ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಎರಡು ಪದಕ

ಎರಡನೇ ಹಂತದ ಆರ್ಚರಿ ವಿಶ್ವಕಪ್‌ ಟೂರ್ನಿ
Last Updated 25 ಮೇ 2018, 19:28 IST
ಅಕ್ಷರ ಗಾತ್ರ

ಅಂತಾಲ್ಯ, ಟರ್ಕಿ: ಭಾರತದ ಕಾಂಪೌಂಡ್‌ ತಂಡದವರು ಎರಡನೇ ಹಂತದ ಆರ್ಚರಿ ವಿಶ್ವಕಪ್‌ನಲ್ಲಿ ಎರಡು ಪದಕಗಳನ್ನು ಗೆದ್ದಿದ್ದಾರೆ.

ಶುಕ್ರವಾರ ನಡೆದ ಮಹಿಳೆಯರ ತಂಡ ವಿಭಾಗದಲ್ಲಿ ಭಾರತ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿತು.

ಜ್ಯೋತಿ ಸುರೇಖಾ ವೆನ್ನಾಮ್‌, ಮುಸ್ಕಾನ್‌ ಕಿರಾರ್‌ ಮತ್ತು ದಿವ್ಯಾ ದಯಾಳ್‌ ಅವರಿದ್ದ ತಂಡ ಫೈನಲ್‌ನಲ್ಲಿ ಮೂರು ಪಾಯಿಂಟ್ಸ್‌ನಿಂದ ಚೀನಾ ತೈಪೆ ಎದುರು ಪರಾಭವಗೊಂಡಿತು.

ಮಿಶ್ರ ತಂಡ ವಿಭಾಗದಲ್ಲಿ ಭಾರತ ಕಂಚಿನ ಪದಕ ತನ್ನದಾಗಿಸಿಕೊಂಡಿತು.

ಕಂಚಿನ ಪದಕದ ‘ಪ್ಲೇ ಆಫ್‌’ನಲ್ಲಿ ಮೂರನೇ ಶ್ರೇಯಾಂಕಿತ ಜೋಡಿ ಅಭಿಷೇಕ್‌ ವರ್ಮಾ ಮತ್ತು ಜ್ಯೋತಿ 158–155ರಲ್ಲಿ ಬೆಲ್ಜಿಯಮ್‌ನ ರೆಜಿನಾಲ್ಡ್‌ ಕೂಲ್ಸ್‌ ಮತ್ತು ಸಾರಾ ಪ್ರೀಲ್ಸ್‌ ಅವರನ್ನು ಸೋಲಿಸಿತು.

ಪುರುಷರ ರಿಕರ್ವ್‌ ತಂಡದವರು ಆರಂಭಿಕ ಸುತ್ತಿನಲ್ಲೇ ಮುಗ್ಗರಿಸಿದರು.

ಲಿನ್‌ ಮಿಂಗ್‌ ಚಿಂಗ್‌, ಚೆನ್‌ ಯಿ ಸುವಾನ್‌ ಮತ್ತು ಚೆನ್‌ ಲೀ ಜು ಅವರಿದ್ದ ತಂಡ 117–112ರಿಂದ ಭಾರತವನ್ನು ಮಣಿಸಿತು.

ಮಹಿಳೆಯರ ರಿಕರ್ವ್‌ ತಂಡ ವಿಭಾಗದಲ್ಲಿ ಭಾರತಕ್ಕೆ ಕಂಚು ಗೆಲ್ಲುವ ಅವಕಾಶವಿದೆ.

ಶನಿವಾರ ನಡೆಯುವ ಕಂಚಿನ ಪದಕದ ‘ಪ್ಲೇ ಆಫ್‌’ ಹಣಾಹಣಿಯಲ್ಲಿ ದೀಪಿಕಾ ಕುಮಾರಿ, ಪ್ರಮೀಳಾ ದಯಿಮೇರಿ ಮತ್ತು ಅಂಕಿತಾ ಭಗತ್‌ ಅವರು ಚೀನಾ ತೈಪೆಯ ಲೀ ಚಿಯೆನ್‌ ಯಿಂಗ್‌, ಪೆಂಗ್‌ ಚಿಯಾ ಮಾವೊ ಮತ್ತು ತಾನ್‌ ಯಾ ಟಿಂಗ್‌ ವಿರುದ್ಧ ಸೆಣಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT