ಗದಗ: ಮಹಿಳೆ ತನ್ನ ಸಕಾರಾತ್ಮಕ ಪಾತ್ರದಿಂದ ಕುಟುಂಬ, ಸಮಾಜದ ಸುಧಾರಣೆ ಮಾಡಬಲ್ಲಳು ಎಂದು ಜಮಾತೆ ಇಸ್ಲಾಮಿ ಹಿಂದ್ ಮಹಿಳಾ ಘಟಕದ ರಾಜ್ಯ ಸಂಚಾಲಕಿ ಸಾಜಿದಾ ಲಾಲ್ಮಿಯಾ ಹೇಳಿದರು.

ಇಲ್ಲಿನ ತಾಜ್ ನಗರದ ಹಿರಾ ಇಸ್ಲಾಮಿಕ್ ಸೆಂಟರ್‌ನಲ್ಲಿ ‘ಮಹಿಳೆ -ಮಾನವೀಯತೆಯ ಶಿಲ್ಪಿ’ ವಿಷಯವಾಗಿ ಏರ್ಪಡಿಸಿದ್ದ ತಾಲ್ಲೂಕು ಸಮ್ಮೇಳನದಲ್ಲಿ ಮಾತನಾಡಿ, ಮಹಿಳೆ ತನ್ನ ಉನ್ನತ ವ್ಯಕ್ತಿತ್ವದ ಪ್ರಭಾವದಿಂದಾಗಿ ಕುಟುಂಬ, ಸಮಾಜವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದ್ದಾಳೆ ಎಂದರು.

ಧಾರವಾಡ ಜಿಲ್ಲಾ ಜಮಾತೆ ಇಸ್ಲಾಮಿ ಹಿಂದ್ ಮಹಿಳಾ ಸಂಚಾಲಕಿ ತಾಹೀರಾ ಅಂಜುಮ್ ಮಾತನಾಡಿ, ನೈತಿಕತೆಯು ಇತ್ತೀಚಿನ ದಿನಗಳಲ್ಲಿ ಮೌಲ್ಯ ಕಳೆದುಕೊಳ್ಳುತ್ತಿದೆ, ಮಹಿಳೆ ಪರಿಸ್ಥಿತಿಯ ಕೈಗೊಂಬೆಯಾಗುತ್ತಿದ್ದಾಳೆ. ಇದು ನಿಲ್ಲಬೇಕು, ಮಹಿಳೆಯರು ಜಾಗೃತರಾಗಬೇಕು ಎಂದರು.

ಜಮಾತೆ ಇಸ್ಲಾಮಿ ಹಿಂದ್ ಹುಬ್ಬಳ್ಳಿಯ ಮಹಿಳಾ ಸಂಚಾಲಕಿ ಸಲ್ಮಾ ಶೇಖ, ರಾಬಿಯಾ ಯರಗಟ್ಟಿ, ಸೂಫಿಯಾ ಮುಲ್ಲಾ, ತಾಹೀರಾಬೇಗಂ ಶಿರಹಟ್ಟ ಮಾತನಾಡಿದರು. ಮುನವ್ವರ್ ಸುಲ್ತಾನಾ ಶಿರಹಟ್ಟಿ ಕುರಾನ ಪಠಿಸಿದರು. ಸೂಫಿಯಾ ಮುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ರಿಜ್ವಾನಾ ಮಕಾನದಾರ ನಿರೂಪಿಸಿದರು. ಮೆಹಬೂಬಿ ಧಾರವಾಡ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.