ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನರೇಗಾದಡಿ ಕೂಲಿ ಪಾವತಿ 15 ದಿನಕ್ಕೆ ಇಳಿಕೆ’

Last Updated 13 ಮಾರ್ಚ್ 2017, 6:42 IST
ಅಕ್ಷರ ಗಾತ್ರ

ಗದಗ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯಡಿ ಕೂಲಿ ಪಾವತಿ ಅವಧಿಯನ್ನು 33 ದಿನಗಳಿಂದ 15 ದಿನಕ್ಕೆ ಇಳಿಕೆ ಮಾಡ ಲಾಗಿದೆ. ಈ ಅವಧಿ ಮೀರಿದರೆ, ಬಾಕಿ ಯಿರುವ ಕೂಲಿ ಹಣಕ್ಕೆ ಶೇ 0.5 ರಷ್ಟು ಬಡ್ಡಿ ಸೇರಿಸಿ ಪಾವತಿಸಲು ನಿರ್ಣಯಿಸ ಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ನರೇಗಲ್‌ನಿಂದ ನಾರಾಯಣಪುರ ಮೂಲಕ ಹರಿಯುವ ಹುಲಗಿ ಹಳ್ಳಕ್ಕೆ ಕಟ್ಟಲಾದ ಚೆಕ್ ಡ್ಯಾಂ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಸುಮಾರು 1,500ಕ್ಕೂ ಹೆಚ್ಚು ಕೂಲಿ ಕಾರ್ಮಿಕ ರಿಂದ ನಡೆಯುತ್ತಿರುವ ಹೂಳೆತ್ತುವ ಕಾಮಗಾರಿಯನ್ನು ಭಾನುವಾರ ವೀಕ್ಷಿಸಿ ಅವರು ಮಾತನಾಡಿದರು.

‘ಈ ವರ್ಷ ಮಳೆ, ಬೆಳೆ ಇಲ್ಲ. ದುಡ್ಯಾಕ ಕೆಲ್ಸನೂ ಇಲ್ಲಾಂದ್ರ ಜೀವನ ಭಾಳ ಕಷ್ಟ ಆಗ್ತೈತಿ. ಅದಕ್ಕ ನಮಗ್ ಮಳೆಗಾಲ ಬರೋವರೆಗೂ ಕೆಲಸ ಕೊಡಸ್ರೀ’ ಎಂದು ಕೂಲಿ ಕಾರ್ಮಿಕರು ಸಚಿವರ ಎದುರು ಅಳಲು ತೋಡಿ ಕೊಂಡರು.

ಅಧಿಕಾರಿಗಳ ತರಾಟೆ: ಬಿಂಕದಕಟ್ಟಿ, ಹಿರೇಹಂದಿಗೋಳ ಪ್ರದೇಶದಲ್ಲಿ ಜಮೀ ನಿನಲ್ಲಿ ನೀರು ಇಂಗುವಿಕೆ ಮೂಲಕ ಅಂತರ್ಜಲ ಸಂಗ್ರಹ ಸಂರಕ್ಷಣೆಯ ಬದು ನಿರ್ಮಾಣ ದೊಡ್ಡ ಪ್ರಮಾಣದ ಕಾಮ ಗಾರಿ ಕೈಕೊಳ್ಳಲಾಗಿದೆ. ಕಾಮಗಾರಿ ಗಳನ್ನು ಪರಿಶೀಲಿಸಿದ ಸಚಿವ ಎಚ್‌.ಕೆ. ಪಾಟೀಲ ಅವರು, ಕೂಲಿ ಕಾರ್ಮಿಕರ ಕುಟುಂಬದ ಮಕ್ಕಳಿಗೆ ನೆರಳು, ನೀರು ಮತ್ತು ಆಟದ ವಸ್ತುಗಳಿರುವ ಸೌಲಭ್ಯಕ್ಕೆ ಟ್ರ್ಯಾಕ್ಟರ್‌ ಟ್ರೇಲರ್‌ ಬಳಸಬೇಕು. ಈ ಕುರಿತು ನೀಡಿದ ಸೂಚನೆಗಳನ್ನು ಪಾಲಿ ಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೋಟುಮಚಗಿ ಗ್ರಾಮ ಪಂಚಾಯ್ತಿ ಪಿಡಿಓ ರಾಜಕುಮಾರ, ನರೇಗಾ ಗದಗ ತಾಲ್ಲೂಕು ಎಡಿ ಮೌನೇಶ ಬಡಿಗೇರ ಸೇರಿ ಹಲವು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ವಿವಿಧ ಸೌಲಭ್ಯಗಳನ್ನು ಒದಗಿಸಲು ನಿರ್ದೇಶನವಿದ್ದರೂ ಆಯಾ ಸ್ಥಳದಲ್ಲಿ ಮಕ್ಕಳಿಗೆ ಸರಿಯಾದ ಸೌಕರ್ಯ ಒದಗಿ ಸಿಲ್ಲ. ಈ ಕುರಿತು ನಿರ್ಲಕ್ಷ್ಯ ವಹಿಸಿದರೆ, ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟೀಸ್‌ ಜಾರಿ ಮಾಡುವುದು. ತಕ್ಷಣವೇ ಮಕ್ಕಳಿಗೆ ನೆರಳಿನ ಹಾಗೂ ಅವರನ್ನು ನೋಡಿಕೊಳ್ಳಲು ಒಬ್ಬ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಸ್ಥಳದಲ್ಲಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಚವ್ಹಾಣ ಅವರಿಗೆ ಸೂಚಿಸಿದರು.

ಕೆಲಸಗಾರರಿಗೆ ಸಮೀಪದಲ್ಲಿರುವ ಶುದ್ಧ ನೀರಿನ ಘಟಕದಿಂದ ಕುಡಿಯವ ನೀರು ಪೂರೈಸಬೇಕು. ತುರ್ತು ಚಿಕಿತ್ಸೆಗೆ ವೈದ್ಯರು ನಿಗದಿತ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡುವಂತೆ ಸೂಕ್ತ ಕ್ರಮ ಕೈಗೊ ಳ್ಳಬೇಕು ಎಂದು ಸಚಿವರು ತಿಳಿಸಿದರು.

ಮಾ.13 ರಿಂದ ಕೆಲಸ ಮಾಡುವ ಸ್ಥಳದಲ್ಲಿ ಸೌಲಭ್ಯಗಳನ್ನು ಒದಗಿಸದಿದ್ದರೆ, ಈ ಕುರಿತು ಮೊಬೈಲ್‌ನಲ್ಲಿ ಫೋಟೋ ಹಾಗೂ ವಿಡಿಯೋ ಮಾಡಿ, ನಮ್ಮ ಗಮನಕ್ಕೆ ತರಬೇಕು. ನಿರ್ಲಕ್ಷ್ಯ ತೋರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ಎಂದು ಸಚಿವ ಎಚ್.ಕೆ.ಪಾಟೀಲ ಕಾರ್ಮಿಕರಿಗೆ ಭರವಸೆ ನೀಡಿದರು.

ಏ.1ರಿಂದ ಕೂಲಿ ಹಣ ಹೆಚ್ಚಳ: ಗ್ರಾಮೀಣ ಜನರಿಗೆ ಕೃಷಿ ಚಟುವಟಿಕೆ ಪ್ರಾರಂಭವಾಗುವವರೆಗೆ ಉದ್ಯೋಗ, ಸಮರ್ಪಕ ನೀರು ಪೂರೈಕೆ ಹಾಗೂ ಜಾನುವಾರಗಳಿಗೆ ಮೇವು ಒದಗಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಕೊಳ್ಳುತ್ತಿದೆ. ಏ.1 ರಿಂದ ಕೂಲಿ ಹಣ ವನ್ನು ₹ 224 ದಿಂದ ₹ 236ಕ್ಕೆ ಹೆಚ್ಚಿಸ ಲಾಗುವುದು. ರಾಜ್ಯ ಸರ್ಕಾರ ಖಾತ್ರಿ ಯೋಜನೆಯಡಿ ಕಾರ್ಮಿಕರಿಗೆ ಕೂಲಿ ನೀಡುವ ಉದ್ದೇಶದಿಂದ ಮುಂಗಡ ವಾಗಿ ₹ 900 ಕೋಟಿ ಅನುದಾನ ನೀಡಿದೆ. ಕೋಟುಮಚಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಉದ್ಯೋಗ ಸೃಷ್ಠಿಯ ಜತೆಗೆ ನೀರಿನ ಇಂಗುವಿಕೆ ಮೂಲಕ ಅಂತರ್ಜಲ ಸಂವರ್ಧನೆ ₹ 8 ಕೋಟಿ ಅನುದಾನದಲ್ಲಿ ರೈತರ ಜಮೀನು ಗಳಿಗೆ ಬದುನಿರ್ಮಾಣ ಕಾಮಗಾರಿ ಗಳನ್ನು ಈ ಯೋಜನೆಯಡಿ ಕೈಗೆತ್ತಿಕೊಳ್ಳ ಲಾಗುವುದು ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ, ಕೆಸಿಸಿ ಬ್ಯಾಂಕ್‌ ಅಧ್ಯಕ್ಷ ಐ.ಎಸ್.ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದು ಪಾಟೀಲ,  ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿ ಕಾರಿ ಎಚ್.ಎಸ್.ಜನಗಾ, ಸದಸ್ಯ ವಿದ್ಯಾಧರ ದೊಡ್ಡಮನಿ, ಮಾಜಿ ಶಾಸಕ ಡಿ.ಆರ್.ಪಾಟೀಲ, ಕೋಟುಮಚಗಿ ಪಂಚಾಯ್ತಿ ಅಧ್ಯಕ್ಷ ಶರಣಪ್ಪ ಮ್ಯಾಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT