ನವಲಗುಂದ: ರಾಜ್ಯದ ಹಲವು ಗಣ್ಯರು, ಸಾಹಿತಿಗಳು ಕನ್ನಡ ಮಾಧ್ಯ ಮದಲ್ಲಿ ಶಿಕ್ಷಣ ಪಡೆದು ಖ್ಯಾತರಾ ಗಿದ್ದಾರೆ. ಕನ್ನಡದ ಸಾಹಿತಿಗಳು ಜ್ಞಾನ ಪೀಠ ಪ್ರಶಸ್ತಿಗೆ ಭಾಜನರಾಗಿ ರಾಷ್ಟ್ರದ ಗಮನ ಸೆಳೆದಿದ್ದಾರೆ ಹೀಗಾಗಿ ಕನ್ನಡದ ಕುರಿತಾದ ಕೀಳರಿಮೆ ತೊರೆದು ಆಸಕ್ತಿ ಯಿಂದ ಅಧ್ಯಯನ ಮಾಡಿದರೆ ಯಶಸ್ಸು ಸಾಧ್ಯ ಎಂದು ವಿಧಾನ ಪರಿ ಷತ್ ಸದಸ್ಯ ಮೋಹನ ಲಿಂಬಿಕಾಯಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇತ್ತೀಚೆಗೆ ಇಲ್ಲಿಯ ಜ.ಗು.ಅಜಾತ ನಾಗಲಿಂಗ ಮಹಾಸ್ವಾಮಿಗಳ ವಿದ್ಯಾ ಪೀಠದ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿ ಯಾಗಿ ಅವರು ಮಾತನಾಡಿದರು.23 ವರ್ಷಗಳವರೆಗೆ ಅನುದಾನವಿಲ್ಲ ದೇ ಪ್ರೌಢಶಾಲೆಯನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬಂದ ವಿದ್ಯಾ ಪೀಠದ ಶ್ರಮ ಶ್ಲಾಘನೀಯ. ನಿರಪೇಕ್ಷ ಭಾವನೆಯ ಫಲವಾಗಿ ಸರಕಾರ ಈ ಶಾಲೆಯನ್ನು ಅನುದಾನಕ್ಕೊಳಪಡಿಸಿರು ವುದು ಕೂಡ ಸಮರ್ಥನೀಯ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಪೀಠಾ ಧಿಕಾರಿ ವೀರಯ್ಯ ಸ್ವಾಮೀಜಿ ಮಾತ ನಾಡಿ, ಶಿಕ್ಷಣ ಬದುಕಿನ ಸಾರ್ಥಕತೆಗೆ ಅಡಿಪಾಯ. ಮಾನವೀಯತೆಯೊಂದಿಗೆ ಲಭಿಸುವ ಶಿಕ್ಷಣದಿಂದ ನಾಳಿನ ಪ್ರಜೆಗೆ ಬದುಕನ್ನು ಬೆಳಗಿಸಿಕೊಳ್ಳುವಲ್ಲಿ ಬಲ ನೀಡುತ್ತದೆ. ಈ ದಿಸೆಯಲ್ಲಿ ವಿದ್ಯಾರ್ಥಿ ಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಸಂಸ್ಥೆ ಶ್ರಮಿಸುತ್ತಿದೆ ಎಂದು ಹೇಳಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಿ.ಎಂ.ನಿಡವಣಿ ಪಠ್ಯೇ ತರ ಚಟುವಟಿಕೆಗಳ ಬಗ್ಗೆ ಆಸಕ್ತಿ ವಹಿ ಸುವುದು ಅಗತ್ಯ ಎಂದು ಹೇಳಿದರು. ಕಾರ್ಯದರ್ಶಿ ಎಂ.ಎನ್.ಬಡಿಗೇರ ಅಧ್ಯಕ್ಷತೆ ವಹಿಸಿದ್ದರು.

ಮೈಸೂರಿನ ದಾನಿ ಲೀಲಾವತಿ, ಪುರಸಭೆ ಅಧ್ಯಕ್ಷ ಜೀವನ ಪವಾರ, ಪ್ರಾಚಾರ್ಯ ಡಿ.ಎಂ.ನಿಡವಣಿ, ಎಂ. ಎನ್.ಬಡಿಗೇರ, ಶಾಸಕ ಮೋಹನ ಲಿಂಬಿಕಾಯಿ ಅವರ ನ್ನು ಸನ್ಮಾನಿಸಲಾ ಯಿತು. ಎಂ.ಎನ್. ಹಾರೋಗೇರಿ ಸ್ವಾಗತಿಸಿದರು. ಮುಖ್ಯಾ ಧ್ಯಾಪಕ ಎಲ್.ಎಚ್.ಕಮ್ಮೋರ ವರದಿ ವಾಚನ ಮಾಡಿದರು. ಬಿ.ಎಸ್. ಹಿರೇಮಠ ನಿರೂಪಿಸಿದರು. ಎಸ್.ಎಸ್. ಬಿರಾ ದಾರ ವಂದಿಸಿದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.