ಶುಕ್ರವಾರ, ನವೆಂಬರ್ 22, 2019
22 °C

‘ಬಸವ ಎಕ್ಸ್‌ಪ್ರೆಸ್’ ಸಂಚಾರ ಭಾಗಶಃ ರದ್ದು

Published:
Updated:

ಹುಬ್ಬಳ್ಳಿ: ಮೈಸೂರು–ಬಾಗಲಕೋಟೆ ನಡುವೆ ಸಂಚರಿಸುವ ‘ಬಸವ ಎಕ್ಸ್‌ಪ್ರೆಸ್‌’ ರೈಲು ನವೆಂಬರ್‌ 10 ಮತ್ತು 11ರಂದು ಮೈಸೂರಿನಿಂದ ವಿಜಯಪುರವರಗೆ ಮಾತ್ರ ಸಂಚರಿಸಲಿದೆ.

ವಿಜಯಪುರ ಜಿಲ್ಲೆಯ ಮುಳವಾಡ–ಜುಮನಾಳ ನಿಲ್ದಾಣಗಳ ನಡುವೆ ರೈಲ್ವೆ ದ್ವಿಪಥ ಮಾರ್ಗ ಕಾಮಗಾರಿ  ನಡೆಯುತ್ತಿರುವುದರಿಂದ ಈ ರೈಲು ವಿಜಯಪುರ–ಬಾಗಲಕೋಟೆ ನಡುವೆ ಸಂಚರಿಸುವುದಿಲ್ಲ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

30 ನಿಮಿಷ ವಿಳಂಬ: ಹುಬ್ಬಳ್ಳಿ–ವಿಜಯಪುರ–ಹುಬ್ಬಳ್ಳಿ ನಡುವೆ ಸಂಚರಿಸುವ ಪ್ಯಾಸೆಂಜರ್‌ ರೈಲು (ರೈಲು ಸಂಖ್ಯೆ 06919/06920) ನವೆಂಬರ್‌ 9ರಿಂದ 12 ವರೆಗೆ ನಿಗದಿತ ಸಮಯಕ್ಕಿಂತ 30 ನಿಮಿಷ ವಿಳಂಬವಾಗಿ ಚಲಿಸಲಿದೆ.

 

ಪ್ರತಿಕ್ರಿಯಿಸಿ (+)