ಕಸದ ತೊಟ್ಟಿಯಾದ ಸಿಕ್ಕಲಗಾರ ಕಾಲೊನಿ..!

7

ಕಸದ ತೊಟ್ಟಿಯಾದ ಸಿಕ್ಕಲಗಾರ ಕಾಲೊನಿ..!

Published:
Updated:
Deccan Herald

ಗದಗ: ನಾಲ್ಕು ಸಾವಿರಕ್ಕೂ ಹೆಚ್ಚು ಮನೆಗಳಿರುವ ನಗರದ 32ನೇ ವಾರ್ಡ್‌ನಲ್ಲಿ ಸ್ವಚ್ಛತೆಯದ್ದೇ ದೊಡ್ಡ ಸಮಸ್ಯೆ. ದಾಸರ ಓಣಿ, ಮಾನ್ವಿ ಕಾರ್ಖಾನೆ ಪ್ರದೇಶ, ಸಿಕ್ಕಲಗಾರ ಓಣಿ, ಖಾಜಿ ಓಣಿಯನ್ನು ಒಳಗೊಂಡ ಈ ಪ್ರದೇಶದಲ್ಲಿ ಎಲ್ಲಿ ಸಂಚರಿಸಿದರೂ ಕಸದ ರಾಶಿ ಕಣ್ಣಿಗೆ ರಾಚುತ್ತದೆ.

ಪ್ರತಿನಿತ್ಯ ವಾರ್ಡ್‌ನಲ್ಲಿ ಒಂದು ಟ್ರ್ಯಾಕ್ಟರ್‌ ಭರ್ತಿಯಾಗುವಷ್ಟು ಕಸ ಸಂಗ್ರಹಣೆಯಾಗುತ್ತದೆ. ವಾರ್ಡ್ ವ್ಯಾಪ್ತಿಯಲ್ಲಿ ವಿವಿಧೆಡೆ 10ಕ್ಕೂ ಹೆಚ್ಚು ಕಸದ ಡಬ್ಬಿಗಳನ್ನು ಇಡಲಾಗಿದೆ. ಸದಾ ಕಾಲ ಇವು ತುಂಬಿ ತುಳುಕುತ್ತಿರುತ್ತವೆ. ಕಸದ ತೊಟ್ಟಿ ತುಂಬಿ, ಉಳಿದ ತ್ಯಾಜ್ಯಗಳು ಚರಂಡಿಯೊಳಗೆ ಬಿದ್ದು, ಚರಂಡಿ ಕಟ್ಟಿಕೊಂಡಿವೆ.

ಪೌರಕಾರ್ಮಿಕರು ಹೆಸರಿಗಷ್ಟೇ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಾರೆ. ಚರಂಡಿಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸುವುದಿಲ್ಲ. ಮಳೆಯಾದರೆ ಚರಂಡಿ ನೀರು ಮನೆಯೊಳಗೆ ನುಗ್ಗುತ್ತದೆ. ದುರ್ವಾಸನೆ ನಡುವೆ ಜೀವನ ಸಾಗಿಸಬೇಕಾದ ಸ್ಥಿತಿ ಇದೆ’ ಎಂದು ದಾಸರ ಓಣಿ ಹಾಗೂ ಸಿಕ್ಕಲಗಾರ ಓಣಿಯ ನಿವಾಸಿಗಳು ದೂರಿದರು. ಈ ಪ್ರದೇಶಗಳು ಸೊಳ್ಳೆಗಳ ಆವಾಸ ತಾಣವಾಗಿಯೂ ಬದಲಾಗಿದೆ.

‘ಚುನಾವಣೆ ಬಂದಾಗ ಮಾತ್ರ ಜನಪ್ರತಿನಿಧಿಗಳು ನಮ್ಮ ಬಳಿಗೆ ಬರುತ್ತಾರೆ. ಸಮಸ್ಯೆ ಆಲಿಸುತ್ತಾರೆ. ಸಮರ್ಪಕ ತ್ಯಾಜ್ಯ ವಿಲೇವಾರಿಗೆ ನಗರಸಭೆ ಕ್ರಮ ವಹಿಸಬೇಕು’ ಎಂದು ನಿವಾಸಿಗಳಾದ ಬಸವರಾಜು ಎಸ್.ಎಂ, ಸಲೀಂ ಢಾಲಾಯತ, ಸುಲೇಮಾನ್ ಮನಿಯಾರ ಆಗ್ರಹಿಸಿದರು.

‘ಕಸದ ತೊಟ್ಟಿಗಳನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲು 35 ವಾರ್ಡ್‌ಗಳೂ ಸೇರಿ ಒಂದೇ ವಾಹನ ಇದೆ. ಇದರಿಂದ ಕನಿಷ್ಠ 10 ದಿನಕ್ಕೊಮ್ಮೆ ಒಂದು ವಾರ್ಡ್‌ನ ಪಾಳಿ ಬರುತ್ತದೆ. ನಾಲ್ಕು ವಾಹನಗಳಿದ್ದರೆ, ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡಬಹುದು’ ಎಂದು ವಾರ್ಡ್‌ ಸದಸ್ಯ, ನಗರಸಭೆ ಹಂಗಾಮಿ ಅಧ್ಯಕ್ಷರೂ ಆಗಿರುವ ಪ್ರಕಾಶ ಬಾಕಳೆ ಅಭಿಪ್ರಾಯಪಟ್ಟರು.

ಕಸ ವಿಲೇವಾರಿಗೆ ಹೆಚ್ಚುವರಿ ವಾಹನ ಖರೀದಿಸುವ ಸಲುವಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ
- ಪ್ರಕಾಶ ಬಾಕಳೆ, 32ನೇ ವಾರ್ಡ್‌ ಸದಸ್ಯ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !