ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮೇಶ್ವರ ದೇವಾಲಯ ಹುಂಡಿ ಕಳವಿಗೆ ಯತ್ನ: ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಒತ್ತಾಯ

Published 22 ಮಾರ್ಚ್ 2024, 14:31 IST
Last Updated 22 ಮಾರ್ಚ್ 2024, 14:31 IST
ಅಕ್ಷರ ಗಾತ್ರ

ಕೊಣನೂರು: ರಾಮನಾಥಪುರದ ರಾಮೇಶ್ವರಸ್ವಾಮಿ ದೇವಾಲಯದಲ್ಲಿನ ಹುಂಡಿಗೆ ಕನ್ನಹಾಕಲು ಪ್ರಯತ್ನಿಸಲಾಗಿದೆ.

ದೇವಾಲಯದಲ್ಲಿ ಗುರುವಾರ ಸುಮಾರು ರಾತ್ರಿ 8ರಿಂದ 9 ಗಂಟೆ ಸಮಯದಲ್ಲಿ ದೇವಾಲಯದ 2 ಗೇಟ್ ಮತ್ತು 3 ಬಾಗಿಲುಗಳಿಗೆ ಹಾಕಿದ ಬೀಗ ಒಡೆದು ದೇವಾಲಯದ ಒಳಾಂಗಣದಲ್ಲಿ ಇದ್ದ ಗೋಲಕವನ್ನು ಆವರಣಕ್ಕೆ ಎಳೆದುಕೊಂಡು ಬಂದಿದ್ದಾರೆ. ಜೋರಾಗಿ ಶಬ್ದವಾದ ಕಾರಣ ಸಾರ್ವಜನಿಕರು ದೇವಾಲಯದೊಳಗೆ ಬಂದು ನೋಡುವ ವೇಳೆಗೆ ಕಳ್ಳರು ಪರಾರಿಯಾಗಿದ್ದಾರೆ. ನಾಡಕಚೇರಿ ಅಡಳಿತಾಧಿಕಾರಿ ಧರ್ಮೇಶ್‌ , ಕೊಣನೂರು ಪೋಲೀಸ್ ಠಾಣೆಯ ಸಿಬ್ಬಂಂದಿ ಶಿವಣ್ಣ ಮತ್ತು ಅಭಿಷೇಕ್ ಸ್ಥಳ ಪರಿಶೀಲನೆ ನಡೆಸಿದರು.

ಸಿಸಿಟಿವಿ ಕ್ಯಾಮೆರಾಕ್ಕೆ ಅವಡಿಸಲು ಒತ್ತಾಯ: ದೇವಾಲಯವು ಇತ್ತೀಚೆಗೆ ಜೀರ್ಣೋದ್ಧಾರಗೊಂಡು 2 ವರ್ಷಗಳ ನಂತರ ಭಕ್ತರು ಮತ್ತು ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ದೊರೆಯುತ್ತಿರುವುದರಿಂದ ಹುಂಡಿಯಲ್ಲಿ ಹಣ ಜಾಸ್ತಿ ಇರಬಹುದು ಎಂದು ಭಾವಿಸಿ ಕಳ್ಳರು ಅಗಿಂದಾಗ್ಗೆ ದೇವಾಲಯದ ಬೀಗ ಒಡೆದು ಕಳ್ಳತನ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿ ಎಚ್ಚರಿಕೆ ವಹಿಸಬೇಕು. ಸಂಬಂಧಿಸಿದ ಮುಜುರಾಯಿ ಇಲಾಖೆ, ಜಿಲ್ಲಾಧಿಕಾರಿಗಳು, ಮೈಸೂರು ಪ್ರಾಚ್ಯವಸ್ತು ಇಲಾಖೆಯವರು ದೇವಾಲಯಕ್ಕೆ ಉತ್ತಮ ಗುಣಮಟ್ಟದ. 8ರಿಂದ 10 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT