ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಸೀಲ್ದಾರ ನಕಲಿ ಸಹಿ: ಬಂಧನ

Last Updated 6 ಫೆಬ್ರುವರಿ 2012, 7:15 IST
ಅಕ್ಷರ ಗಾತ್ರ

ಡಂಬಳ: ಟ್ರ್ಯಾಕ್ಟರ್ ಬಳಕೆ ಸಂಬಂಧ ಕೃಷಿ ಬಳಕೆ ಪ್ರಮಾಣ ಪತ್ರಕ್ಕೆ ತಹಸೀಲ್ದಾರ ಹೆಸರನ್ನು ನಕಲಿ (ಫೋರ್ಜರಿ) ಸಹಿ ಮಾಡಿದ ವ್ಯಕ್ತಿಯನ್ನು ಡಂಬಳ ಪೊಲೀಸರು ಬಂಧಿಸಿದ್ದಾರೆ.

ಮುಂಡರಗಿ ತಾಲ್ಲೂಕಿನ ಸಿಂಗಟರಾಯನಕೇರಿ ತಾಂಡದ ರಮೇಶ ಹನಮಪ್ಪ ರಾಠೋಡ ಎಂಬಾತನೇ ಪೋರ್ಜರಿ ಸಹಿ ಮಾಡಿ ಇದೀಗ ಪೊಲೀಸ್ ಬಂಧಿನಕ್ಕೆ ಒಳಗಾಗಿದ್ದಾನೆ.

ಘಟನೆ ಹಿನ್ನಲೆ: ಟ್ರ್ಯಾಕ್ಟರ್ ನೋಂದಾಣಿ ಸಮಯದಲ್ಲಿ ವಿಳಾಸದಲ್ಲಿ ಲಮಾಣಿ ಬದಲಾಗಿ ರಾಠೋಡ ಅಂತಾ ಇದ್ದು, ವಿಳಾಸ ಬದಲಾವಣೆ ಮಾಡಿಕೊಡಲು ಅಧಿಕಾರಿಗಳು ಸೂಚಿಸಿದ್ದಾರೆ. ವಿಳಾಸ ಬದಲಾಣೆಗಾಗಿ ಡಂಬಳ ಉಪತಹಸೀಲ್ದಾರಿಗೆ ಬಂದು ತೋರಿಸಿದಾಗ ದಾಖಲೆ ಪತ್ರದಲ್ಲಿ ತಹಸೀಲ್ದಾರ ರಮೇಶ ಕೋನರಡ್ಡಿ ಅವರ ಸಹಿ ಖೊಟ್ಟಿ ಬಗ್ಗೆ ನಾಡ ಕಚೇರಿ ಸಿಬ್ಬಂದಿಗೆ ಮನವರಿಕೆಯಾಗಿದ್ದು, ಪ್ರಕರಣ ಬೆಳಕಿಗೆ ಬಂದಿದೆ.

ಅನುಕ್ರಮ ಸಂಖ್ಯೆಯೂ ಖೊಟ್ಟಿ: ಡಂಬಳ ನಾಡ ಕಚೇರಿಯಲ್ಲಿದ್ದ ಆರೋಪಿ ರಮೇಶ ರಾಠೋಡನನ್ನು ಮುಂಡರಗಿ ತಹಸೀಲ್ದಾರ ರಮೇಶ ಕೋನರಡ್ಡಿ ಅವರು ಪ್ರಾಥಮಿಕ ಹಂತವಾಗಿ ವಿಚಾರಿಸಿದಾಗ ತಹಸೀಲ್ದಾರ ಹೆಸರಿನ ರೌಂಡ್ ಶೀಲ್ ಹಾಗೂ ತಹಸೀಲ್ದಾರ ಮುಂಡರಗಿ ಎಂಬುವ ಮುದ್ರೆ ಹಾಕಿರುವ ಡಿಟಿಪಿ ಮಾಡಿಸಿರುವ ಪ್ರತಿ ಕಳೆದ ತಿಂಗಳು 16ರಂದು ಪ್ರಮಾಣ ಪತ್ರದಲ್ಲಿದ್ದು, ಇಲಾಖೆಯ ಪತ್ರ ವ್ಯವಹಾರ ಅನುಕ್ರಮ ಸಂಖ್ಯೆ ಕೂಡ ಖೊಟ್ಟಿ ಆಗಿದ್ದು ಕಂಡು ಬಂದಿದೆ.

ನಕಲಿ ದಾಖಲೆ ಹಿಂದೆ ಕಾಣದ ಕೈಗಳೂ ಕೆಲಸ ಮಾಡಿರುವದು ಈ ಪ್ರಕರಣದಿಂದಾಗಿ ಬೆಳಕಿಗೆ ಬಂದಿದೆ. ಈ ನಕಲಿ ದಾಖಲೆ ಸೃಷ್ಟಿಸಿ, ಖೊಟ್ಟಿ ಸಹಿ ಮಾಡಿರುವ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ವ್ಯಕ್ತಿಯೂ ಪೊಲೀಸರ  ಬಳಿ ಹೇಳಿಕೆ ನೀಡಿ,  ಈ ಖೊಟ್ಟಿ ದಾಖಲೆ, ಇಲಾಖೆಯ ಹೆಸರಿನ ಶೀಲ್ ಮತ್ತು ಅಧಿಕಾರಿಗಳ ಸಹಿ ಎಲ್ಲವನ್ನು ಮುರಡಿ ಗ್ರಾಮದ ಸೋಮಶೇಖರ ರಂಗಾಪುರ ಎಂಬಾತ ಖೊಟ್ಟಿ ದಾಖಲೆ ಸೃಷ್ಟಿಸಿದ್ದಾನೆ.
 
ಆ ವ್ಯಕ್ತಿಯನ್ನು ಟ್ರ್ಯಾಕ್ಟರ್ ಏಜೆಂಟ್ ಪವಾರ ಈ ರಂಗಾಪುರನನ್ನು ಪರಿಚಯಸಿದ್ದಾನೆ ಎಂದು ರಮೇಶ ರಾಠೋಡ ಮುಂಡರಗಿ ಪೊಲೀಸರು ಪ್ರಾಥಮಿಕ ತನಿಖೆಗೆ ಒಳಪಡಿಸಿದಾಗ ಹೇಳಿಕೆ ನೀಡಿದ್ದಾನೆ.

ಖೊಟ್ಟಿ ದಾಖಲೆ ಸೃಷ್ಟಿ: ಕ್ರಿಮಿನಲ್ ಮೊಕದ್ದಮೆ
ಕಂದಾಯ ಇಲಾಖೆ ಹಾಗೂ ಸರ್ಕಾರಿ ಸೌಲಭ್ಯ ಪಡೆಯಲು ಖೊಟ್ಟಿ ದಾಖಲೆ ಸೃಷ್ಟಿ ಮಾಡಿ ಕಾನೂನು ಕೈಗೆ ತಗೆದುಕೊಳ್ಳುವರ ಮಟ್ಟ ಹಾಕುವ ನಿಟ್ಟಿನಲ್ಲಿ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು ಹಾಗೂ ಇತಂಹ ವ್ಯಕ್ತಿಗಳ ಪತ್ತೆ ಮಾಡಲು ವ್ಯಾಪಕ ಜಾಲ ಬೀಸುವುದಾಗಿ ತಹಸೀಲ್ದಾರ ರಮೇಶ ಕೋನರಡ್ಡಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT