ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಧರಿಗೆ ಸನ್ಮಾನ, ಗೀತ ನಮನ

Last Updated 30 ಆಗಸ್ಟ್ 2011, 4:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಟ್ರ್ಯಾಕ್~ಗೆ ಕಂಠದಾನ ಮಾಡಿದ ಕಲಾವಿ ದರಿಂದ ಮೂಡಿಬಂದ ನಾಡಪ್ರೇಮದ ಸುಂದರ ಗೀತೆಗಳು, ಡ್ರಮ್ ಹಾಗೂ ಗಿಟಾರ್‌ನ ಹಿನ್ನೆಲೆ ಯಲ್ಲಿ ಫ್ಯೂಜನ್ ಸಂಗೀತ. ಇದರ ಬೆನ್ನಲ್ಲೇ ದೇಶದ ಗಡಿ ಕಾಯುವವರಿಗೆ, ಸೇನೆಯಿಂದ ನಿವೃತ್ತ ರಾದವರಿಗೆ,  ಗಡಿಯಲ್ಲಿ ವೀರಮರಣವಪ್ಪಿದವರ ವಿಧವೆಗೆ ಸನ್ಮಾನ.ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ಈ ಕಾರ್ಯಕ್ರಮ ದೇಶಪ್ರೇಮದ ಕಿಚ್ಚು ಹಚ್ಚಿತು.

ಪತ್ರಕರ್ತರ ನಗರದ ಆರಾಧನಾ ಕಲಾ ಕುಂಜ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಂಟು ಮಂದಿ ಯೋಧರು ಹಾಗೂ ಒಬ್ಬರು ಯೋಧನ ವಿಧವೆ ಯನ್ನು ಸನ್ಮಾನಿಸಲಾಯಿತು.ಇದಕ್ಕೂ ಮೊದಲು `ಆರ್‌ವೀಸ್~ ಗಾನತರಂಗ ತಂಡದ ಗಾಯಕರು ಸಿಡಿಯ `ಟ್ರ್ಯಾಕ್~ನ ಹಿನ್ನೆಲೆ ಯಲ್ಲಿ ನಾಡು-ನುಡಿಗೆ ಸಂಬಂಧಿಸಿದ ಗೀತೆಗಳನ್ನು ಪ್ರಸ್ತುತಪಡಿಸಿದರು.

ನಾಡಗೀತೆ, `ಈ ದೇಶ ಚೆನ್ನ~, `ಇಸ್ ದೇಶ್ ಮೇ ಗಂಗಾ ಬೆಹತೀ ಹೇ~, `ಏ ಮೇರೆ ವತನ್ ಕೇ ಲೋಗೋಂ~, `ನನ್ನಾ-ಮುನ್ನಾ...~ ಮುಂತಾದ ಗೀತೆಗಳನ್ನು ಡಾ. ಬದ್ರಿ ನಾರಾಯಣ ಶೆಟ್ಟಿ, ಎನ್. ಸೇತುರಾಂ, ರವೀಂದ್ರ ಅಮೃತ್‌ಕರ್, ಪಲ್ಲವಿ, ವರ್ಷಾ ಜೋಶಿ ಮುಂತಾದವರು ಹಾಡಿದರು.

ಜೋ ಫ್ಲೆಚರ್ (ಗಿಟಾರ್), ಡಾ. ಬದ್ರಿ (ಡ್ರಮ್ಸ) ಅವರ ಫ್ಯೂಜನ್‌ನಲ್ಲಿ ಮೂಡಿಬಂದ `ಕನ್ನಡ ಮಾತೆಗೆ ವಂದನೆ~ ಎಂಬ ಹಾಡು ಹೊಸ ಹುಮ್ಮಸ್ಸು ಮೂಡಿಸಿತು.ನವದೆಹಲಿಯ ಡಾ. ಸುಬ್ರಹ್ಮಣ್ಯ ಭಾರತಿ ಕೊನಾರಿ, ಬೆಳಗಾವಿಯ ಚಂದ್ರಶೇಖರ ಸವಡಿ, ಹುಬ್ಬಳ್ಳಿಯ ಎಂ.ಎಚ್. ಚಳ್ಳಮಠದ ಶೇಖ್, ಯಮನಪ್ಪ ಪೂಜಾರ, ಮಲ್ಲಪ್ಪ ಮುನವಳ್ಳಿ, ಕೆ.ಜಿ. ಮುನವಳ್ಳಿ, ಯು.ಎಸ್. ಮಲಳಿ ಅವರೊಂದಿಗೆ ಹುತಾತ್ಮ ಯೋಧ ಯಶವಂತ ಕೋಲ್ಕರ್ ಅವರ ಪತ್ನಿ ಸಾವಿತ್ರಿ ಅವರನ್ನು ಸನ್ಮಾನಿಸಲಾಯಿತು.

ಶಾಸಕ ವೀರಭದ್ರಪ್ಪ ಹಾಲಹರವಿ, ಯುವ ಮುಖಂಡ ಪ್ರದೀಪ ಶೆಟ್ಟರ, ಸಿಎಆರ್‌ನ  ಡಿಸಿಪಿ ಮನೋಹರ ಜೋಗಳೇಕರ, ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ದತ್ತಾ ಡೋರ್ಲೆ, ಪಾಂಜರಾ ಪೋಳ ಸಂಸ್ಥೆಯ ಸಂಸ್ಥಾಪಕ ಮೇಘರಾಜ ಕವಾಡ, ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಫೌಂಡೇ ಷನ್ ಸ್ಥಾಪಕ ಮನೋಜ ಹಾನಗಲ್, ಆರಾಧನಾ ಕಲಾ ಕುಂಜದ ಅಧ್ಯಕ್ಷ ಸ್ಟೀಫನ್ ಲುಂಜಾಳ್ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಚನ್ನಮ್ಮ ವೃತ್ತದಿಂದ ನಡೆದ ಮೆರವಣಿಗೆಯನ್ನು ಮಾಜಿ ಸಚಿವ ಬಸವರಾಜ ಹೊರಟ್ಟಿ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT