ನರಗುಂದ: ಪಟ್ಟಣದ ದಂಡಾಪುರ ವ್ಯಾಪ್ತಿಯಲ್ಲಿ ಶನಿವಾರ ನಡೆದ ಜನಸ್ಪಂದನ ಸಭೆಯಲ್ಲಿ ಜನರೇ ಬಾರದೇ ಕೇವಲ ಅಧಿಕಾರಿಗಳೇ ಇದ್ದು ದರಿಂದ ಪುರಸಭೆ ಸದಸ್ಯ ರಾಮಕೃಷ್ಣ ಗೊಂಬಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪುರಸಭೆ ಸದಸ್ಯರಾಗಿದ್ದರೂ ಸಭೆಯ ಮಾಹಿತಿ ನೀಡದ ಗ್ರಾಮ ಲೆಕ್ಕಾ ಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಜನರಿಗೆ ಸರಿಯಾಗಿ ಮಾಹಿತಿ ಇಲ್ಲ. ಹೀಗಾದರೆ ಈ ಸಭೆಗೆ ಜನರು ಹೇಗೆ ಬರಲು ಸಾಧ್ಯ. ಕೇವಲ ಅಧಿಕಾರಿಗಳು ಬಂದರೆ ಸಾಲದು. ಆದ್ದರಿಂದ ಈ ಸಭೆಯನ್ನು ಮುಂದೂಡಲೇಬೇಕು ಎಂದು ಗೊಂಬಿ ಹಾಗೂ ಪ್ರಕಾಶ ಪಟ್ಟಣಶೆಟ್ಟಿ ಆಗ್ರಹಿಸಿ ಪಟ್ಟುಹಿಡಿದಿ ದ್ದರಿಂದ ಸಭೆಯನ್ನು ತಹಶೀಲ್ದಾರ ಗಣಾಚಾರಿಯವರು ಸಭೆಯನ್ನು ಮುಂದೂಡಲಾಗಿದೆ ಎಂದು ಪ್ರಕಟಿಸಿ ್ದದರಿಂದ ಕೇವಲ 10 ನಿಮಿಷ ಗಳ್ಲ್ಲಲಿ ಮೊಟಕುಗೊಂಡಿತು.

ಸ್ಥಳದ ಗೊಂದಲ: ದಂಡಾಪರ ವ್ಯಾಪ್ತಿಯ ಜನಸ್ಪಂದನ ಸಭೆಯನ್ನು ಆ ಸ್ಥಳದಲ್ಲಿ ನೆರವೇರಿಸದೇ ಪುರಸಭೆ ಸಮೀಪದ ಬಾಬಾಸಾಹೇಬರ ಕಲಾ ಭವನದಲ್ಲಿ ನಿಗದಿಪಡಿಸಿದ್ದರಿಂದ ಇದರ ಬಗ್ಗೆ ಜನರಿಗೆ ಮಾಹಿತಿ ದೊರೆಯದೇ ಸ್ಥಳದ ಗೊಂದಲ ಏರ್ಪಟ್ಟು ಜನರು ಆಗಮಿಸದಂತಹ ಸ್ಥಿತಿ ನಿರ್ಮಾಣ ವಾಗಿತ್ತು.

ಇದನ್ನರಿತು ಮುಂದೂಡಲ್ಪಟ್ಟ ಸಭೆ ಯನ್ನು ದಂಡಾಪೂರದ ಉಡ ಚಾಪರ ಮೇಶ್ವರಿ ದೇವಸ್ಥಾನದಲ್ಲಿ ನೆರ ವೇರಿ ಸಲು ನಿರ್ಧರಿಸಲಾಗಿದೆ ಎಂದು ತಹಸೀ ಲ್ದಾರ ಪ್ರಕಟಿಸಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಚಂದ್ರಶೇಖರ ಕೋಟಿ, ಉಪಾಧ್ಯಕ್ಷ ಉಮೇಶ ಯಮೋಜಿ, ವಸಂತ ಜೋಗಣ್ಣವರ, ತಹಶೀಲ್ದಾರ ಪಿ.ಐ. ಗಣಾಚಾರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.