ಬುಧವಾರ, ಮಾರ್ಚ್ 29, 2023
25 °C

ಅಡುಗೆ ಅನಿಲ ಸ್ಫೋಟ; ಮೂವರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಗುಂದ (ಗದಗ ಜಿಲ್ಲೆ) : ಇಲ್ಲಿನ ಚಿಂದಿಪೇಟಿ ಓಣಿಯ ಬಸವಣ್ಣೆಪ್ಪ ಹಡ ಪದ ಅವರ ಮನೆಯಲ್ಲಿ ಗುರುವಾರ ರಾತ್ರಿ ಅಡುಗೆ ಸಿಲಿಂಡರ್ ಸೋರಿಕೆ ಯಾಗಿ ಸ್ಫೋಟಗೊಂಡು ಬಾಲಕ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಸವಣ್ಣೆಪ್ಪ ಹಡಪದ, ಬಾಲಕ ಆದರ್ಶ ಮತ್ತು ಆತನ ತಾಯಿ ಯಶೋಧಾ ಬೆಂತೂರ ಅವರಿಗೆ ಸುಟ್ಟ ಗಾಯಗಳಾಗಿವೆ. ಸ್ಫೋಟದ ತೀವ್ರತೆಗೆ ಮನೆಯ ಚಾವಣಿ ಕಿತ್ತು, ಪಕ್ಕದ ಮನೆಯ ಗೋಡೆಗೂ ಹಾನಿಯಾಗಿದೆ. ತಕ್ಷಣ ಸ್ಥಳಿ ಯರು ಬಂದು ಗಾಯಾಳುಗಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಸಿಪಿಐ ಅಶೋಕ ಸದಸಲಗಿ, ಭಾರತ್ ಗ್ಯಾಸ್ ವಿತರಕ ಅನುಪ ಕೆಂಚನಗೌಡ್ರ ಭೇಟಿ ನೀಡಿ ಪರಿಶೀಲಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು