ಉಪ್ಪಿನಬೆಟಗೇರಿ: ಉದ್ದಿನ ಕಾಳು ಮಾರಾಟ ಅವಧಿ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತೆರೆಯಲಾಗಿದ್ದ ಉದ್ದು ಖರೀದಿ ಕೇಂದ್ರದ ಎದುರು ರೈತರು ಹಾಗೂ ಎಐಕೆಕೆಎಂಎಸ್ ಧಾರವಾಡ ಜಿಲ್ಲಾ ಸಮಿತಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿತು.

ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಧಾರವಾಡ ಜಿಲ್ಲಾ ಸಮಿತಿ ಅಧ್ಯಕ್ಷೆ ದೀಪಾ ಧಾರವಾಡ ಮಾತನಾಡಿ, ಬೆಂಬಲ ಬೆಲೆ ಯೋಜನೆಯಡಿ ಉಪ್ಪಿನಬೆಟಗೇರಿಯ ಉದ್ದು ಖರೀದಿ ಕೇಂದ್ರದಲ್ಲಿ1500 ರೈತರು ನೋಂದಣಿ ಮಾಡಿಸಿದ್ದಾರೆ. ಈಗಾಗಲೇ 900ಕ್ಕೂ ಅಧಿಕ ರೈತರು ಉದ್ದು ಕಾಳು ಮಾರಾಟ ಮಾಡಿದ್ದಾರೆ. ಇನ್ನೂ 500ಕ್ಕೂ ಅಧಿಕ ರೈತರು ಉದ್ದು ಮಾರಾಟ ಮಾಡಬೇಕಿದೆ. ಅವಧಿ ಹೆಚ್ಚಿಸಿ ನೊಂದಾಯಿಸಿದ ಪ್ರತಿ ರೈತರ ಉದ್ದು ಕಾಳು ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ತಹಶೀಲ್ಧಾರ್ ಅವರಿಗೆ ಮನವಿ ಸಲ್ಲಿಸಿದರು.

ತಹಶೀಲ್ಧಾರ ಡಿ.ಎಚ್.ಹೂಗಾರ ಮಾತನಾಡಿ, ಸರ್ಕಾರದ ಆದೇಶದಲ್ಲಿ ತಿಳಿಸಿದಂತೆ ಈಗಾಗಲೆ ಡಿ.23 ರವರೆಗೆ ಉದ್ದು ಖರೀದಿ ಪ್ರಕ್ರೀಯೆ ಮುಗಿದಿದೆ. ಪ್ರಸ್ತುತ ಖರೀದಿ ಕೇಂದ್ರದಲ್ಲಿ ನೊಂದಾಯಿಸಿದ ಉಳಿದ ರೈತರು ಉದ್ದು ಮಾರಾಟಕ್ಕೆ ಸಮಯಾವಕಾಶ ಹೆಚ್ಚಿಸಬೇಕು ಎಂದು ಕಳೆದ ಒಂದು ವಾರದಿಂದ ಆಗ್ರಹಿಸುತ್ತಿದ್ದಾರೆ. ರೈತರ ಆಗ್ರಹಕ್ಕೆಗೆ ಸ್ಪಂದಿಸಿರುವ ಸರ್ಕಾರ ಮುಂಬರುವ ಜ.22 ರವರೆಗೆ ಅವಧಿ ವಿಸ್ತರಣೆ ಮಾಡಿ, ಉದ್ದು ಕಾಳು ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ತಿಳಿಸಿದರು.

ಜಿಲ್ಲಾ ಸಮತಿ ಕಾರ್ಯದರ್ಶಿ ಶರಣು ಗೊನವಾರ, ಮಾರ್ಕೇಟಿಂಗ ಫೇಡರೇಶನ್ ಅಧಿಕಾರಿ ವಿನಯ ಪಾಟೀಲ, ಪಿಕೆಪಿಎಸ್ ನ ಉಪಾಧ್ಯಕ್ಷ ವೀರಣ್ಣ ಪರಾಂಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಶೀರ ಅಹ್ಮದ ಮಾಳಗಿಮನಿ, ಸದಸ್ಯರಾದ ಮಹಾವೀರ ಅಷ್ಟಗಿ, ಮಂಜುನಾಥ ಮಸೂತಿ, ಸಿಪಿಐ ಶಿವಯೋಗಿ ಲೋಹರ್, ಪಿಎಸ್ಐ ಸಿದ್ದರಾಮಪ್ಪ ಉನ್ನದ, ಎಫ್.ಎಂ.ಮಂಟೂರ ಹಾಗೂ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.