ರಾಮ ನಾಮ ಸ್ಮರಣೆ; ತೊಟ್ಟಿಲೋತ್ಸವ ಸಂಭ್ರಮ

ಶನಿವಾರ, ಏಪ್ರಿಲ್ 20, 2019
31 °C
ಗದುಗಿನ ವಿವಿಧ ದೇವಸ್ಥಾನಗಳಲ್ಲಿ ರಾಮನವಮಿ ಆಚರಣೆಗೆ ಸಿದ್ಧತೆ ಪೂರ್ಣ

ರಾಮ ನಾಮ ಸ್ಮರಣೆ; ತೊಟ್ಟಿಲೋತ್ಸವ ಸಂಭ್ರಮ

Published:
Updated:
Prajavani

ಗದಗ: ರಾಮ ನವಮಿ ಅಂಗವಾಗಿ ಏ.13 ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಗದಗ–ಬೆಟಗೇರಿ ಅವಳಿ ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ ಹವನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಬೆಟಗೇರಿಯ ಹೆಲ್ತ್‌ಕ್ಯಾಂಪ್, ಟರ್ನಲ್ ಪೇಟೆಯಲ್ಲಿರುವ ರಾಮ ಮಂದರಿ, ಸಾಯಿಬಾಬಾ ದೇವಸ್ಥಾನ, ರಾಘವೇಂದ್ರ ಮಠ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ರಾಮ ಜನ್ಮದಿನೋತ್ಸವ ಆಚರಣೆ ಅಂಗವಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಶುಕ್ರವಾರ ಸಂಜೆ ನಗರದ ಪ್ರಮುಖ ರಾಮ ಮಂದಿರಗಳ ಆವರಣದಲ್ಲಿ ಪೆಂಡಾಲ್‌ ಹಾಕಲಾಯಿತು. ತಳಿರು ತೋರಣಗಳಿಂದ ಸಿಂಗರಿಸಲಾಯಿತು.

ರಾಮನವಮಿ ಹಿಂದಿನ ದಿನ ಅಂದರೆ ಶುಕ್ರವಾರ ಭಕ್ತರು ಉಪವಾಸ ಆಚರಣೆ ಮಾಡುತ್ತಾರೆ. ಶನಿವಾರ ಬೆಳಿಗ್ಗೆ ದೇವಸ್ಥಾನಗಳಿಗೆ ತೆರಳಿ ವಿಶೆಷ ಪೂಜೆ ಸಲ್ಲಿಸುತ್ತಾರೆ. ದೇವಸ್ಥಾನಗಳಿಗೆ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗುತ್ತದೆ.ಶುಕ್ರವಾರ ನಗರದ ರಾಮಮಂದಿರಗಳಲ್ಲಿ ಮಹಿಳೆಯರು ಹೂವಿನ ಅಲಂಕಾರದಲ್ಲಿ ತೊಡಗಿದ್ದ ದೃಶ್ಯ ಕಂಡುಬಂತು. 

ಇಂದು, ನಾಳೆ ವಿವಿಧ ಕಾರ್ಯಕ್ರಮ: ನಗರದ ಕುಷ್ಟಗಿ ಚಾಳದಲ್ಲಿರುವ ರಾಮ ಮಂದಿರದಲ್ಲಿ ಏ.13 ರಂದು ಬೆಳಿಗ್ಗೆ 8.30ಕ್ಕೆ ರಾಮನಾಮ ತಾರ ಘವನ ಹೋಮ, 10.30ಕ್ಕೆ ಅಭಿಷೇಕ, ವಿಶೇಷ ಅಲಂಕಾರ, 12ಕ್ಕೆ ಮಹಿಳೆಯರಿಂದ ಶ್ರೀರಾಮ ತೊಟ್ಟಿಲೋತ್ಸವ ಹಾಗೂ 12.30ಕ್ಕೆ ಪಾನಕ, ಕೊಸಂಬರಿ ಪ್ರಸಾದ ವಿತರಿಸಲಾಗುವುದು. ರಾತ್ರಿ 9ಕ್ಕೆ ಅಷ್ಟಾವಧಾನ ಸೇವಾ ವಿಶೇಷ ಪೂಜೆ ನೆರವೇರಲಿದೆ. ಏ.14ರಂದು ಬೆಳಿಗ್ಗೆ 8.30ಕ್ಕೆ ಸೀತಾ ಕಲ್ಯಾಣೋತ್ಸವ ಕಾರ್ಯಕ್ರಮ, 10.30ಕ್ಕೆ ಅಭಿಷೇಕ, ಅಲಂಕಾರ, ಮಧ್ಯಾಹ್ನ 12ಕ್ಕೆ ನೈವೇದ್ಯೆ ಹಾಗೂ 1ಕ್ಕೆ ಮಹಾ ಪ್ರಸಾದ ಕಾರ್ಯಕ್ರಮ ನಡೆಯಲಿದೆ.

ಏ.19ರಂದು ಬೆಳಿಗ್ಗೆ 6ಕ್ಕೆ ಕುಷ್ಟಗಿ ಚಾಳದ ಆಂಜನೇಯ ದೇವಸ್ಥಾನದಲ್ಲಿ ತೊಟ್ಟಿಲೋತ್ಸವ, 8.30ಕ್ಕೆ ಹೋಮ ಹವನ, ಮಧ್ಯಾಹ್ನ 12ಕ್ಕೆ ನೈವೇದ್ಯೆ ಮಾಡಿ, ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ಅರ್ಚಕ ದಿವಾಕರ ಕೃಷ್ಣಭಟ್ಟ ದೀಕ್ಷಿತ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !