ಹುಬ್ಬಳ್ಳಿ-ಹೊಸಪೇಟೆ ರೈಲಿನಲ್ಲಿ ಕಳ್ಳತನ ?

7
ಗದಗ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಜಾಗೃತಿಗಾಗಿ ಪೊಲೀಸರಿಂದ ಅಣಕು ಪ್ರದರ್ಶನ

ಹುಬ್ಬಳ್ಳಿ-ಹೊಸಪೇಟೆ ರೈಲಿನಲ್ಲಿ ಕಳ್ಳತನ ?

Published:
Updated:
Deccan Herald

ಗದಗ: ಹುಬ್ಬಳ್ಳಿ–ಗದಗ–ಹೊಸಪೇಟೆ ಮಾರ್ಗದ ರೈಲಿನಲ್ಲಿ ಬುಧವಾರ ಕಳ್ಳರು ಕೈಚಳಕ ತೋರಿದ್ದು, ಪ್ರಯಾಣಿಕರಿಗೆ ಮತ್ತು ಬರುವ ತಿನಿಸು ನೀಡಿ, ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾದ ಘಟನೆ ನಡೆದಿದೆ.

ಆತಂಕಕ್ಕೆ ಒಳಗಾಗಬೇಡಿ. ಇದು ಪ್ರಯಾಣಿಕರ ಜಾಗೃತಿಗಾಗಿ ರೈಲ್ವೆ ಸುರಕ್ಷತಾ ಪಡೆಯ (ಆರ್‌ಪಿಎಫ್‌) ಸಿಬ್ಬಂದಿ ನಡೆಸಿದ ಅಣಕು ಪ್ರದರ್ಶನ. ರೈಲಿನಲ್ಲಿ ಪ್ರಯಾಣಿಸುವವರು ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಬುಧವಾರ ನಗರದ ರೈಲು ನಿಲ್ದಾಣದ ಆವರಣದಲ್ಲಿ ಬೀದಿ ನಾಟಕ ಪ್ರದರ್ಶನ ನಡೆಯಿತು.

‘ಎಚ್ಚರ ಪ್ರಯಾಣಿಕರೇ, ಎಚ್ಚರ’ ಎಂಬ ಘೋಷವಾಕ್ಯದಲ್ಲಿ ಈ ಪ್ರದರ್ಶನ ಗಮನ ಸೆಳೆಯಿತು. ನಗರದಿಂದ ವಿವಿಧೆಡೆ ತೆರಳಲು ರೈಲು ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಮತ್ತು ರೈಲಿನಿಂದ ಇಳಿದ ಪ್ರಯಾಣಿಕರು ಈ ಅಣಕು ಪ್ರದರ್ಶನವನ್ನು ಕುತೂಹಲದಿಂದ ವೀಕ್ಷಿಸಿದರು. ಪ್ರಯಾಣದ ವೇಳೆ ಅಪರಿಚಿತ ವ್ಯಕ್ತಿಗಳು ಪ್ರಯಾಣಿಕರ ಸ್ನೇಹ ಸಂಪಾದಿಸಿ, ಮೋಸ ಮಾಡಿ, ಚಿನ್ನಾಭರಣ, ಬ್ಯಾಗ್‌ ಕಳ್ಳತನ ಮಾಡುವ ದೃಶ್ಯಗಳನ್ನು ಕಲಾವಿದರು ಪರಿಣಾಮಕಾರಿಯಾಗಿ ಪ್ರದರ್ಶಿಸಿದರು.
‘ರೈಲ್ವೆ ನಿಲ್ದಾಣಗಳಲ್ಲಿ ಅನುಮಾನಾಸ್ಪದವಾಗಿ ತಿರುಗಾಡುವ, ಅಳುವ ಮಕ್ಕಳನ್ನು ನೋಡಿದರೆ ತಕ್ಷಣ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಬೇಕು. ರೈಲುಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ ಇರುತ್ತದೆ. ಒಂಟಿ ಮಹಿಳೆಯರು ಈ ಬೋಗಿಯಲ್ಲಿ ಪ್ರಯಾಣಿಸಬೇಕು. ಹೆಣ್ಣುಮಕ್ಕಳಿಗೆ ಕಿಡಿಗೇಡಿಗಳು ತೊಂದರೆ ನೀಡಿದರೆ ತಕ್ಷಣ ಸಹಾಯವಾಣಿಗೆ ಕರೆ ಮಾಡಬಹುದು’ ಎಂಬುದನ್ನು ದೃಶ್ಯ ರೂಪಕಗಳ ಮೂಲಕ ತೆರೆದಿಟ್ಟರು.

ಕಲಾ ತಂಡದಲ್ಲಿ ಮಂಜುನಾಥ, ಚನ್ನಬಸು ಅಳಗುಂಡಗಿ, ಬಸವರಾಜ ಆಡಗಲ್, ಕಲ್ಮೇಶ್ವರ ಸೊಬರದ, ಜಗದೀಶ ಮೋರೆ, ಭಾನುಪ್ರಕಾಶ ಕೆ.ವಿ., ದೇವರಾಜ್ ಎಸ್., ಕವಿ ಜಲಗಾರ, ಅಂಬರೀಶ, ಮಹೇಶ ತಳವಾರ, ನಿಜಗುರಿ ಮೊಂಗಿ, ಶಂಭು ಬಿರಾದಾರ, ಅಶ್ವಿನಿ ನವಲೂರ, ಮಂಜಪ್ಪ ಲಮಾಣಿ ಇದ್ದರು.

ಆರ್‌ಪಿಎಫ್‌ ಎಎಸ್‍ಐ ವಿ.ಆರ್. ಚಿಕ್ಕೊಪ್ಪ, ಪಿಎಸ್‍ಐ ರಮೇಶ ಟಿ, ಸುಲೋಚನಾ, ಆನಂದ ಅಂಬಿಗೇರ, ಲಕ್ಷ್ಮಿ ಪಾಟೀಲ, ಸುನಂದಾ ಎಸ್. ಭಾಗವಹಿಸಿದ್ದರು.

ರೈಲಿನಲ್ಲಿ ತೊಂದರೆಯಾದರೆ 182 ಸಂಖ್ಯೆಗೆ ಕರೆ ಮಾಡಿ 

ಪೊಲೀಸ್ 100, ಅಗ್ನಿಶಾಮಕ 101 ತುರ್ತು ದೂರವಾಣಿ ಸಂಖ್ಯೆ ಮಾದರಿಯಲ್ಲಿ ರೈಲ್ವೆ ಸುರಕ್ಷಾ ದಳವು ರೈಲು ಪ್ರಯಾಣಿಕರಿಗಾಗಿ 182 ಸಹಾಯವಾಣಿ ಆರಂಭಿಸಿದೆ. ಪ್ರಯಾಣದ ವೇಳೆ ತೊಂದರೆಯಾದರೆ ಈ ಸಂಖ್ಯೆಗೆ ಕರೆ ಮಾಡಿದರೆ, ರೈಲ್ವೆ ಪೊಲೀಸರು ನೆರವಿಗೆ ಧಾವಿಸುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !