ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ ಲೋಕಸಭಾ ಕ್ಷೇತ್ರ: ಸಂಯುಕ್ತಾ ಪರ ಶಿವಶರಣಗೌಡ ಪ್ರಚಾರ

Published 5 ಏಪ್ರಿಲ್ 2024, 16:18 IST
Last Updated 5 ಏಪ್ರಿಲ್ 2024, 16:18 IST
ಅಕ್ಷರ ಗಾತ್ರ

ನರಗುಂದ: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಸಚಿವ ಶಿವಾನಂದ ಪಾಟೀಲರ ಸಹೋದರ ಶಿವಶರಣಗೌಡ ಪಾಟೀಲ ಗುರುವಾರ ಸಂಜೆ ಪಟ್ಟಣದ ಕಾಂಗ್ರೆಸ್ ಮುಖಂಡ ಡಾ.ಸಂಗಮೇಶ ಕೊಳ್ಳಿ ಅವರ ಕಾರ್ಯಾಲಯದಲ್ಲಿ ಪ್ರಚಾರ ಸಭೆ ನಡೆಸಿದರು.

ಶಿವಶರಣಗೌಡ ಪಾಟೀಲ ಮಾತನಾಡಿ, ‘ದೇಶದ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮೂಲಕ ಜನಹಿತ ಬಯಸಿದೆ. ಮಹಿಳೆಯರ, ಬಡವರ ವಿಶ್ವಾಸ ಗಳಿಸಿದೆ. ಆದ್ದರಿಂದ ಜನರು ಕಾಂಗ್ರೆಸ್‌ಗೆ ಬೆಂಬಲಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಮಾಧ್ಯಮ ವಕ್ತಾರ ಡಾ‌.ಸಂಗಮೇಶ ಕೊಳ್ಳಿಯವರ ಮಾತನಾಡಿ, ‘ಬಿಜೆಪಿ ಜನವಿರೋಧಿ ನೀತಿಯಿಂದ ಬೇಸತ್ತಿದ್ದಾರೆ. ಕಾಂಗ್ರೆಸ್‌ಗೆ ಈ ಸಲ ಹೆಚ್ಚಿನ ಜನ ಬೆಂಬಲಿಸಲಿದ್ದಾರೆ. ಸಂಯುಕ್ತಾ ಪಾಟೀಲ ಅವರು ಆಯ್ಕೆ ಯಾಗುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ್ ಇಂಡಿ, ಬಿ.ಕೆ. ಮೆಣಸಗಿ, ಬಿ.ಎಂ. ಮೆಣಸಗಿ, ಸಿ. ಆರ್. ಪಾಟೀಲ, ಹನುಮಂತ ಅಣ್ಣಿಗೇರಿ, ಬಸವರಾಜ ಹಡಗಲಿ, ಬಿ.ಬಿ. ಶೆಲ್ಲಿಕೇರಿ, ಬಿ.ಡಿ. ಪಾಟೀಲ, ವಿ.ಎನ್. ಕೊಳ್ಳಿಯವರ, ಶೇಖರಗೌಡ ಪಾಟೀಲ್, ವಿನಯಕುಮಾರ್ ಪಾಟೀಲ, ಶರಣಪ್ಪ ಮೇಟಿ, ಮುತ್ತಣ್ಣ ಹರ್ತಿ ಹಾಗೂ ಕಾಂಗ್ರೆಸ್ ಯುವ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT