ಸಾಲಮನ್ನಾ ಅಧಿಕೃತ ಆದೇಶ ಹೊರಡಿಸಿ: ಶ್ರೀನಿವಾಸ ಪೂಜಾರಿ

7

ಸಾಲಮನ್ನಾ ಅಧಿಕೃತ ಆದೇಶ ಹೊರಡಿಸಿ: ಶ್ರೀನಿವಾಸ ಪೂಜಾರಿ

Published:
Updated:
Deccan Herald

ಗದಗ:‘ಸಾಲಮನ್ನಾ ಕೇವಲ ಬಜೆಟ್ ಘೋಷಣೆಯಾಗಿದೆ.ಇದಕ್ಕೆ ಸಂಬಂಧಿಸಿದಂತೆ ಇನ್ನೆರಡು ದಿನಗಳಲ್ಲಿ ಅಧಿಕೃತ ಆದೇಶ ಹೊರಡಿಸದಿದ್ದರೆ, ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು’ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘104 ಸ್ಥಾನ ಹೊಂದಿರುವ ಬಿಜೆಪಿಗೆ ಅಧಿಕಾರ ತಪ್ಪಿರಬಹುದು,ಆದರೆ, ಜನರ ಪರವಾಗಿ ನಡೆಸುವ ಹೋರಾಟ ತಡೆಯಲು ಸಾಧ್ಯವಿಲ್ಲ’ ಎಂದರು.

‘ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿ ಆಗಿರುವ ಅವ್ಯವಹಾರದ ಕುರಿತು ತನಿಖೆ ನಡೆಸಲು ಸದನ ಸಮಿತಿ ರಚಿಸಬೇಕು. ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲು ‘ಮರಳು ನೀತಿ’ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.
‘ಬಜೆಟ್‌ ಮಂಡನೆಯಾದಾಗಲೇ, ರಾಜ್ಯದ ಕೆಲವು ಭಾಗಗಳಿಗೆ ತಾರತಮ್ಯ ಆಗಿದ್ದು, ಸರಿಪಡಿಸುವಂತೆ ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಅವರು ನಿರ್ಲಕ್ಷ್ಯ ವಹಿಸಿದ್ದಕ್ಕೆ ಇಂದು ಪ್ರತ್ಯೇಕತೆಯ ಕೂಗು ಎದ್ದಿದೆ.ಇದಕ್ಕೆ ಸರ್ಕಾರವೇ ಹೊಣೆ. ಅಭಿವೃದ್ಧಿ ವಿಚಾರದಲ್ಲಿ ಸಮಾನ ಪ್ರಾತಿನಿಧ್ಯ ಕಲ್ಪಿಸಬೇಕು’ ಎಂದರು.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಶಾಸಕ ಸಿ.ಸಿ. ಪಾಟೀಲ, ಎಸ್.ವಿ. ಸಂಕನೂರ, ಎನ್.ರವಿಕುಮಾರ,ರಾಮಣ್ಣ ಲಮಾಣಿ ಇದ್ದರು.

ಅಕ್ರಮ–ಸಕ್ರಮ ಹಕ್ಕುಪತ್ರ ಅರ್ಜಿಗಳು - 1618
ಹಕ್ಕುಪತ್ರ ವಿತರಣೆಯಾಗಿರುವುದು - 44
ನಗರ ಪ್ರದೇಶದಲ್ಲಿ ತಿರಸ್ಕೃತಗೊಂಡ ಅರ್ಜಿಗಳು - 1220
ಸರ್ವರಿಗೂ ಸೂರು ಮಂಜೂರಾದ ಮನೆಗಳು - 33,160
ಇದುವರೆಗೆ ನಿರ್ಮಾಣಗೊಂಡ ಮನೆಗಳು - 12,306
ತಾಂತ್ರಿಕ ಕಾರಣದಿಂದ ಹಂಚಿಕೆಯಾಗದ ಮನೆಗಳು - 2,339

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !