ಬೆಂಕಿ ಆಕಸ್ಮಿಕ: ನಾಲ್ಕು ಮನೆ ಭಸ್ಮ

7
ಹಿರೀಸಾವೆ ಹೋಬಳಿಯ ತಿಮ್ಮಲಾಪುರ: ₹15 ಲಕ್ಷ ನಷ್ಟ

ಬೆಂಕಿ ಆಕಸ್ಮಿಕ: ನಾಲ್ಕು ಮನೆ ಭಸ್ಮ

Published:
Updated:
Deccan Herald

ಹಿರೀಸಾವೆ:  ಹೋಬಳಿಯ ತಿಮ್ಮಲಾಪುರ ಗ್ರಾಮದಲ್ಲಿ ಗುರುವಾರ ಸಂಜೆ ಆಕಸ್ಮಿಕವಾಗಿ ಹೊತ್ತಿದ ಬೆಂಕಿಯಿಂದ ನಾಲ್ಕು ಮನೆಗಳು ಸಂಪೂರ್ಣ ಸುಟ್ಟುಹೋಗಿ, ಸುಮಾರು ₹ 15 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.

ಸಂಜೆ 4 ಗಂಟೆಯಲ್ಲಿ ಅಪ್ಪಣ್ಣಿ ಅವರ ಸೋಗೆ ಮನೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡು, ನಂತರ ಅಕ್ಕಪಕ್ಕದ  ಟಿ.ಎ. ವೆಂಕಟಾಚಲಯ್ಯ, ರಘು ಮತ್ತು ಶಿಕ್ಷಕ ವೆಂಕಟಚಲ ಮನೆಗೆ ತಗುಲಿದೆ.  ಮನೆಯಲ್ಲಿ ದ್ದ ದವಸ ಧಾನ್ಯಗಳು, ಹೊಲಿಗೆ ಯಂತ್ರಗಳು, ಟಿ.ವಿ  ಸೇರಿದಂತೆ ವಿದ್ಯುತ್ ಉಪಕರಣಗಳು, ಬಟ್ಟೆಗಳು, ಅಡುಗೆ ಪಾತ್ರೆಗಳು, ಕೊಬ್ಬರಿ ಮತ್ತು ತೆಂಗಿನ ಕಾಯಿಗಳು, ಮನೆಯ ಪರಿಕರಗಳು ಬೆಂಕಿಯಲ್ಲಿ ಭಸ್ಮವಾಗಿವೆ.

 ಶಿಕ್ಷಕ ವೆಂಕಟಚಲರ ಮನೆಯಲ್ಲಿ ಅವರ ಪುತ್ರ ಕಿರಣ್ ವಾಸವಾಗಿದ್ದರು. ಹೊಸ ಮನೆ ನಿರ್ಮಾಣ ಮಾಡಲು ಬಾಗಿಲು, ಕಿಟಕಿ ಮತ್ತಿತರ ಮರದ ಪರಿಕರಗಳನ್ನು ಜೋಡಿಸಿದ್ದರು. ಎಲ್ಲವೂ ಬೆಂಕಿಯಲ್ಲಿ ಸುಟ್ಟುಹೋಗಿವೆ.

ಘಟನೆ ನಡೆದಾಗ ಮನೆಯ ಸದಸ್ಯರು ತೋಟ ಮತ್ತು ಇತರೆ ಕೆಲಸಕ್ಕೆ ಹೊರಗೆ ಹೋಗಿದ್ದರು. ಬೆಂಕಿ  ಕಂಡ ಸ್ಥಳೀಯರು ಮನೆ ಮತ್ತು  ನೀರಿನ ತೊಟ್ಟಿಯಿಂದ ನೀರು ತಂದು ಸುರಿದು, ಇತರೆ ಮನೆಗಳಿಗೆ ಹರಡುವುನ್ನು ತಪ್ಪಿಸಿದರು. ಚನ್ನರಾಯಪಟ್ಟಣದ ಅಗ್ನಿಶಾಮಕ ವಾಹನ ಬಂದು ಸಂಪೂರ್ಣ ಬೆಂಕಿ ನಂದಿಸಿತು. 

ವೆಂಕಟಚಲ ಮತ್ತು ಮಂಜುಳ ದಂಪತಿಯ ಎರಡು  ವರ್ಷದ ವಿಷ್ಣು ಎಂಬು ಮಗು ಮನೆಯ ಹಾಲ್‌ನ  ಮಂಚದ ಮೇಲೆ ನಿದ್ದೆ ಮಾಡುತ್ತಿತ್ತು. ಸೊಳ್ಳೆ ಪರದೆ ಮತ್ತು ಹಾಸಿಗೆ ಬೆಂಕಿ ತಗುಲಿತ್ತು. ಚನ್ನಕೇಶವ ಎಂಬ ಯುವಕ ಮನೆಯೊಳಗೆ ನುಗ್ಗಿ ಮಗುವನ್ನು ಹೊರಕ್ಕೆ ಎತ್ತುಕೊಂಡು ಬಂದ. 

ಗ್ರಾಮದ ಕೆಲ ಯುವಕರು ಮತ್ತು ಆಟೊ ಚಾಲಕರು ಮನೆಗಳಲ್ಲಿ ಇದ್ದ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮನೆಯಿಂದ ಹೊರಕ್ಕೆ ತಂದು ಹೊಲಗಳ ಕಡೆಗೆ ಎಸೆದು, ಹೆಚ್ಚಿನ ಅನಾಹುತ ತಪ್ಪಿಸಿದರು. 

‘ವಿದ್ಯುತ್‌ ಬಿಲ್ ಪಾವತಿ ಮಾಡಿಲ್ಲ  ಹಾಗೂ ಮೀಟರ್‌ ಅಳವಡಿಸಿಲ್ಲವೆಂದು ಸೆಸ್ಕ್‌ ಸಿಬ್ಬಂದಿ ಬೆಳಿಗ್ಗೆಯಷ್ಟೇ ಸಂಪರ್ಕ ಕಡಿತ ಮಾಡಿದ್ದರು’ ಎಂದು ಮನೆಯವರು ತಿಳಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !