಣಗಳು ಇರುತ್ತವೆ. ಇದರೊಂದಿಗೆ ಹೆಚ್ಚುವರಿಯಾಗಿ 20 ಒಆರ್‌ಎಸ್‌ ಪ್ಯಾಕೇಟ್‌ಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ. ಪ್ರತಿ ಮತಗಟ್ಟೆಯಲ್ಲಿ ತುರ್ತು ವೈದ್ಯಕೀಯ ಸೇವೆಗಾಗಿ ಒಬ್ಬ ವೈದ್ಯ, ಸಹಾಯಕ ಹಾಗೂ ಆಶಾ ಕಾರ್ಯಕರ್ತೆಯೊಬ್ಬರನ್ನು ನಿಯೋಜಿಸಲಾಗುತ್ತದೆ. ಇವರು ತುರ್ತು ವೈದ್ಯಕೀಯ ಸೇವೆಯ ಜೊತೆಗೆ ಒಆರ್‌ಎಸ್‌ ಮಿಶ್ರಿತ ನೀರನ್ನು ಮತದಾರರಿಗೆ ಕುಡಿಯಲು ಕೊಡುತ್ತಾರೆ. ತುರ್ತು ವೇಳೆಯಲ್ಲಿ ಬಳಕೆಗಾಗಿ ಅಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಲಾಗುತ್ತದೆ’ ಎನ್ನುತ್ತಾರೆ ಅವರು. 

ಮತಗಟ್ಟೆ ಕೇಂದ್ರಗಳಿಗೆ ಸರಬರಾಜು ಮಾಡಲು ಸಿದ್ಧಗೊಂಡಿರುವ ಪ್ರಥಮ ಚಿಕಿತ್ಸಾ ಔಷಧಿಗಳ ಸಂಗ್ರಹದ ಪೆಟ್ಟಿಗೆ 
ಮತಗಟ್ಟೆ ಕೇಂದ್ರಗಳಿಗೆ ಸರಬರಾಜು ಮಾಡಲು ಸಿದ್ಧಗೊಂಡಿರುವ ಪ್ರಥಮ ಚಿಕಿತ್ಸಾ ಔಷಧಿಗಳ ಸಂಗ್ರಹದ ಪೆಟ್ಟಿಗೆ 
ಸ್ವರೂಪಾ ಟಿ.ಕೆ.
ಸ್ವರೂಪಾ ಟಿ.ಕೆ.
 ದಿವ್ಯ ಪ್ರಭು 
 ದಿವ್ಯ ಪ್ರಭು 
 ಡಾ.ಶಶಿ ಪಾಟೀಲ 
 ಡಾ.ಶಶಿ ಪಾಟೀಲ 
ರವಿ ಪಾಟೀಲ
ರವಿ ಪಾಟೀಲ
ಪ್ರತಿ ಮತಗಟ್ಟೆ ಕೇಂದ್ರಗಳಲ್ಲಿ ನೀರು ನೆರಳು ಆಸನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಪ್ರಥಮ ಚಿಕಿತ್ಸೆ ಪೆಟ್ಟಿಗೆ ಒಆರ್‌ಎಸ್‌ ಪೊಟ್ಟಣಗಳ ವ್ಯವಸ್ಥೆ. ವೈದ್ಯಕೀಯ ಸೇವೆಗೆ ವೈದ್ಯರು ಸಹಾಯಕ ಸಿಬ್ಬಂದಿ ಆಶಾ ಕಾರ್ಯಕರ್ತೆ ನಿಯೋಜಿಸಲಾಗುತ್ತದೆ.
ಸ್ವರೂಪಾ ಟಿ.ಕೆ. ಜಿಲ್ಲಾ ಸ್ವೀಪ್‌ ನೋಡೆಲ್‌ ಅಧಿಕಾರಿ 
ಬೆಳಿಗ್ಗೆಯೇ ಮತದಾನ ಮಾಡುವಂತೆ ಈಗಾಗಲೇ ಚುನಾವಣಾ ನೋಡಲ್‌ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರಲ್ಲಿ ಮನವಿ ಮಾಡಿದ್ದಾರೆ. ಮತದಾನದ ವೇಳೆ ಯಾರಿಗೂ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು.
ದಿವ್ಯ ಪ್ರಭು ಜಿಲ್ಲಾ ಚುನಾವಣಾ ಅಧಿಕಾರಿ
ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಮತಗಟ್ಟೆಗಳಿಗೆ ಮೆಡಿಕಲ್‌ ಕಿಟ್‌ ಅಗತ್ಯ ಒಆರ್‌ಎಸ್‌ ಪೊಟ್ಟಣಗಳ ಪೂರೈಕೆಗೆ ಕ್ರಮವಹಿಸಲಾಗಿದೆ. ತುರ್ತು ಸೇವೆಗಾಗಿ ಅಂಬುಲೆನ್ಸ್‌ ಸೌಲಭ್ಯವನ್ನೂ ಕಲ್ಪಿಸಲಾಗುತ್ತದೆ.
ಡಾ.ಶಶಿ ಪಾಟೀಲ ಡಿಎಚ್‌ಒ ಧಾರವಾಡ.

ಬೆಳಿಗ್ಗೆಯೇ ಮತದಾನ ಮಾಡಲು ಮನವಿ  ‘ಬಿಸಿಲಿನಿಂದ ರಕ್ಷಣೆಗಾಗಿ ಮತದಾರರು ಬೆಳಿಗ್ಗೆ 7ರಿಂದ ಮಧ್ಯಾಹ್ನ 12ರೊಳಗೆ ಮತದಾನ ಮಾಡಿದರೆ ಒಳಿತು. ಮಧ್ಯಾಹ್ನದ ನಂತರ ಮತದಾನ ಮಾಡುವುದಿದ್ದರೆ ಬಿಸಿಲಿನಿಂದ ರಕ್ಷಣೆ ಪಡೆಯಲು ಟೊಪಿ ಛತ್ರಿಯನ್ನು ಬಳಸಬೇಕು. ಜೊತೆಗೆ ಆಗಾಗ ನಿಯಮಿತವಾಗಿ ನೀರು ಕುಡಿಯುತ್ತಿರಬೇಕು. ತಣ್ಣಗೆ ಗಾಳಿ ಬೀಸುವ ಜಾಗದಲ್ಲಿ ನೆರಳಿನಲ್ಲಿ ವಿಶ್ರಾಂತಿ ಪಡೆಯಬೇಕು‘ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನ ವಿಭಾಗದ ತಜ್ಞ ರವಿಪಾಟೀಲ ಹೇಳುತ್ತಾರೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT