ಮೋರೆ ಭೇಟಿ ಮಾಡಿದ ವಿನಯ

ಬುಧವಾರ, ಏಪ್ರಿಲ್ 24, 2019
27 °C

ಮೋರೆ ಭೇಟಿ ಮಾಡಿದ ವಿನಯ

Published:
Updated:
Prajavani

ಧಾರವಾಡ: ಲೋಕಸಭಾ ಚುನಾವಣೆಯ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರು  ಹಿರಿಯ ಕಾಂಗ್ರೆಸ್ ಮುಖಂಡ ಎಸ್‌.ಆರ್.ಮೋರೆ ಅವರನ್ನು ಶುಕ್ರವಾರ ಅವರ ನಿವಾಸದಲ್ಲಿ ಭೇಟಿ ಮಾಡಿ ಬೆಂಬಲ ಕೋರಿದರು.

ತಮ್ಮ ಬೆಂಬಲಿಗರೊಂದಿಗೆ ಮೋರೆ ಅವರ ನಿವಾಸಕ್ಕೆ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿದ ವಿನಯ ಕುಲಕರ್ಣಿ, ಶಾಲು ಹೊದಿಸಿ, ಹಾರ ಹಾಕಿ ಮೋರೆ ಅವರನ್ನು ಸನ್ಮಾನಿಸಿದರು. 

ಈ ಬಾರಿ ಚುನಾವಣೆಯಲ್ಲಿ ತಮ್ಮ ಪರವಾಗಿ ಚುನಾವಣಾ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮೋರೆ ಅವರು ಪ್ರಚಾರ ಕಾರ್ಯದಲ್ಲಿ ಭಾಗವಹಿಸುವ ಭರವಸೆ ನೀಡಿದರು. ಜತೆಗೆ ಹುಬ್ಬಳ್ಳಿ ಧಾರವಾಡ ಪಶ್ಚಿಮ ಮತಕ್ಷೇತ್ರದ ಉಸ್ತುವಾರಿ ವಹಿಸಿಕೊಳ್ಳುವುದಾಗಿಯೂ ತಿಳಿಸಿದರು ಎಂದು ಮೂಲಗಳು ಹೇಳಿವೆ.

‘ಕಾಂಗ್ರೆಸ್‌ ಪಕ್ಷದವರಾಗಿರುವ ನಾವೆಲ್ಲರೂ ಒಂದು. ನಮ್ಮೊಳಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಚುನಾವಣೆಯಲ್ಲಿ ಅವು ಯಾವುವೂ ಅಡ್ಡ ಬಾರದು. ಈ ಬಾರಿ ಕ್ಷೇತ್ರವನ್ನು ಮರಳಿ ಪಡೆಯಲು ಒಗ್ಗಟ್ಟಿನಿಂದ ಹೋರಾಟ ಅಗತ್ಯ ಎಂದು ಮೋರೆ ಹೇಳಿದರು ಎಂದು ಮೋರೆ ಬೆಂಬಲಿಗರು ತಿಳಿಸಿದರು.

ಈ ಸಂದರ್ಭದಲ್ಲಿ ಮರಾಠಾ ಸಮಾಜದ ‌ರಾಜೀವ ಕಾಳೆ, ಎಸ್.ಎ.ಪವಾರ್, ನೀರಲಕಟ್ಟಿ, ರಾಜು ದವಳೆ, ಘಾಟ್ಕೆ, ತಾನಾಜಿರಾವ್ ಪುಂಡೆ, ಬಸವರಾಜ ಜಾಧವ ಮತ್ತು ಹೊಟೆಲ್ ಉದ್ಯಮಿಗಳಾದ ಮಹೇಶ ಶೆಟ್ಟಿ, ಜೀವನ್ ಶೆಟ್ಟಿ ಇದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !