ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ 63 ಲಕ್ಷ ಉಳಿತಾಯ ಬಜೆಟ್‌ ಮಂಡನೆ

Last Updated 6 ಮಾರ್ಚ್ 2014, 8:37 IST
ಅಕ್ಷರ ಗಾತ್ರ

ಗಜೇಂದ್ರಗಡ: ಗಜೇಂದ್ರಗಡ ಪುರಸಭೆಯ 2014–15ನೇ ಸಾಲಿನ ನಿರೀಕ್ಷಿಸಲಾದ ಆಯ–ವ್ಯಯವನ್ನಯ ಬುಧವಾರ ಪುರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಂಡಿಸಲಾಯಿತು.

₨ 16.82 ಕೋಟಿ ಒಟ್ಟು ಆದಾಯವಾವಿದ್ದು, ₨ 63.65 ಲಕ್ಷ ಉಳಿತಾಯ, ₨ 16,18 ಕೋಟಿ ಒಟ್ಟು ಖರ್ಚುಗಳು ಎಂದು ಮಂಡಿಸಲಾಯಿತು. 2014–15ನೇ ಸಾಲಿನ ನಿರೀಕ್ಷಿಸಲಾದ ಬಜೆಟ್‌ ಪ್ರತಿಯನ್ನ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ ವನ್ನಾಲ ಮಂಡಿಸಿದರು.

‘ಆರಂಭ ಶಿಲ್ಕು ₨ 2.7 ಕೋಟಿ, ಆಸ್ತಿಕರ ವಸೂಲಾತಿ ₨ 45ಲಕ್ಷ, ವ್ಯಾಪಾರಿ ಪರವಾನಗಿ ಕರ ₨ 25ಲಕ್ಷ, ಕಟ್ಟಡ ಪರವಾನಗಿ ಶುಲ್ಕ ₨ 95 ಲಕ್ಷ, ಉತಾರ ಶುಲ್ಕ ₨ 1.5 ಲಕ್ಷ, ಆಸ್ತಿ ಹಸ್ತಾಂತರ ಶುಲ್ಕ ₨  12 ಲಕ್ಷ, ಅಭಿವೃದ್ಧಿ ಕರ ₨ 15 ಲಕ್ಷ, ಇತರೆ ರಾಜಸ್ವ ಆದಾಯಗಳು ₨ 95 ಲಕ್ಷ, ಎಸ್‌್.­ಡಿ/ಇಎಂಡಿ/ಠೇವಣಿ ಜಮಾ ₨ 25 ಲಕ್ಷ, ಮಾರುಕಟ್ಟೆ ಶುಲ್ಕ ₨ 20 ಲಕ್ಷ, ನಿರ್ದಿಷ್ಟ ಅನುದಾನದಿಂದ ರಾಜಸ್ವ ವೆಚ್ಚಕ್ಕಾಗಿ ವರ್ಗಾವಣೆ ₨ 64 ಲಕ್ಷ, ಎಸ್‌.ಎಫ್‌.ಸಿ ವೇತನ ಅನುದಾನ ₨ 1.8 ಕೋಟಿ, ಎಸ್‌.ಎಫ್‌.ಸಿ ಮುಕ್ತನಿಧಿ ಅನುದಾನ ₨ 3.2 ಕೋಟಿ   ನಿರೀಕ್ಷಿಸಲಾದ ಆದಾಯಗಳಾಗಿವೆ’ ಎಂದರು.

‘ಸಿಬ್ಬಂದಿ ವೇತನ ಮತ್ತು ಭತ್ಯೆಗಳು ₨ 1.28 ಕೋಟಿ, ರಸ್ತೆ ಹಾಗೂ ಗಟಾರಗಳ ದುರಸ್ತಿ ₨ 40 ಲಕ್ಷ, ಬೀದಿ ದೀಪಗಳ ದುರಸ್ತಿ ವೆಚ್ಚ ₨ 3.3ಲಕ್ಷ, ನೀರು ಸರಬರಾಜು ವಿದ್ಯುತ್‌ ವೆಚ್ಚ ₨ 3.2 ಲಕ್ಷ , ಪೈಪ್‌ಲೈನ್‌ಗಳ ದುರಸ್ತಿ ₨ 17 ಲಕ್ಷ, ಬೀದಿ ದೀಪಗಳ ಸಾಮಗ್ರಿ ಖರೀದಿ ₨ 6 ಲಕ್ಷ , ಕ್ರಿಮಿನಾಶಕಗಳ/ಬ್ಲಿಚಿಂಗ್‌ ಖರೀದಿ ₨ 10 ಲಕ್ಷ, ನೀರು ಸಂಗ್ರಹ ಸಾಮಗ್ರಿ ಖರೀದಿ ₨ 14 ಲಕ್ಷ, ಬೀದಿ ದೀಪಗಳ ನಿರ್ವಹಣಾ ವೆಚ್ಚ ₨ 12 ಲಕ್ಷ, ಸಗಟು ಖರೀದಿ–ನೀರು ₨ 5 ಲಕ್ಷ ಮುಂತಾದವು’ ನಿರೀಕ್ಷಿಸಲಾದ ವೆಚ್ಚಗಳು’ ಎಂದರು.

ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ, ಉಪಾಧ್ಯಕ್ಷೆ ಅಕ್ಕಮ್ಮ ಜಾನಾಯಿ, ಸದಸ್ಯರಾದ ಶರಣಪ್ಪ ರೇವಡಿ, ಪ್ರಭು ಚವಡಿ, ಚಂದ್ರು ಚಳಗೇರಿ, ಶೇಖಣ್ಣ ಇಟಗಿ, ರವಿ ಕಲಾಲ, ಮಂಜುನಾಥ ಬಡಿಗೇರ, ಶಿವಪ್ಪ ಸಂಕನೂರ, ಕಳಕಪ್ಪ ಗುಳೇದ, ಷಣ್ಮುಖಪ್ಪ ಚಿಲ್‌ಝರಿ, ಕಳಕಪ್ಪ ಗುಳೇದ, ಸುಮಿತ್ರಾ ತೊಂಡಿಹಾಳ, ಶಿವರಾಜ ಘೋರ್ಪಡೆ, ಎಂ.ಎಸ್‌.ಹಡಪದ, ಶಾರದಾಬಾಯಿ ರಾಠೋಡ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT