ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಣ್ಣ ಪುತ್ಥಳಿ ಅನಾವರಣ

ವಿವಿಧ ಕ್ಷೇತ್ರಗಳ 15 ಜನರಿಗೆ ಪ್ರಶಸ್ತಿ ಪ್ರಕಟ
Last Updated 14 ಆಗಸ್ಟ್ 2020, 13:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಗ್ರಾಮಾಂತರ ತಾಲ್ಲೂಕಿನ ಮಾರಡಗಿ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ 11.30ಕ್ಕೆ 9.3 ಅಡಿ ಎತ್ತರದ ರಾಯಣ್ಣ ಪುತ್ಥಳಿ ಪ್ರತಿಷ್ಠಾಪಿಸಲಾಗುವುದು ಎಂದು ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಶಿವಾನಂದ ಮುತ್ತಣ್ಣನವರ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ’ಶಾಸಕ ಅಮೃತ ದೇಸಾಯಿ, ರೇವಣಸಿದ್ಧೇಶ್ವರ ಸ್ವಾಮೀಜಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಬೆಳಿಗ್ಗೆ ಸರಳವಾಗಿ ರಾಯಣ್ಣ ಜಯಂತಿ ಆಚರಿಸಲಾಗುತ್ತಿದೆ. ಮೆರವಣಿಗೆ ರದ್ದು ಮಾಡಲಾಗಿದೆ. ಸುರಕ್ಷಿತ ಅಂತರ ಕಾಯ್ದುಕೊಂಡು ಮಾಲಾರ್ಪಣೆ ಮಾಡಬೇಕು’ ಎಂದು ಕೋರಿದರು.

15 ಜನ ಆಯ್ಕೆ: ಹಿತರಕ್ಷಣಾ ಸಮಿತಿ ಪ್ರತಿ ವರ್ಷ ನೀಡುವ ರಾಯಣ್ಣ ಪ್ರಶಸ್ತಿಯ ಈ ಬಾರಿ ವಿವಿಧ ಕ್ಷೇತ್ರಗಳ 15 ಜನರನ್ನು ಆಯ್ಕೆ ಮಾಡಲಾಗಿದೆ. 2021ರ ಜನವರಿ 26ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುತ್ತಣ್ಣನವರ ತಿಳಿಸಿದರು.

ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಡಾ. ಷಣ್ಮುಖ ಕಮ್ಮಾರ (ವೈದ್ಯಕೀಯ ಕ್ಷೇತ್ರ), ಮೃತ್ಯುಂಜಯ ಹಿರೇಮಠ (ಸಮಾಜ ಸೇವೆ), ಅಜೀಜ್‌ ದೇಸಾಯಿ, ರಮೇಶ ಪಾಲಿಮ (ಸರ್ಕಾರಿ ಕಾರ್ಯ), ಹೇಮಂತ ದೊಡ್ಡಮನಿ, ರವೀಂದ್ರ ಹಳಿಜೋಳ, ಶಿವಶಂಕರ ಕಂಠಿ (ಪತ್ರಿಕೋದ್ಯಮ), ಚಂದ್ರು ಚಲವಾದಿ, ವಿಠ್ಠಲ್‌ ಬೋವಿ, ರಮೇಶ ನಾಯಕ, ಪ್ರಭು ಪುರಾಣಿಕಮಠ (ಪೊಲೀಸ್ ಇಲಾಖೆ), ಪ್ರೇಮಾನಂದ ನಾಯಕ (ನಿವೃತ್ತ ಪೊಲೀಸ್‌ ಅಧಿಕಾರಿ), ಗುರುರಾಜ ಚಲವಾದಿ (ಕಲಾವಿದ) ಮತ್ತು ಸುರೇಶ ಬೆಳದಡಿ (ಪೌರ ಕಾರ್ಮಿಕ) ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT