ನ್ಯೂನತೆ ಮಧ್ಯೆಯೂ ಕರ್ತವ್ಯ ಪ್ರಜ್ಞೆ

ಬುಧವಾರ, ಏಪ್ರಿಲ್ 24, 2019
23 °C

ನ್ಯೂನತೆ ಮಧ್ಯೆಯೂ ಕರ್ತವ್ಯ ಪ್ರಜ್ಞೆ

Published:
Updated:
Prajavani

ಶಿವಮೊಗ್ಗ: ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಹಲವರು ವಿವಿಧ ಸಬೂಬು ಹೇಳಿ ತಪ್ಪಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಆದರೆ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ ತೀರ್ಥಹಳ್ಳಿ ತಾಲ್ಲೂಕು ಕನ್ನಂಗಿ ಶಾಖೆಯ ಸಹಾಯಕ ವ್ಯವಸ್ಥಾಪಕ ಸುಬ್ರಹ್ಮಣ್ಯ ಶಾಸ್ತ್ರಿ ಅದಕ್ಕೆ ಅಪವಾದ.

ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಅವರು ಮೈಕ್ರೊ ಅಬ್ಸರ್ವರ್ ಆಗಿ ನೇಮಕಗೊಂಡಿದ್ದಾರೆ.

ಕೆಲವು ವರ್ಷಗಳ ಹಿಂದೆ ಅಪಘಾತವಾಗಿ ಅವರ ಎರಡೂ ಕಾಲುಗಳಿಗೆ ರಾಡ್‌ ಹಾಕಲಾಗಿದೆ. ಊರುಗೋಲು ಸಹಾಯದಿಂದ ನಡೆದಾಡುತ್ತಾರೆ. ಬುಧವಾರ  ಜಿಲ್ಲಾಧಿಕಾರಿ ಕಚೇರಿಗೆ ಚುನಾವಣಾ ತರಬೇತಿಗೆ ಬಂದಿದ್ದ ಅವರ ಸ್ಥಿತಿ ಗಮನಿಸಿದ ಜಿಲ್ಲಾ ಚುನಾವಣಾಧಿಕಾರಿ ಕೆ.ಎ.ದಯಾನಂದ ಅವರು ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡಲು ಮುಂದಾದರು. ಅವರ ಕಾಳಜಿಯನ್ನು ನಯವಾಗಿ ತಿರಸ್ಕರಿಸಿದ ಶಾಸ್ತ್ರಿ ಅವರು ‘ನಿತ್ಯವೂ ನನ್ನದು ಇದೆ ಸಮಸ್ಯೆ. ಎಷ್ಟೇ ಶ್ರಮವಾದರೂ ಪರವಾಗಿಲ್ಲ. ಕರ್ತವ್ಯದಿಂದ ವಿಮುಖನಾಗುವುದಿಲ್ಲ. ಕೆಲಸಕ್ಕೆ ಸೇರಿದ ದಿನದಿಂದಲೂ ಪ್ರತಿ ಚುನಾವಣೆಯಲ್ಲೂ ತಪ್ಪದೆ ಭಾಗಿಯಾಗುತ್ತಾ ಬಂದಿದ್ದೇನೆ’ ಎಂದು ಹೇಳುತ್ತಾ ಸಹೋದ್ಯೋಗಿ ನಗರ ಗುರುದೇವ್ ಭಂಡಾರ್ಕರ್ ಅವರ ಜತೆ ತರಬೇತಿ ಕೊಠಡಿಯತ್ತ ಹೆಜ್ಜೆ ಹಾಕಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !