ನರೇಗಲ್: ಮೂಲಸೌಕರ್ಯಗಳು ಇಲ್ಲದ ಕಾಲದಿಂದ ಇಂದಿನವರೆಗೂ ವೈದ್ಯಕೀಯ ಸೇವೆ ಮಾಡುವ ಮೂಲಕ ನರೇಗಲ್ ಹೋಬಳಿಯಷ್ಟೇ ಅಲ್ಲದೆ ಗಜೇಂದ್ರಗಡ-ರೋಣ ಹಾಗೂ ಕಲ್ಯಾಣ ಕರ್ನಾಟಕ ಹಳ್ಳಿಗಳ ಜನರಿಗೂ ಚಿರಪರಿಚಿತರಾಗಿದ್ದಾರೆ ಹಿರಿಯ ವೈದ್ಯ ಡಾ. ಜಿ. ಕೆ. ಕಾಳೆ.

70ರ ದಶಕದಲ್ಲಿ ಎಂ.ಬಿ.ಬಿ.ಎಸ್. ಪದವಿ ಪೂರೈಸಿ, ಉತ್ತಮ ಪಾಂಡಿತ್ಯವಿದ್ದರು ಸಹ ದೂರದ ಪಟ್ಟಣಗಳಿಗೆ ಹೋಗದೆ ಗ್ರಾಮೀಣ ಭಾಗದಲ್ಲೇ ವೈದ್ಯಕೀಯ ಸೇವೆ ಮಾಡುವ ಉದ್ದೇಶದೊಂದಿಗೆ ನರೇಗಲ್ನಲ್ಲಿ ಆಸ್ಪತ್ರೆ ಆರಂಭಿಸಿ, 48 ವರ್ಷಗಳಿಂದ ಸೇವೆ ಒದಗಿಸುತ್ತಿದ್ದಾರೆ.

ಆರಂಭದ ದಿನಗಳಲ್ಲಿ ಬೆಳಿಗ್ಗೆ ರೋಗಿಗಳನ್ನು ತಪಾಸಣೆ ಮಾಡಿ ಸಂಜೆ ಸರ್ಕಾರಿ ಬಸ್ನಲ್ಲಿ ಗದಗ ನಗರಕ್ಕೆ ಹೋಗಿ ಔಷಧಿ, ಚುಚ್ಚುಮದ್ದು ಹಾಗೂ ವೈದ್ಯಕೀಯ ಪರಿಕರಗಳನ್ನು ತರುತ್ತಿದ್ದರು. ತಂತ್ರಜ್ಞಾನ ಇಲ್ಲದ ದಿನಗಳಲ್ಲಿ ನಾಡಿ ಮಿಡಿತ ಹಾಗೂ ರೋಗಿಗಳ ಮನಸ್ಥಿತಿ ಅರಿತು ತಪಾಸಣೆ ಮಾಡುತ್ತಿದ್ದರು. ನಂತರ ವೈದ್ಯಕೀಯ ಉಪಚಾರಕ್ಕೆ ಮುಂದಾಗುತ್ತಿದ್ದರು. ಹೀಗೆ ಪ್ರೀತಿಯಿಂದ ಆರೈಕೆ ಮಾಡುತ್ತಿದ್ದ ಕಾರಣ ಪ್ರತಿದಿನವೂ ಇವರಿಗಾಗಿ ದೂರದ ಊರುಗಳಿಂದ, ಸುತ್ತಮುತ್ತಲಿನ ಹಳ್ಳಿಗಳಿಂದ ಜನರು ಬರುತ್ತಾರೆ.

ಇವರ ಪತ್ನಿ ದಿ. ಮಂಗಲಾ ಕಾಳೆಯವರ ಸಹ ಉತ್ತಮ ವೈದ್ಯೆಯಾಗಿ ಸಹಕಾರ ನೀಡುತ್ತಿದ್ದರು. ಸದ್ಯ ಇವರ ಪುತ್ರ ಸರ್ಜನ್ ಡಾ. ಗಜಾನನ ಕಾಳೆ, ಸೊಸೆ ಡಾ. ಸಪ್ನಾ ಕಾಳೆ ಪ್ರಸೂತಿ ತಜ್ಞೆಯಾಗಿದ್ದು ಇವರೊಂದಿಗೆ ಸೇವೆ ಮಾಡುತಿದ್ದಾರೆ. ಇವರನ್ನು ವಿದೇಶಕ್ಕೆ, ದೊಡ್ಡ ನಗರಗಳಿಗೆ ಕಳುಹಿಸದೇ ಗ್ರಾಮೀಣ ಭಾಗದಲ್ಲಿ ಆಸ್ಪತ್ರೆ ಆರಂಭ ಮಾಡಿದ್ದಾರೆ.

ಡಾ. ಜಿ. ಕೆ. ಕಾಳೆಯವರು ವಯಸ್ಸಿನಲ್ಲಿ ಹಿರಿಯರಾದರು ಕೆಲಸದಲ್ಲಿ, ಸಮಯ ಪಾಲನೆಯಲ್ಲಿ ಯುವಕರು ನಾಚಿಸುವಂತೆ ಕ್ರಿಯಾತ್ಮಕವಾಗಿ ಇರುತ್ತಾರೆ. ತಮ್ಮ 76ನೇ ವಯಸ್ಸಿನಲ್ಲೂ ಸಹ ಬೆಳಿಗ್ಗೆ ಮತ್ತು ಸಂಜೆ ಎರಡು ಅವಧಿಯಲ್ಲಿ ನೂರಾರು ರೋಗಿಗಳನ್ನು ತಪಾಸಣೆ ಮಾಡುತ್ತಾರೆ. ಅವರಿಗೆ ಧೈರ್ಯ ತುಂಬಿ ಚಿಕಿತ್ಸೆ ನೀಡುತ್ತಾರೆ. ಸರಿಯಾದ ಮಾರ್ಗದರ್ಶನ ನೀಡುತ್ತಾರೆ. ಸ್ಥಳೀಯ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಚೇರ್ಮನ್ ಆಗಿಯೂ ಸೇವೆ ಮಾಡುತ್ತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಮಕ್ಕಳ ಜೊತೆಗೆ ಬೆರೆಯುತ್ತಾರೆ.

ಎಲ್ಲೆಡೆ ಜನರು ನೀಡುವ ಪ್ರೀತಿಗೆ ಚಿರಋಣಿಯಾಗಿರುವೆ. ಜೀವನದ ಕೊನೆವರೆಗೂ ಅವರಿಗೆ ವೈದ್ಯಕೀಯ ಸೇವೆ ಮಾಡುವೆ
ಡಾ. ಜಿ.ಕೆ.ಕಾಳೆ ಹಿರಿಯ ವೈದ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.