ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಉಸಿರುಗಟ್ಟಿ 38 ಮಂಗಗಳ ಸಾವು; ಪ್ರಾಥಮಿಕ ತನಿಖೆಯಿಂದ ಬಯಲು

ದಂಪತಿಗೆ ₹ 40 ಸಾವಿರ ಹಣ: ಡಿ.ಸಿ
Last Updated 2 ಆಗಸ್ಟ್ 2021, 15:27 IST
ಅಕ್ಷರ ಗಾತ್ರ

ಹಾಸನ: ಬೇಲೂರು ತಾಲ್ಲೂಕು ಚೌಡನಹಳ್ಳಿಯಲ್ಲಿ ಜುಲೈ 28 ರ ರಾತ್ರಿ ನಡೆದಿದ್ದ ಮಂಗಗಳ ಹತ್ಯೆ ಪ್ರಕರಣವನ್ನು ಪೊಲೀಸ್ ಹಾಗೂ ಅರಣ್ಯ ಇಲಾಖೆ ಭೇದಿಸಿದ್ದು, ಉಸಿರುಗಟ್ಟಿ 38ಮಂಗಗಳು ಸಾವನ್ನಪ್ಪಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್ ಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿಕೆ.ಎನ್.ಬಸವರಾಜ್‌ ಜತೆ ಸೋಮವಾರ ಸುದ್ದಿಗೋಷ್ಟಿ ನಡೆಸಿದ ಜಿಲ್ಲಾಧಿಕಾರಿ ಆರ್‌.ಗಿರೀಶ್, ಪೊಲೀಸ್ಇಲಾಖೆ ಐವರು ಮತ್ತು ಅರಣ್ಯ ಇಲಾಖೆ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಹಾಸನ ತಾಲ್ಲೂಕಿನಉಗನೆ, ಕ್ಯಾತನಹಳ್ಳಿ ಗ್ರಾಮಗಳಲ್ಲಿ ಕೋತಿಗಳು ಕಾಟ ಕೊಡುತ್ತಿವೆ ಎಂದು ಅವುಗಳನ್ನು ಸಾಮೂಹಿಕವಾಗಿ ಉಪಾಯದಿಂದ ಹಿಡಿದು ಸ್ಥಳಾಂತರ ಮಾಡುವ ಸಂದರ್ಭದಲ್ಲಿಉಸಿರುಗಟ್ಟಿ ಮೃತಪಟ್ಟಿವೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಕರಣ ಸಂಬಂಧ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದರು.

‌ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‍ಗೌಡ ಮಾತನಾಡಿ, ಕೋತಿಗಳನ್ನು ಹಿಡಿಯುವಬಾಣಾವರದ ದಂಪತಿಯನ್ನು ಸುಮಾರು ₹ 40 ಸಾವಿರ ಹಣ ನೀಡಿಉಗನೆ ಗ್ರಾಮಕ್ಕೆ ಕರೆಸಿಕೊಳ್ಳಲಾಗಿತ್ತು. 50 ಕ್ಕೂ ಹೆಚ್ಚು ಮಂಗಗಳನ್ನು ಒಂದೇ ಚೀಲನಲ್ಲಿ ತುಂಬಿ ಸಾಗಿಸುವ ವೇಳೆ 38 ಮಂಗ ಮೃತಪಟ್ಟಿದ್ದರೆ, 15 ಮಂಗಗಳು ಓಡಿ ಹೋಗಿವೆ. ನಿತ್ರಾಣ ಸ್ಥಿತಿಯಲ್ಲಿದ್ದ 1 ಮಂಗಕ್ಕೆ ಚಿಕಿತ್ಸೆ ನೀಡಲಾಗಿದೆ. ಮರಣೋತ್ತರ ಪರೀಕ್ಷೆ ಮತ್ತು ಎಫ್‍ಎಸ್‍ಎಲ್ ವರದಿಗಾಗಿ ಕಾಯಲಾಗುತ್ತಿದೆ ಎಂದರು.

ಡಿಎಫ್‍ಒ ಕೆ.ಎನ್.ಬಸವರಾಜು ಮಾತನಾಡಿ, ಬಾನೆಟ್ ಮೆಕಾಕ್ ಜಾತಿಯಮಂಗಗಳ ಸಾವಿನ ತನಿಖೆ ಆರಂಭಿಸಿದಾಗ, ಮೊದಲು ಕೋತಿ ಹಿಡಿಯುತ್ತಿದ್ದ ನಾಲ್ಕ ಜನರ ಪಟ್ಟಿ ಸಿದ್ಧ ಮಾಡಿದೆವು. ಈ ಪೈಕಿ ಬಾಣಾವರದ ದಂಪತಿ ರಾಮು-ಯಶೋಧ ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೋತಿಗಳ ಸಾಮೂಹಿಕ ಹತ್ಯೆ ರಹಸ್ಯ ಬಯಲಾಯಿತು ಎಂದರು.

ಅರಣ್ಯ ಇಲಾಖೆಯಿಂದ ರಾಮಾನುಜ ಅಯ್ಯಂಗಾರ್ ಮತ್ತು ಶ್ರೀಕಾಂತ್ ಎಂಬುವರನ್ನು ಬಂಧಿಸಲಾಗಿದೆ. ಕ್ಯಾತನಹಳ್ಳಿಯ 6 ಮಂದಿ ಮತ್ತು ಉಗನೆಯ 15 ಜನರಿಂದ ಕೋತಿ ಹಿಡಿಯುವವರಿಗೆ ಹಣ ನೀಡುವ ಉದ್ದೇಶದಿಂದ ₹ 40 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹ ಮಾಡಲಾಗಿತ್ತು. ನಂತರ ಕೋತಿ ಸೆರೆಯಲ್ಲಿ ಪಳಗಿದ್ದ ದಂಪತಿ ಅಡಿಕೆ ಬೊಂಬಿನಲ್ಲಿ ಬೋನ್ ತಯಾರು ಮಾಡಿದ್ದರು. ಅದರೊಳಗೆ ಬಾಳೆಹಣ್ಣು, ಬಿಸ್ಕೆಟ್ ಹಾಕುತ್ತಿದ್ದರು. ಬೋನಿನ ಒಂದು ಮೂಲೆಯಲ್ಲಿ ಹೊರ ಬರಲು ಬಾಗಿಲು ಮಾಡಿ ಅಲ್ಲಿಗೆ ದೊಡ್ಡ ಅಳತೆಯ ಚೀಲ ಕಟ್ಟಿದ್ದರು. ಅದರೊಳಗೆ ಮಂಗಗಳು ಬಂಧಿಯಾಗುತ್ತಿದ್ದಂತೆಯೇ ಟಾಟಾ ಏಸ್ ಗೂಡ್ಸ್ ವಾಹನದಸಹಾಯದಿಂದ ಚೌಡನಹಳ್ಳಿ ಬಳಿ ಸಾಗಿಸಿ ಬಿಸಾಡಿದ್ದರು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT