ಬುಧವಾರ, ಡಿಸೆಂಬರ್ 11, 2019
20 °C

ಮೂತ್ರಕೋಶದಿಂದ 150ಗ್ರಾಂ ತೂಕದ ಕಲ್ಲು ಹೊರತೆಗೆದ ವೈದ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ರೋಣ: ಶಸ್ತ್ರಚಿಕಿತ್ಸೆ ಮೂಲಕ ವೃದ್ದೆಯೊಬ್ಬಳ ಮೂತ್ರಕೋಶದಲ್ಲಿದ್ದ 150 ಗ್ರಾಂ ತೂಕದ ದೊಡ್ಡ ಕಲ್ಲನ್ನು ಹೊರತೆಗೆಯುವಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಡಾ. ಎಚ್.ಎಲ್.ಗಿರಡ್ಡಿ ನೇತೃತ್ವದ ವೈದ್ಯರ ತಂಡ ಯಶಸ್ವಿಯಾಗಿದೆ.

ಹೊಟ್ಟೆನೋವಿನಿಂದ ಬಳಲುತ್ತಿದ್ದ ಇಲ್ಲಿಗೆ ಸಮೀಪದ ಕೊತಬಾಳ ಗ್ರಾಮದ ಅಮಿನಭಿ ಗರಿಬಸಾಬ ಮುಳಗುಂದ(60) ಅವರು ಚಿಕಿತ್ಸೆಗಾಗಿ ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಮೂತ್ರಕೋಶದಲ್ಲಿ 7 ಸೆ.ಮಿ ಉದ್ದ, 5 ಸೆ.ಮೀ ಅಗಲದ ದೊಡ್ಡ ಕಲ್ಲು ಇರುವುದು ಪರೀಕ್ಷೆಯ ವೇಳೆ ತಿಳಿಯಿತು. ಶಸ್ತ್ರ ಚಿಕಿತ್ಸೆ ಮೂಲಕ ಈ ಕಲ್ಲು ಹೊರತೆಗೆಯಲು ವೈದ್ಯರ ತಂಡ ನಿರ್ಧರಿಸಿತು.

‘ಮಂಗಳವಾರ ಬೆಳಿಗ್ಗೆ ಶಸ್ತ್ರಚಿಕಿತ್ಸೆ ನಡೆಸಿ, ಮೂತ್ರಕೋಶದಿಂದ ಕಲ್ಲು ಹೊರತೆಗೆಯಲಾಗಿದೆ. ಅಮಿನಭಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಡಾ.ಎಚ್.ಎಲ್.ಗಿರಡ್ಡಿ ತಿಳಿಸಿದರು.

ಪ್ರತಿಕ್ರಿಯಿಸಿ (+)