ಶಾಸಕರ ಭಾವಚಿತ್ರಕ್ಕೆ ಶಿಕ್ಷಕ ದಂಪತಿ ಪೂಜೆ ..!

7
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರ

ಶಾಸಕರ ಭಾವಚಿತ್ರಕ್ಕೆ ಶಿಕ್ಷಕ ದಂಪತಿ ಪೂಜೆ ..!

Published:
Updated:
Deccan Herald

ನರೇಗಲ್: ಶಿಕ್ಷಕ ದಂಪತಿ, ರೋಣ ಶಾಸಕ ಕಳಕಪ್ಪ ಜಿ. ಬಂಡಿ ಅವರ ಭಾವಚಿತ್ರವನ್ನು ಮನೆಯಲ್ಲಿ ದೇವರ ಜಗುಲಿಯ ಮೇಲಿಟ್ಟು ಪೂಜೆ ಮಾಡುತ್ತಿರುವ ಮತ್ತು ಅವರ ಹೆಸರಿನಲ್ಲಿ ಉರುಳು ಸೇವೆ ಮಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ನರೇಗಲ್‌ ಪಟ್ಟಣದ ರಾಮನಗೌಡ ಪಾಟೀಲ ಮತ್ತು ಪತ್ನಿ ಪ್ರಭಾವತಿ ಅವರು, ಶಾಸಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಿರುವ ಚಿತ್ರಗಳು ಸ್ಥಳೀಯವಾಗಿ ಹಲವು ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಕೆಲವು ದಿನಗಳಿಂದ ಹರಿದಾಡುತ್ತಿವೆ.

ರಾಮನಗೌಡ ಅವರು ನರೇಗಲ್ ಪಟ್ಟಣದ ಅಬ್ಬಿಗೇರಿ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಶಾಲೆಯ ಸಹ ಶಿಕ್ಷಕರು. ಇತ್ತೀಚೆಗೆ ಅಪಘಾತದಲ್ಲಿ ಕಾಲು ಮುರಿದಿರುವುದರಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.ಪ್ರಭಾವತಿ ಅವರು ಜಕ್ಕಲಿ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಸಹ ಶಿಕ್ಷಕಿ.

‘ಈ ಚಿತ್ರಗಳು ಎರಡು ತಿಂಗಳ ಹಿಂದಿನವು. ಶಾಸಕರು ನಮ್ಮ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.ಅದಕ್ಕಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದೇವೆ. ಈ ಚಿತ್ರಗಳನ್ನು ಶಾಸಕರ ವಾಟ್ಸ್‌ಆ್ಯಪ್‌ ಸಂಖ್ಯೆಗೆ ಕಳುಹಿಸಲಾಗಿತ್ತು. ಈಗ ಹೇಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತೋ ಗೊತ್ತಿಲ್ಲ. ಇದರಿಂದ ನಮ್ಮ ವೈಯಕ್ತಿಕ ಬದುಕಿಗೆ ತೊಂದರೆಯಾಗಿದೆ’ ಎಂದು ದಂಪತಿ ಪತ್ರಿಕೆಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !