ಗುರುವಾರ , ಜನವರಿ 27, 2022
28 °C

ಮುಳಗುಂದ: ಕೋವಿಡ್ ಜಾಗೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಗುಂದ: ವಾರಾಂತ್ಯದ ಕರ್ಪ್ಯೂ ಕಾರಣ ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿದ್ದವು. ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಪಾರ್ಸಲ್ ಮಾತ್ರ ನೀಡಲಾಯಿತು.  ಎಂದಿನಂತೆ ಸಾರ್ವಜನಿಕರ ಸಂಚಾರ ಇತ್ತು. ಹುಬ್ಬಳ್ಳಿ ಮಾರ್ಗದ ಬಸ್ ಸಂಚಾರ ಬಂದ್‌ ಆಗಿತ್ತು. ಗದಗ ಲಕ್ಷ್ಮೇಶ್ವರ ಬಸ್‍ಗಳು ಎಂದಿನಂತೆ ಸಂಚರಿಸಿದವು. ಬಸ್ ನಿಲ್ದಾಣದಲ್ಲಿ ಅಷ್ಟಾಗಿ ಜನಸಂದಣಿ ಇರಲಿಲ್ಲ.

ಪಟ್ಟಣ ಪಂಚಾಯ್ತಿ ವತಿಯಿಂದ ಕೋವಿಡ್ ಜಾಗೃತಿ ನಡೆಯಿತು. ಬ್ಯಾಂಕ್ ಆವರಣ, ಸರ್ಕಾರಿ, ಖಾಸಗಿ ಆಸ್ಪತ್ರೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪೌರಕಾರ್ಮಿಕರಿಂದ ಸೋಂಕು ನಿವಾರಕ ದ್ರಾವಣ ಸಿಂಪಡಣೆ ನಡೆಯಿತು. ಈ ಕುರಿತು ಪ.ಪಂ ಮುಖ್ಯಾಧಿಕಾರಿ ಎಂ.ಎಸ್.ಬೆಂತೂರ ಮಾತನಾಡಿ, ಸಾರ್ವಜನಿಕರು ಹೊರಗೆ ಬಂದಾಗ ಮಾಸ್ಕ್ ಧರಿಸಬೇಕು, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಂಡು ಸೋಂಕು ಹರಡದಂತೆ ಎಚ್ಚರ ವಹಿಸಿ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.