ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆಗೆ 5 ಹೊಸ ಕಾರ್ಯತಂತ್ರ

Last Updated 5 ಜೂನ್ 2018, 19:30 IST
ಅಕ್ಷರ ಗಾತ್ರ

2018–19 ನೇ ಹಣಕಾಸಿನ ವರ್ಷ ಆರಂಭವಾಗಿ ಒಂದು ತಿಂಗಳಷ್ಟೇ ಕಳೆದಿದೆ. ಮುಂದಿನ ವರ್ಷಕ್ಕೆ ತೆರಿಗೆ ಯೋಜನೆ ರೂಪಿಸಲು ಮತ್ತು ಹಣ ಹೂಡಿಕೆಗೆ ಇದು ಸೂಕ್ತವಾಗಿ ಸಮಯವಾಗಿದೆ. ಎಲ್ಲಿ ಹೂಡಿಕೆ ಮಾಡಬೇಕು, ಎಷ್ಟು ಹೂಡಿಕೆ ಮಾಡಬೇಕು ಎಂಬುದೆಲ್ಲ ನಿಮ್ಮ ಯೋಜನೆಯಲ್ಲಿ ಸೇರಿರಬೇಕು.

ಇದರಿಂದ ಆದಾಯ ತೆರಿಗೆಯಲ್ಲಿ ಎಷ್ಟು ಉಳಿತಾಯ ಮಾಡಬಹುದು ಎಂಬುದು ತಿಳಿಯುತ್ತದೆ. ಇದರೊಂದಿಗೆ ತುರ್ತು ನಿಧಿಯನ್ನೂ ಸಿದ್ಧಪಡಿಸಿಕೊಳ್ಳಬಹುದು. ಇದರ ಜತೆಗೆ ಸಾಲವನ್ನೂ ನಿರ್ವಹಣೆ ಮಾಡಬಹುದು. ಇದೆಲ್ಲದರಿಂದ ಭವಿಷ್ಯದ ಹಣಕಾಸು ಗುರಿಗಳನ್ನು ಯಾವುದೇ ಸಮಸ್ಯೆ ಇಲ್ಲದೆ ಮುಟ್ಟಬಹುದು.

ಹೆಚ್ಚಿನವರು ಹಣಗಳಿಸಲು ಕಷ್ಟಪಡುತ್ತಾರೆ. ಆದರೆ, ಅದನ್ನು ಉಳಿತಾಯ ಮಾಡುವಲ್ಲಿ ದಿವ್ಯ ನಿರ್ಲಕ್ಷ್ಯವಹಿಸುತ್ತಾರೆ. ಆದರೆ, ಹಣದ ನಿರ್ವಹಣೆಯ ಬಗ್ಗೆ ಸ್ವಲ್ಪ ಜಾಗ್ರತೆವಹಿಸಿದರೆ ಭವಿಷ್ಯದಲ್ಲಿ ಅದೇ ಹಣವು ಬಹು ವಿಧದಲ್ಲಿ  ನೆರವಿಗೆ ಬರುತ್ತದೆ. ಸಾಮಾನ್ಯವಾಗಿರುವ ಹೂಡಿಕೆಯ ಕಾರ್ಯತಂತ್ರಗಳ ಜತೆಗೆ ಇಲ್ಲಿ ಒಂದಷ್ಟು ಸಲಹೆಗಳಿವೆ.

ಇವುಗಳು ಹಣಕಾಸು ವರ್ಷದುದ್ದಕ್ಕೂ ವ್ಯಕ್ತಿಯು ಶಿಸ್ತು ಕಾಪಾಡಿಕೊಳ್ಳಲು ನೆರವಾಗುತ್ತದೆ. ಇದರಲ್ಲಿ ಒಂದು ಬಾರಿ ನೀವು ಯಶಸ್ವಿಯಾದರೆ ಬದುಕಿನ ಕೊನೆಯ ಹಂತದವರೆಗೂ ಸಂತಸದಿಂದ ಇರಬಹುದು. ಹೂಡಿಮೆ ಮತ್ತು ಹಣ ನಿರ್ವಹಣೆಯ ಐದು ಕಾರ್ಯತಂತ್ರಗಳನ್ನು ಇಲ್ಲಿ ವಿವರಿಸಲಾಗಿದೆ.

1. ಗುರಿಗೆ ಅನುಗುಣವಾದ ಹಣಕಾಸು ಯೋಜನೆ

ಹಣದ ವಿಷಯದಲ್ಲಿ ಸ್ಥಿರತೆ ಮತ್ತು ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಗುರಿಗಳಿಗೆ ಅನುಗುಣವಾಗಿ ಹಣಕಾಸು ಯೋಜನೆಯನ್ನು ಸಿದ್ಧಪಡಿಸಿಕೊಳ್ಳುವುದು ಅತಿ ಪ್ರಮುಖವಾದುದು. ಇದು ಮೊದಲ ಹಂತದ ಕ್ರಮ ಸಹ ಹೌದು. ಒಂದು ವೇಳೆ ನೀವು ಯಾವುದರಲ್ಲಾದರೂ ಹೂಡಿಕೆ ಮಾಡಬಹುದು ಇಲ್ಲವೇ ಮಾಡದೇ ಇರಬಹುದು.

ಆದರೆ, ಭವಿಷ್ಯಕ್ಕಾಗಿ ಹಣವನ್ನು ಉಳಿತಾಯ ಮಾಡಲೇಬೇಕು. ಹೊಸ ಮನೆ ಖರೀದಿಯ ಸಂದರ್ಭ ಬರಬಹುದು, ಕಾರು ಕೊಂಡುಕೊಳ್ಳಬೇಕಾಗಬಹುದು, ಇಲ್ಲವೇ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದೊಡ್ಡಮೊತ್ತದ ಅಗತ್ಯ ಎದುರಾಗಬಹುದು. ಅಂತಹ ಸಂದರ್ಭದಲ್ಲಿ ಉಳಿತಾಯ ನೆರವಿಗೆ ಬರುತ್ತದೆ.

2. ಮುಂಚಿತ ತೆರಿಗೆ ಯೋಜನೆ

ಹೆಚ್ಚಿನ ಸಂದರ್ಭಗಳಲ್ಲಿ ನಾವುಗಳು ಎಷ್ಟು ಹಣ ಹೂಡಿಕೆ ಮಾಡಿದರೆ ತೆರಿಗೆ ಕಡಿತವಾಗುವುದನ್ನು ತಪ್ಪಿಸಬಹುದು ಎಂದು ತಿಳಿದುಕೊಂಡಿರುತ್ತೇವೆ. ಎಲ್ಲಾ ಹೂಡಿಕೆಯನ್ನು ಒಂದರಲ್ಲಿಯೇ ಮಾಡುವ ಬದಲು ಸಣ್ಣ ಸಣ್ಣ ಪ್ರಮಾಣದಲ್ಲಿ ಬೇರೆ, ಬೇರೆ ಹಣಕಾಸು ಉತ್ಪನ್ನಗಳ ಮೇಲೆ ಹೂಡಿಕೆ ಮಾಡಬೇಕು. ಇದು ನಿರಂತರವಾಗಿರಬೇಕು.

3. ಖರ್ಚಿನ ಮೇಲೆ ಹಿಡಿತ, ತುರ್ತು ನಿಧಿ ನಿರ್ವಹಣೆ

ನಿಮ್ಮದೇ ಒಂದು ಬಜೆಟ್‌ ಸಿದ್ಧಪಡಿಸಿಕೊಳ್ಳಿ. ಅದರಲ್ಲಿ ಎಲ್ಲ ನಿಗದಿತವಾದ ಪ್ರತಿ ತಿಂಗಳ ಖರ್ಚುಗಳಾದ ಮನೆಬಾಡಿಗೆ, ಇಎಂಐ, ಮನೆಗೆ ಬೇಕಾದ ದಿನಸಿ ಸಾಮಾನಿನ ವೆಚ್ಚ ಸೇರಿದಂತೆ ಎಲ್ಲವೂಗಳ ವಿವರ ಇರಲಿ. ಈ ಎಲ್ಲ ವೆಚ್ಚಗಳಲ್ಲಿ ಯಾವುದಾದರೂ ಒಂದನ್ನು ಬಿಡಬಹುದೇ ಎಂದು ಯೋಚಿಸಿ. ಹಣ ಉಳಿತಾಯದ ಗುರಿಯನ್ನು ಹಾಕಿಕೊಳ್ಳಿ. ಗರಿಷ್ಠ ಮೊತ್ತದಷ್ಟು ಹಣ ಉಳಿತಾಯ ಮಾಡಲು ಯತ್ನಿಸಿ.

ನೀವು ಮಾಡುವ ಎಲ್ಲಾ ವೆಚ್ಚದ ಮೇಲೆ ನಿಮಗೆ ನಿಯಂತ್ರಣವಿರಲಿ. ಇದು ನಿಮ್ಮಲ್ಲಿ ಒಂದು ರೀತಿಯ ವಿತ್ತೀಯ ಶಿಸ್ತು ಮೂಡಿಸುವ ಜತೆಗೆ ನಿಮ್ಮದೇ ಆದ ‘ಉಳಿತಾಯ ಬಜೆಟ್‌’ ಮಾಡಿಕೊಳ್ಳಲು ನೆರವಾಗುತ್ತದೆ. ‘ವೆಚ್ಚದ ಬಜೆಟ್‌’ ಹೊರೆಯನ್ನು ತಪ್ಪಿಸುತ್ತದೆ. ಆರು ತಿಂಗಳಿಗೆ ಬೇಕಾದ ವೆಚ್ಚಕ್ಕಾಗಿ ತುರ್ತು ನಿಧಿಯನ್ನು ಸಂಗ್ರಹಿಸಿಟ್ಟುಕೊಳ್ಳಿ. ಇದರಲ್ಲಿ ದಿನನಿತ್ಯದ ಖರ್ಚುಗಳು, ಜೀವವಿಮೆ ಪಾಲಿಸಿ ಪ್ರೀಮಿಯಂ, ಇಎಂಐ, ಬಾಡಿಗೆ ಮತ್ತು ಮಕ್ಕಳ ಶಾಲಾ ವೆಚ್ಚ ಹೀಗೆ ಎಲ್ಲವೂ ಸೇರಿರಲಿ.

4. ಕ್ರೆಡಿಟ್‌ ಕಾರ್ಡ್‌ ಬಳಕೆ ಮಿತಿಯಲ್ಲಿ ಇರಲಿ

ನಗದು ಬಳಕೆಗಿಂತ ಡಿಬಿಟ್‌ ಮತ್ತು ಕ್ರೆಡಿಟ್ ಕಾರ್ಡ್‌ಗಳ (ಪ್ಲಾಸ್ಟಿಕ್‌ ಹಣ) ಬಳಕೆ ಮಾಡುವಲ್ಲಿ ನಾವುಗಳು ಯಾವಾಗಲೂ ಉದಾರಿಗಳಾಗಿರುತ್ತೇವೆ. ಇದರ ಮೇಲೆ ಹಿಡಿತ ಸಾಧಿಸಬೇಕು. ಇವುಗಳ ಬಳಕೆಗೆ ತಿಂಗಳ ಹಿಡಿತವಿರಲಿ. ತೀರಾ ತುರ್ತು ಸಂದರ್ಭಗಳಲ್ಲಿ ಮಾತ್ರವೇ ನಿಮ್ಮ ಕಾರ್ಡ್ ಬಳಕೆಯಾಗಲಿ.

5. ಸಾಲದ ಶೂಲದಿಂದ ದೂರವಿರಿ

ಸಾಲಗಾರರಾಗುವುದು ಸುಲಭ, ಆದರೆ, ಸಾಲದಿಂದ ಮುಕ್ತರಾಗುವುದು ತುಂಬಾ ಕಷ್ಟ. ತುಂಬಾ ಸಂಕಷ್ಟದ ಸಮಯದಲ್ಲಿ ಮಾತ್ರವೇ ಸಾಲದ ಮೊರೆ ಹೋಗಬೇಕು. ಇಲ್ಲದಿದ್ದರೆ ಇದು ನಿಮ್ಮ ’ವಿತ್ತೀಯ ಶಿಸ್ತನ್ನು’ ನಾಶ ಮಾಡಿಬಿಡುತ್ತದೆ. ನಿಗದಿತ ಸಮಯಕ್ಕೆ ಸರಿಯಾಗಿ ಸಾಲವನ್ನು ಪಾವತಿ ಮಾಡುವುದು ನಿಮ್ಮ ಹಣಕಾಸು ಸ್ಥಿರತೆಯನ್ನು ಉತ್ತಮಪಡಿಸುತ್ತದೆ. ಆದಷ್ಟು ಕಡಿಮೆ ಬಡ್ಡಿಯಲ್ಲಿ ಸಾಲಪಡೆಯುವುದು ಉತ್ತಮ.

ಡಿಕೆಯ ಹೊಸ ಕಾರ್ಯತಂತ್ರಗಳು

1. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌‌)

  ಪಿಪಿಎಫ್‌ – ಹೂಡಿಕೆಯ ಆಕರ್ಷಕ ಮೂಲವಾಗಿದೆ. ಇದೊಂದು ಸುರಕ್ಷಿತವಾದ ಮತ್ತು ದೀರ್ಘಾವಧಿಯ ಹೂಡಿಕೆಯ ಮೂಲ. ಇದಕ್ಕಿರುವ ಇನ್ನೊಂದು ಅನುಕೂಲವೆಂದರೆ ಪಿಪಿಎಫ್‌‌ನ ಪ್ರತಿಫಲ ತೆರಿಗೆ ಮುಕ್ತವಾದುದು.

ಇದಕ್ಕೆ 15 ವರ್ಷಗಳ ಲಾಕಿಂಗ್‌ ಅವಧಿ ಇದೆ. ಬ್ಯಾಂಕ್‌ ಇಲ್ಲವೇ ಅಂಚೆ ಕಚೇರಿಗಳಲ್ಲಿ ಪಿಪಿಎಫ್‌ ಖಾತೆಗಳಲ್ಲಿ ಹೂಡಿಕೆ ಮಾಡಲಾದ ಹಣವನ್ನು ಅವಧಿಗೆ ಮೊದಲೇ ತೆಗೆಯುವಂತಿಲ್ಲ. ಇದರಿಂದ ಚಕ್ರಬಡ್ಡಿ ಪಡೆಯಬಹುದು. ಇದರಲ್ಲಿ ಅವಧಿಯನ್ನು ಇನ್ನೂ ಐದು ವರ್ಷಗಳಿಗೆ ವಿಸ್ತರಿಸಬಹುದು. ಸದ್ಯದ ಬಡ್ಡಿದರ ಈ ವರ್ಷದ ಜನವರಿ 1 ರಿಂದ ಶೇ 7.6 ರಷ್ಟಿದೆ (ಪ್ರತಿ ವರ್ಷಕ್ಕೆ) ‌

2. ಮ್ಯೂಚುವಲ್‌ ಫಂಡ್‌

ಕೆಲ ಅನುಕೂಲಗಳಿರುವ ಕಾರಣ ಮ್ಯೂಚುವಲ್‌ ಫಂಡ್‌ಗಳಲ್ಲೂ ಈ ಹೂಡಿಕೆ ಮಾಡಬಹುದು. ಇದೂ ಸಹ ಸುರಕ್ಷಿತವಾಗಿದೆ. ತೆರಿಗೆ ಯೋಜನೆಗೆ ಅವಕಾಶವಿದೆ.

3. ಷೇರುಗಳ ಖರೀದಿ

ಷೇರು ಖರೀದಿಯಲ್ಲಿ  ಕೆಲವು ಅನನುಕೂಲಗಳಿನಎ. ಷೇರುಗಳ ಬೆಲೆಗಳು ಏರಿಕೆ ಇಳಿಕೆಯಾಗುವುದೇ ಇದಕ್ಕೆ ಕಾರಣ. ಮಾರುಕಟ್ಟೆಗಳಲ್ಲಿನ ವ್ಯತ್ಯಾಸಗಳಿಂದಾಗಿ ಷೇರು ಬೆಲೆ ಹೆಚ್ಚು ಕಡಿಮೆ ಆಗುತ್ತಿರುತ್ತದೆ. ಯಾವುದೇ ಕಂಪನಿಗಳಲ್ಲಿನ ಷೇರುಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಮೊದಲು ಆ ಕಂಪನಿಯ ಬಗ್ಗೆ ತಿಳಿದುಕೊಳ್ಳುವುದು ಅತೀ ಅಗತ್ಯ.

4. ಚಿನ್ನದ ಮೇಲೆ ಹೂಡಿಕೆ

ಚಿನ್ನ ಇಲ್ಲವೇ ಇತರ ಅತ್ಯಮೂಲ್ಯ ಲೋಹಗಳ ಮೇಲೆ ಹೂಡಿಕೆ ಮಾಡಬಹುದು. ನೇರವಾಗಿ ಚಿನ್ನವನ್ನು ಖರೀದಿ  ಮಾಡಬಹುದು.

5. ಅಂಚೆ ಕಚೇರಿ ಉಳಿತಾಯ ಯೋಜನೆಗಳು

ನಿರಂತರ ಆದಾಯ ಇರುವವರು ಅಂಚೆ ಕಚೇರಿಗಳಲ್ಲಿ ವಿವಿಧ ರೀತಿಯ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಇಲ್ಲಿನ ಹೂಡಿಕೆಯು ಸುರಕ್ಷಿತವಾಗಿರುತ್ತದೆ.

ಲೇಖಕ: ವೆಲ್ತ್ ಡಿಸ್ಕವರಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT