ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

62 ಸಾವಿರ ಟನ್‌ ಕೊಬ್ಬರಿ ಖರೀದಿ ನಿಗದಿ: ರೈತರ ಆತಂಕ

Published 6 ಫೆಬ್ರುವರಿ 2024, 16:12 IST
Last Updated 6 ಫೆಬ್ರುವರಿ 2024, 16:12 IST
ಅಕ್ಷರ ಗಾತ್ರ

ಹಿರೀಸಾವೆ (ಹಾಸನ ಜಿಲ್ಲೆ): ರಾಜ್ಯದಿಂದ 62 ಸಾವಿರ ಟನ್‌ ಕೊಬ್ಬರಿಯನ್ನಷ್ಟೇ ಖರೀದಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿರುವುದು ತೆಂಗು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಮೊದಲು ಹೆಸರು ನೋಂದಣಿ ಮಾಡಿದವರಿಂದಷ್ಟೇ ಕೊಬ್ಬರಿ ಖರೀದಿಸಲಾಗುತ್ತದೆ ಎಂಬ ಆತಂಕವೂ ರೈತರಿಗೆ ಕಾಡುತ್ತಿದೆ. ಹಾಗಾಗಿ, ಎರಡನೇ ದಿನವಾದ ಮಂಗಳವಾರ ನಾಫೆಡ್ ಖರೀದಿ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ನೋಂದಣಿಗೆ ಸರ್ಕಾರವು 45 ದಿನಗಳ ಸಮಯ ನೀಡಿದೆ.

‘ರೈತರ ಬಳಿ 1 ಲಕ್ಷ ಟನ್‌ಗೂ ಹೆಚ್ಚು ಕೊಬ್ಬರಿ ದಾಸ್ತಾನು ಇದೆ. ನಿಗದಿಪಡಿಸಿರುವ ಪ್ರಮಾಣಕ್ಕಿಂತಲೂ ಹೆಚ್ಚು ಕೊಬ್ಬರಿ ಖರೀದಿಸಲು ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕು’ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಪುಟ್ಟಸ್ವಾಮಿಗೌಡ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT