50ವರ್ಷಗಳಿಂದ ನಮ್ಮ ಕುಟುಂಬದ ಜಮೀನಿನಲ್ಲಿ ಹಮ್ಮಿಗಿ ಗ್ರಾಮಸ್ಥರು ಶವ ಸಂಸ್ಕಾರ ಮಾಡುತ್ತಿದ್ದು, ಜಮೀನು ಭಾಗಶಃ ಸ್ಮಶಾನವಾಗಿ ಪರಿವರ್ತನೆಯಾಗಿದೆ. ಅರ್ಧ ಜಮೀನು ತುಂಗಭದ್ರಾ ನದಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಇನ್ನರ್ಧ ಜಮೀನು ಸ್ಮಶಾನವಾಗಿದೆ. ಸರ್ಕಾರ ನಮಗೆ ಬೇರೆಡೆ ಜಮೀನು ಖರೀಸಿಕೊಟ್ಟರೆ ನಮ್ಮ ಜಮೀನನ್ನು ಸಂಪೂರ್ಣವಾಗಿ ಸ್ಮಶಾನಕ್ಕೆ ಬಿಟ್ಟುಕೊಡುತ್ತೇವೆ.ಶರಣಯ್ಯ ಕಲ್ಮಠ, ಹಮ್ಮಿಗಿ ಗ್ರಾಮಸ್ಥ
ತಿಪ್ಪಾಪುರ ಗ್ರಾಮ ಸೇರಿದಂತೆ ತಾಲ್ಲೂಕಿನ ಬಹುತೇಕ ಸ್ಮಶಾನಗಳು ರಸ್ತೆ, ನೀರು, ಸ್ವಚ್ಛತೆ ಮೊದಲಾದ ಮೂಲ ಸೌಕರ್ಯಗಳಿಂದ ವಂಚಿತಗೊಂಡಿವೆ. ಸ್ಮಶಾನಗಳ ನಿರ್ವಹಣೆಯು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತಿದ್ದು, ಆಯಾ ಗ್ರಾಮ ಪಂಚಾಯಿತಿಯವರು ತಮ್ಮ ಗ್ರಾಮಗಳ ಸ್ಮಶಾನಗಳಿಗೆ ಮೂಲ ಸೌಲಭ್ಯ ಒದಗಿಸಿ, ನಿಯಮಿತವಾಗಿ ಅವುಗಳನ್ನು ಸ್ವಚ್ಛ ಮಾಡಬೇಕು.ದೇವು ಹಡಪದ ಗ್ರಾ.ಪಂ. ಮಾಜಿ ಸದಸ್ಯ ತಿಪ್ಪಾಪುರ
ಸ್ಮಶಾನಕ್ಕೆ ತೆರಳಲು ಸೂಕ್ತ ರಸ್ತೆಗಳಿಲ್ಲದ್ದರಿಂದ ಅಂತ್ಯಕ್ರಿಯೆಗೆ ತೆರಳುವ ವೃದ್ಧರು ಹಾಗೂ ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮನರೇಗಾ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ತಾಲ್ಲೂಕಿನ ಎಲ್ಲ ಗ್ರಾಮಗಳ ಸ್ಮಶಾನಗಳಿಗೆ ಸುಕ್ತ ರಸ್ತೆ ನಿರ್ಮಿಸಿಕೊಡಬೇಕು. ಆಯಾ ಗ್ರಾಮ ಪಂಚಾಯ್ತಿಗಳಿಗೆ ಶವ ವಾಹನ ಖರೀಧಿಸಲು ಹಾಗೂ ಅದರ ನಿರ್ವಹಣೆಗೆ ಅಗತ್ಯ ಅನುದಾನ ನೀಡಬೇಕು.ಮೌನೇಶ ಬಡಿಗೇರ, ಹೆಸರೂರು ಗ್ರಾಮಸ್ಥ

ಕಪ್ಪತಗುಡ್ಡದ ಅಂಚಿನಲ್ಲಿರುವ ಗ್ರಾಮಗಳ ಅಕ್ಕಪಕ್ಕದಲ್ಲಿ ಕಾಡು ಪ್ರಾಣಿಗಳು ಓಡಾಡುತ್ತಿರುತ್ತವೆ. ಕೆಲವು ಸಂದರ್ಭಗಳಲ್ಲಿ ಕೆಲವು ಕಾಡು ಪ್ರಾಣಿಗಳು ಹೂತ ಶವವನ್ನು ಭಕ್ಷಿಸಲು ಪ್ರಯತ್ನಿಸುತ್ತವೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಕಪ್ಪತಗುಡ್ಡದ ಅಂಚಿನಲ್ಲಿರುವ ಗ್ರಾಮಗಳ ಸ್ಮಶಾನಗಳಿಗೆ ಕಡ್ಡಾಯವಾಗಿ ಕಂಪೌಡ್ ನಿರ್ಮಿಸಬೇಕು. ಹಾಗೂ ಸ್ಮಶಾನಗಳಿಗೆ ವಿದ್ಯುತ್ ದೀಪಗಳ ವ್ಯವಸ್ಥೆ ಕಲ್ಪಿಸಬೇಕು.ಕುಬೇರ ವೀರಾಪುರ ಹಾರೋಗೇರಿ ಗ್ರಾಮದ ಯುವಕ
ತಾಲ್ಲೂಕಿನ ಚಿಕ್ಕವಡ್ಡಟ್ಟಿ ಹಾಗೂ ಮತ್ತಿತರ ಕೆಲವು ಗ್ರಾಮಗಳಲ್ಲಿ ಖಬರಸ್ತಾನಗಳಿಲ್ಲದ್ದರಿಂದ ಮುಸ್ಲಿಂ ಸಮಾಜದವರು ತೊಂದರೆ ಅನುಭವಿಸುತ್ತಿದ್ದಾರೆ. ಖಬರಸ್ತಾನಕ್ಕೆ ಜಮೀನು ನೀಡಬೇಕೆಂದು ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.ನಬೀಸಾಬ್ ಕೆಲೂರ ಇಸ್ಲಾಂ ಕಮಿಟಿ ಮಾಜಿ ಅಧ್ಯಕ್ಷ ಮುಂಡರಗಿ
ಸ್ಮಶಾನಗಳಿಲ್ಲದ ಗ್ರಾಮಗಳಲ್ಲಿ ಜಮೀನು ಖರೀದಿಸಲು ಕಂದಾಯ ಇಲಾಖೆಯು ಸಿದ್ಧವಿದೆ. ಆದರೆ, ಗ್ರಾಮದ ರೈತರು ಜಮೀನು ಮಾರಲು ಮುಂದೆ ಬರುತ್ತಿಲ್ಲ. ಹೀಗಾಗಿ ಕೆಲವು ಗ್ರಾಮಗಳಲ್ಲಿ ಸ್ಮಶಾನ ಸಮಸ್ಯೆ ಉಂಟಾಗಿದೆ.ವಿಶ್ವನಾಥ ಹೊಸಮನಿ, ಇಒ ತಾ.ಪಂ. ಮುಂಡರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.