ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹನೀಯರು ಸಮುದಾಯಕ್ಕೆ ಸೀಮಿತರಲ್ಲ’

ಭಗೀರಥ ಜಯಂತಿಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪುನೀತ್ ಅಭಿಮತ
Last Updated 8 ಮೇ 2022, 13:21 IST
ಅಕ್ಷರ ಗಾತ್ರ

ಹಾಸನ: ‘ಮಹನೀಯರ ಜಯಂತಿಗಳು ಒಂದು ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸಬಾರದು’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಪುನೀತ್ಹೇಳಿದರು.

ನಗರದ ಕಲಾಭವನದಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಏರ್ಪಡಿಸಿದ್ದ ಭಗೀರಥ ಜಯಂತಿ ಅಧ್ಯಕ್ಷತೆವಹಿಸಿ ಮಾತನಾಡಿದರು.

‘ಭಗೀರಥರ ಸಂದೇಶಗಳು ಇಂದಿಗೂ ಪ್ರಸ್ತುತ. ಅವರ ವಿಚಾರಗಳನ್ನು ಎಲ್ಲಾ ವರ್ಗಗಳಸಮುದಾಯದವರು ಅರಿತು, ಬಾಳಬೇಕು. ನಮಗಾಗಿ ಬದುಕದೆ ಸಮಾಜಕ್ಕಾಗಿಬದುಕಬೇಕು ಎಂಬುದು ಭಗೀರಥರ ಮೂಲ ಉದ್ದೇಶವಾಗಿದ್ದು, ಅದಕ್ಕಾಗಿಯೇ ಅವರುಭೂಮಿಗೆ ಗಂಗೆ ತಂದಿದ್ದಾರೆ’ ಎಂದರು.

ವಿಶೇಷ ಉಪನ್ಯಾಸ ನೀಡಿದ ಡಾ.ಸೀ.ಚ. ಯತೀಶ್ವರ, ‘ಮಹಾನ್ ವ್ಯಕ್ತಿಗಳನ್ನು ಪೂಜೆಗೆ ಮಾತ್ರ ಸೀಮಿತಗೊಳಿಸದೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಜೀವನದ ಬಗ್ಗೆ ಸಂಪೂರ್ಣವಾಗಿ ತಿಳಿಯಬೇಕು. ಆಗ ಮಾತ್ರ ಇಂತಹ ಆಚರಣೆಗಳಿಗೆ ಅರ್ಥ ಸಿಗುತ್ತದೆ’ ಎಂದು ಸಲಹೆ ನೀಡಿದರು.

‘ಯಾವುದೇ ಸಾಧನೆಗೆ ಶ್ರಮ ಅಗತ್ಯ. ಭಗೀರಥರು ಗಂಗೆಯನ್ನು ದೇವಲೋಕದಿಂದಭೂಮಿಗೆ ಇಳಿಸಿದ ಸಾಧನೆ ಅಸಾಧ್ಯವಾದದ್ದು. ಅದನ್ನು ಮಾಡಿಯೇ ತೀರಿದ ಅವರುಮಹಾನ್ ಪುರುಷರು, ಆಧುನಿಕ ಜೀವನಕ್ಕೆ ಭಗೀರಥರ ಆದರ್ಶ ಮುಖ್ಯ. ಅವರಂತೆಮಾನಸಿಕ, ದೈಹಿಕವಾಗಿ ಯುವ ಪೀಳಿಗೆ ಸದೃಢವಾಗಬೇಕಿದೆ. ಸಮಾಜಕ್ಕಾಗಿಬದುಕಬೇಕು’ ಎಂದು ಕರೆ ನೀಡಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈ.ಕೃಷ್ಣೇಗೌಡಮಾತನಾಡಿ, ‘ಇಂದಿನ ಪೀಳಿಗೆಯ ಮಕ್ಕಳು ಪುಸ್ತಕ ಓದುವ ಮೂಲಕ ಉತ್ತಮ ಜ್ಞಾನ ಪಡೆದುಕೊಳ್ಳಬಹುದಾಗಿದ್ದು, ಮಹನೀಯರ ಬಗ್ಗೆ ಓದಿ ಅರ್ಥೈಸಿಕೊಳ್ಳುವುದು ಬಹಳ ಮುಖ್ಯ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಡಾ.ಎಂ.ಡಿ.ಸುದರ್ಶನ್, ಉಪ್ಪಾರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಜೆ. ನೀಲಪ್ಪ, ನಗರಸಭೆ ಸದಸ್ಯ ಎಂ.ಚಂದ್ರೇಗೌಡ, ಸ್ವಾತಂತ್ರ ಹೋರಾಟಗಾರ ಎಚ್.ಎಂ. ಶಿವಣ್ಣ, ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಒ.ಮಹಾಂತಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT