ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ್ಯ ಸರ್ಕಾರ ಕೇಂದ್ರದ ಕಣ್ಣು ತೆರೆಸಲಿ’

ಮಹಾದಾಯಿ ಧರಣಿ 565ನೇ ದಿನಕ್ಕೆ : ಜನಪ್ರತಿನಿಧಿಗಳಿಗೆ ಅರಿವು ಅಗತ್ಯ
Last Updated 31 ಜನವರಿ 2017, 5:34 IST
ಅಕ್ಷರ ಗಾತ್ರ

ನರಗುಂದ: ಮಹಾದಾಯಿ ಹೋರಾಟ ವನ್ನು  ತೀವ್ರ ಲಘುವಾಗಿ ಪರಿಗಣಿಸು ತ್ತಿರುವ ಉಭಯ ಸರ್ಕಾರಗಳಿಗೆ ನಮ್ಮ ಏಳ್ಗೆ ಬೇಕಿಲ್ಲ. ಮೂರು ತಿಂಗಳು ಗತಿಸಿದರೆ ಎರಡು ವರ್ಷಕ್ಕೆ ಹೋರಾಟ ಕಾಲಿಡುತ್ತಿದ್ದೇವೆ. ಇದಕ್ಕೆ ಪ್ರಧಾನಿಗಳು ಕೂಡಲೇ ಸ್ಪಂದಿಸಬೇಕು. ಇಲ್ಲವಾದರೆ ಎರಡನೇ ವರ್ಷದ ದಿನದಂದು ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಮಹಾದಾಯಿ ಹೋರಾಟ ಸಮಿತಿ ಕೋಶಾಧ್ಯಕ್ಷ ಎಸ್‌.ಬಿ.ಜೋಗಣ್ಣವರ ಎಚ್ಚರಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹಾ ದಾಯಿ ಧರಣಿಯ 565ನೇದಿನವಾದ ಸೋಮವಾರ ಮಾತನಾಡಿದರು. ರೈತರು ಸಿಡಿದೆದ್ದರೇ ಯಾರೂ ಉಳಿಯುವುದಿಲ್ಲ. ಆದ್ದರಿಂದ ಸಿಡಿದೇಳುವ ಮೊದಲು ರಾಜ್ಯ ಸರ್ಕಾರ ಮಾಡಬೇಕಾದ ಎಲ್ಲ ಪ್ರಯತ್ನ ಮಾಡಿ, ಕೇಂದ್ರದ ಕಣ್ಣು ತೆರೆಸಬೇಕು. ಇಲ್ಲವಾ ದರೆ ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿಎದುರಿಸಿ ಎಂದರು. 

ಮಹದಾಯಿ ಹೋರಾಟ ಸಮಿತಿ  ಉಪಾಧ್ಯಕ್ಷ ಪರಶುರಾಮ ಜಂಬಗಿ ಮಾತನಾಡಿ ಮಹಾದಾಯಿ ಯೋಜನೆಗೆ ಎಲ್ಲ ಸಮುದಾಯ ಒಂದಾಗಬೇಕಿದೆ. ನಾಡಿನುದ್ದಕ್ಕೂ  ಈಗಾಗಲೇ ಬೆಂಬಲ ವ್ಯಕ್ತವಾದರೂ ಅದು ಆಟಕ್ಕುಂಟು ಲೆಕ್ಕ ಕ್ಕಿಲ್ಲ ಎಂಬಂತಾಗಿದೆ. ಇದುಸಲ್ಲದು. ತಮಿ ಳುನಾಡಿನ ಒಕ್ಕಟ್ಟು ಇಲ್ಲಿ ಬರಬೇಕಿದೆ ಎಂದರು.

ಪ್ರತಿಯೊಬ್ಬ ಜನಪ್ರತಿನಿಧಿಯೂ ರೈತರ ಬೆಂಬಲ ಇಲ್ಲದೇ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇದನ್ನು ಅರಿಯುವ ಮೂಲಕ ರೈತರ ಬೇಡಿಕೆ ಈಡೇರಿಸಲು ಅವರು ಮುಂದಾಗಬೇಕು. ಇದನ್ನೂ ಯಾರಿಂದಲೂ ಹೇಳಿಸಿಕೊಳ್ಳಬಾರದು. ಇದು ತಕ್ಕುದಲ್ಲ. ಇದರ ಬಗ್ಗೆ ಯಾವ ರೀತಿ ಒತ್ತಡ ಹೇರಬೇಕು. ಅದು ಮೊದಲು ನಡೆಯಬೇಕಾಗಿದೆ ಎಂದರು.

ವೀರಬಸಪ್ಪ ಹೂಗಾರ, ಬಸಮ್ಮ ಐನಾಪೂರ, ಪುಂಡಲೀಕ ಯಾದವ, ವಾಸು ಚವ್ಹಾಣ, ಎಸ್.ಕೆ.ಗಿರಿ ಯಣ್ಣವರ, ಕೆ.ಎಚ್. ಮೊರಬದ. ಎಲ್.ಬಿ.ಮುನೇನ ಕೊಪ್ಪ, ಎಸ್‌.ಬಿ. ಕೊಣ್ಣೂರು,ಸಿದ್ದಪ್ಪ ಚಂದ್ರತ್ನ ವರ, ಈರಣ್ಣ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT