ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿನ ಸಮಸ್ಯೆ: ಸದನದಲ್ಲಿ ಸಂಕನೂರ ಪ್ರಶ್ನೆ

Last Updated 23 ಮಾರ್ಚ್ 2017, 9:15 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯ ಗಜೇಂದ್ರಗಡ, ರೋಣ ಮತ್ತು ನರೇಗಲ್ ಪಟ್ಟಣಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಅವರು ಸದನದಲ್ಲಿ ಕೇಳಿದ್ದ ಪ್ರಶ್ನೆಗೆ, ಪೌರಾಡಳಿತ ಸಚಿವ, ಈಶ್ವರ ಖಂಡ್ರೆ ಲಿಖಿತ ಉತ್ತರ ನೀಡಿದ್ದು, ಈಗಾಗಲೇ ಈ ತಾಲ್ಲೂಕುಗಳಲ್ಲಿ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಗಜೇಂದ್ರಗಡ ಪಟ್ಟಣ ಸತತ ಬರ ಎದುರಿಸುತ್ತಿದ್ದು, ಪುರಸಭೆ ವ್ಯಾಪ್ತಿಯಲ್ಲಿ ಯಾವುದೇ ನದಿ ಮೂಲ ಇಲ್ಲದಿರುವುದರಿಂದ ಕುಡಿಯುವ ನೀರಿಗೆ ಸಂಪೂರ್ಣವಾಗಿ ಅಂತರ್ಜಲ ಅವಲಂಬಿಸಲಾಗಿದೆ.

ಕೊಳವೆ ಬಾವಿಗಳಿಂದ ನೀರೆತ್ತಿ, ಸಂಗ್ರಹಿಸಿ ನಂತರ ವಾರ್ಡುಗಳಿಗೆ 10ರಿಂದ 12 ದಿನಕ್ಕೊಮ್ಮೆ ಪೂರೈಸಲಾಗುತ್ತದೆ. ಅಲ್ಲದೆ, 10 ಟ್ಯಾಂಕರ್‌  ಮೂಲಕವೂ ಅವಶ್ಯಕತೆ ಅನುಗುಣವಾಗಿ ಎಲ್ಲಾ 23 ವಾರ್ಡುಗಳಿಗೆ ಪ್ರತಿನಿತ್ಯ 45ರಿಂದ 50 ಟ್ಯಾಂಕರಗಳಷ್ಟು ನೀರು ಪೂರೈಸಲಾಗುತ್ತಿದೆ ಎಂದು ಅವರು ಉತ್ತರ ನೀಡಿದ್ದಾರೆ ಎಂದು ಸಂಕನೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ನಗರಾಭಿವೃದ್ಧಿ ಇಲಾಖೆಯಿಂದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಬಿಡುಗಡೆಯಾದ ಅನುದಾನದಲ್ಲಿ ಎಸ್.ಎಫ್.ಸಿ. ಹಾಗೂ 14ನೇ ಹಣಕಾಸು ಯೋಜನೆಯಡಿಯಲ್ಲಿ ಕುಡಿಯುವ ನೀರು ಸರಬರಾಜು ಕುರಿತು ಕ್ರಿಯಾ ಯೋಜನೆಯನ್ನು ತಯಾರಿಸಿ ಅನುಮೋದನೆ ನೀಡಲಾಗಿದೆ ಎಂದು ಅವರು ಉತ್ತರದಲ್ಲಿ ವಿವರಿಸಿದ್ದಾರೆ.

14ನೇ ಹಣಕಾಸು ಯೋಜನೆಯ ಸಾಮಾನ್ಯ ಮೂಲ ಅನುದಾನದಲ್ಲಿ  ಕೊರೆಯಿಸಲಾದ ಬೋರವೆಲ್ ಮೂಲಕ ಪಟ್ಟಣಕ್ಕೆ ನೀರು ಸರಬರಾಜು ಮಾಡಲು ₹ 23.80 ಲಕ್ಷಗಳಲ್ಲಿ ಪೈಪ್‌ಲೈನ ಕಾಮಗಾರಿಗೆ ಮಂಜೂರಾತಿ ನೀಡಿದ್ದು ಕಾಮಗಾರಿ ಸದ್ಯದಲ್ಲಿಯೇ ಪ್ರಾರಂಭಿಸಲಾಗುವುದು ಹಾಗೂ ಪ್ರಸಕ್ತ ಸಾಲಿನ 14ನೇ ಹಣಕಾಸು ಸಾಮಾನ್ಯ ಮೂಲ ನಿಧಿಯ ಮೂಲಕ ₹ 30.04 ಲಕ್ಷಗಳಲ್ಲಿ 3 ಶುದ್ದ ಕುಡಿಯುವ ನೀರಿನ ಘಟಕ ಸಹ ಅಳವಡಿಸಲಾಗುವುದು ಎಂದು ಖಂಡ್ರೆ  ಹೇಳಿದ್ದಾರೆ.

ರೋಣ ಪಟ್ಟಣದಲ್ಲಿ ಪುರಸಭೆಯಿಂದ ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆ ಆಗುತ್ತಿರುವ ವಿಷಯದ ಕುರಿತು ಸಂಕನೂರ ಅವರು ಕೇಳಿದ ಪ್ರಶ್ನೆಗೆ ಸಚಿವರು,  ರೋಣ ಪಟ್ಟಣದಲ್ಲಿ ಸದ್ಯ 40 ಬೋರ್‌ವೆಲ್‌ಗಳಿಂದ ಹಾಗೂ ಈಗಾಗಲೇ ಮಲಪ್ರಭಾ ನದಿಗೆ ನೀರು ಬಿಡುಗಡೆ ಆಗಿರುವುದರಿಂದ  ಚೊಳಚ ಗುಡ್ಡದಲ್ಲಿರುವ ಜಾಕ್‍ವೆಲ್ ಮೂಲಕ ನೀರನ್ನು ಪಂಪ್ ಮಾಡಿ ಸದ್ಯ 15 ದಿನಗಳಿಂದ ನೀರು ಪೂರೈಕೆ ಆಗುತ್ತಿದ್ದು, 3 ದಿನಗಳಿಗೊಮ್ಮೆ ಪಟ್ಟಣದಲ್ಲಿ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಮೇ ತಿಂಗಳ ಅಂತ್ಯದವರೆಗೆ ರೋಣ ಪಟ್ಟಣಕ್ಕೆ ಯಾವುದೇ ತೊಂದರೆ ಇರುವುದಿಲ್ಲ ಎಂದು ತಿಳಿಸಿರುವುದಾಗಿ ಸಂಕನೂರ ಹೇಳಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT