ತಪಾಸಣಾ ಕೇಂದ್ರಗಳಲ್ಲಿ ಕಾವಲು ಗೋಪುರ, ಶೆಡ್

ಶುಕ್ರವಾರ, ಮೇ 24, 2019
23 °C
ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದ ಜಿಲ್ಲಾಡಳಿತ

ತಪಾಸಣಾ ಕೇಂದ್ರಗಳಲ್ಲಿ ಕಾವಲು ಗೋಪುರ, ಶೆಡ್

Published:
Updated:

ಶಿವಮೊಗ್ಗ: ಈ ಬಾರಿ ಬೇಸಿಗೆ ಮುನ್ನವೇ ಬಿಸಿಲಿನ ತಾಪ ಏರಿಕೆಯಾಗುತ್ತಿದ್ದು, ಲೋಕಸಭಾ ಚುನಾವಣೆ ವೇಳೆ (ಚೆಕ್‌ಪೋಸ್ಟ್‌) ತಪಾಸಣಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ನೆರಳು ನೀಡುವ ವ್ಯವಸ್ಥಿತ ಕಾವಲು ಗೋಪುರ, ಶೆಡ್ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಿದೆ.

ಲೋಕಸಭಾ ಸಾರ್ವತ್ರಿಕ ಚುನಾವಣೆ ಈ ಬಾರಿ ಏಪ್ರಿಲ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಆ ಸಮಯದಲ್ಲಿ ಬಿಸಿಲಿನ ತಾಪ ಹೆಚ್ಚಿರುತ್ತದೆ. ಸುಡುಬಿಸಿಲಲ್ಲಿ ಕಾರ್ಯನಿರ್ವಹಿಸುವ ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಗೆ ಜಿಲ್ಲೆಯ ಪ್ರಮುಖ ತಪಾಸಣಾ ಕೇಂದ್ರಗಳಲ್ಲಿ ಅತ್ಯಾಧುನಿಕ ಸೌಲಭ್ಯ ಇರುವ ತಾತ್ಕಾಲಿಕ ಕಾವಲು ಗೋಪುರ ನಿರ್ಮಿಸಲಾಗುತ್ತಿದೆ.

ಮೂರು ತಿಂಗಳ ಹಿಂದೆ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ತಪಾಸಣಾ ಕೇಂದ್ರಗಳಲ್ಲಿ ಭಾರಿ ಮೊತ್ತದ ಹಣ ವಶಕ್ಕೆ ಪಡೆಯಲಾಗಿತ್ತು. ಸಿಬ್ಬಂದಿ ಚಳಿ, ಗಾಳಿ ಲೆಕ್ಕಿಸದೆ ಹಗಲು–ರಾತ್ರಿ ಕೆಲಸ ಮಾಡಿದ್ದರು. ಅದಕ್ಕಾಗಿ ಈ ಬಾರಿ ತಪಾಸಣಾ ಕೇಂದ್ರಗಳಲ್ಲಿ ಹೆಚ್ಚಿನ ಸಿಬ್ಬಂದಿ ನೇಮಿಸುವ ಜತೆಗೆ, ಸೂಕ್ತ ಸೌಕರ್ಯವನ್ನೂ ಕಲ್ಪಿಸಲಾಗುತ್ತಿದೆ.

ಪ್ರಾಥಮಿಕ ಹಂತದಲ್ಲಿ ತಪಾಸಣಾ ಕೇಂದ್ರಗಳ ಬಳಿ ಕಾವಲು ಗೋಪುರ, 8X8 ಅಳತೆಯ ಶೆಡ್‌ ನಿರ್ಮಿಸಲಾಗುತ್ತಿದೆ. ಈಗಾಗಲೇ ಮಾದರಿ ಶೆಡ್‌ ರೂಪಿಸಲಾಗಿದ್ದು, ಗಾಳಿ–ಬೆಳಕು ಇರುವಂತೆ ವ್ಯವಸ್ಥೆ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !