ಶನಿವಾರ, ನವೆಂಬರ್ 23, 2019
18 °C

ಈದ್ ಸಂಭ್ರಮಕ್ಕೆ ಸಜ್ಜಾದ ಶಿವಮೊಗ್ಗ

Published:
Updated:
Prajavani

ಶಿವಮೊಗ್ಗ: ಈದ್‌ ಮಿಲಾದ್ ಅಂಗವಾಗಿ ಶನಿವಾರ ಶಿವಮೊಗ್ಗದ ಮಸೀದಿಗಳು, ಪ್ರಮುಖ ವೃತ್ತಗಳು, ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. 

ಈದ್-ಮಿಲಾದ್ ಹಬ್ಬವನ್ನು ಶಾಂತಿತ, ಸುವ್ಯವಸ್ಥೆಯಿಂದ ಆಚರಿಸಲು ಮುಸ್ಲಿ ಸಮಾಜದ ಜನರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. 

ಹಬ್ಬದ ಸಮಯದಲ್ಲಿ ಅಹಿತಕರ ಘಟನೆಗಳು ಜರುಗದಂತೆ ಪೊಲೀಸರು ಎಲ್ಲೆಡೆ ಬಿಗಿ ಬಂದೋಬಸ್ತ್‌ ಮಾಡಿದ್ದಾರೆ. ಅಯೋಧ್ಯೆ ರಾಮ ಜನ್ಮಭೂಮಿ ವಿವಾದದ ತೀರ್ಪು ಹೊರ ಬಂದಿರುವ ಪರಿಣಾಮ ಭಾನುವಾರ ನಡೆಯುವ ಮೆರವಣಿಗೆಗೆ ಹೆಚ್ಚಿನ ಪೊಲೀಸರನ್ನು ನಿತೋಜಿಸಲಾಗಿದೆ. ಶಾಂತಿ ಕದಡದಂತೆ ತಾಕೀತು ಮಾಡಲಾಗಿದೆ. ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ವಹಿಸಲಾಗಿದೆ.

ಪ್ರತಿಕ್ರಿಯಿಸಿ (+)